ಎಸ್‌ಎಂಎಸ್ ಕಾಲೇಜು, ಬ್ರಹ್ಮಾವರದಲ್ಲಿ 49 ಕಿಲೋವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಉದ್ಘಾಟನೆ

ಎಸ್‌ಎಂಎಸ್ ಕಾಲೇಜು, ಬ್ರಹ್ಮಾವರದಲ್ಲಿ 49 ಕಿಲೋವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಉದ್ಘಾಟನೆ

0Shares

ಬ್ರಹ್ಮಾವರ: ಇಲ್ಲಿನ ಎಸ್‌ಎಂಎಸ್ ಕಾಲೇಜು, ಬ್ರಹ್ಮಾವರದಲ್ಲಿ 49 ಕಿಲೋವಾಟ್ ಸಾಮರ್ಥ್ಯದ ಸೌರ ಆನ್-ಗ್ರಿಡ್ ಪವರ್ ಪ್ಲಾಂಟ್ ಉದ್ಘಾಟನಾ ಸಮಾರಂಭವು ವಿಜೃಂಭಣೆಯಿಂದ ನೆರವೇರಿತು. ಒಟ್ಟು ರೂ.16 ಲಕ್ಷ ವೆಚ್ಚದಲ್ಲಿ ಯೋಜನೆ ಜಾರಿಗೊಂಡಿದ್ದು, ಕೆನರಾ ಬ್ಯಾಂಕ್ ವತಿಯಿಂದ ಸಿಆರ್‌ಎಸ್ ನಿಧಿಯಿಂದ ರೂ.10 ಲಕ್ಷ ಹಾಗೂ ಕಾಲೇಜು ಆಡಳಿತ ಮಂಡಳಿಯಿಂದ ರೂ.6 ಲಕ್ಷ ಅನುದಾನ ನೀಡಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೆವ್. ಫಾ. ಎಂ.ಸಿ. ಮಥಾಯಿ ವಹಿಸಿದ್ದರು. ಕೆನರಾ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಹಾಗೂ ವಲಯ ಮುಖ್ಯಸ್ಥರಾದ ಶ್ರೀ ಎಚ್.ಕೆ. ಗಂಗಾಧರ್ ಘಟಕವನ್ನು ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಳೆ ವಿದ್ಯಾರ್ಥಿ ಹಾಗೂ ಕೆನರಾ ಬ್ಯಾಂಕ್ ಮುಖ್ಯ ಕಚೇರಿ, ಮಣಿಪಾಲದ ಜನರಲ್ ಮ್ಯಾನೇಜರ್ ಶ್ರೀ ಬಿ. ಸುಧಾಕರ್ ಕೋಟಾರಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿ, ತಮ್ಮ ವಿದ್ಯಾರ್ಥಿ ದಿನಗಳ ನೆನಪುಗಳನ್ನು ಹಂಚಿಕೊಂಡರು.

ಗೌರವ ಅತಿಥಿಯಾಗಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ, ಉಡುಪಿ ಉಪ ಮಹಾ ಪ್ರಬಂಧಕರಾದ ಶ್ರೀ ಮಹಾಮಾಯ ಪ್ರಸಾದ್ ರಾಯ್ ಉಪಸ್ಥಿತರಿದ್ದರು.ವಿಶೇಷ ಆಹ್ವಾನಿತರಾಗಿ ಪ್ರಾದೇಶಿಕ ಕಚೇರಿ, ಉಡುಪಿ ವಿಭಾಗೀಯ ವ್ಯವಸ್ಥಾಪಕರಾದ ಶ್ರೀ ಕಾರ್ತಿಕೇಯನ್, ಓಎಸ್‌ಸಿಇಎಸ್ ಬ್ರಹ್ಮಾವರದ ಕಾರ್ಯದರ್ಶಿಗಳಾದ ಶ್ರೀ ಅಲ್ವಾರಿಸ್ ಡಿ’ಸಿಲ್ವಾ ಹಾಗೂ ಶ್ರೀ ಅಲನ್ ರೋಹನ್ ವಾಝ್, ಕೆನರಾ ಬ್ಯಾಂಕ್ ಬ್ರಹ್ಮಾವರ ಶಾಖಾ ವ್ಯವಸ್ಥಾಪಕರಾದ ಶ್ರೀ ಶ್ರೀಕಾಂತ್ ಸಾನಿಲ್, ಹಳೆ ವಿದ್ಯಾರ್ಥಿ ಹಾಗೂ ನಿವೃತ್ತ ಪ್ರಾಧ್ಯಾಪಕರಾದ ಡಾ. ಜಯರಾಮ ಶೆಟ್ಟಿಗಾರ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮತ್ತು ಜೆಎನ್‌ಯು ನವದೆಹಲಿ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಸಖರಾಮ ಸೋಮಯಾಜಿ ಉಪಸ್ಥಿತರಿದ್ದರು.

ಕಾರ್ಯಕ್ರಮವು ಕು. ಚಂದನಾ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ವಿಘ್ನೇಶ್ ಪಡಿಯರ್ ಸ್ವಾಗತಿಸಿದರು. ಪ್ರಾಂಶುಪಾಲರಾದ ಡಾ. ರಾಬರ್ಟ್ ರೋಡ್ರಿಗ್ಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಯೋಜಕರಾದ ಶ್ರೀ ಅಶ್ವಿನ್ ಶೆಟ್ಟಿ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮವನ್ನು ಡಾ. ಭರತ್ ರಾಜ್ ಎಸ್. ನೇಜರ್ ನಿರೂಪಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now