
ಉಡುಪಿ. ಫೆಬ್ರವರಿ.14 :- ಅಂಬಲಪಾಡಿ ಜಂಕ್ಷನ್ ಬಳಿ ತಡ ರಾತ್ರಿ ಅಪರಿಚಿತ ಮಾನಸಿಕ ಮಹಿಳೆ ಅಸಹಾಯಕ ಸ್ಥಿತಿಯಲ್ಲಿ ಇದ್ದು ವಿಷಯ ತಿಳಿದ ವಿಶುಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ ಸಖಿ ಸೆಂಟರ್ ಗೆ ದಾಖಲಿಸಿ ತದನಂತರ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.
ಮಹಿಳೆ ತನ್ನ ಹೆಸರು ಕವಿತಾ ಮಹಾರಾಷ್ಟ್ರದ ಸತಾರ ಜಿಲ್ಲೆಯ ಕಟಾವು ತಾಲೂಕಿನ ಪಚವಾಡ ಗ್ರಾಮದವಳೆಂಬ ಮಾಹಿತಿ ನೀಡಿದ್ದಾಳೆ· ನಾನು ನನ್ನ ಮನೆಯನ್ನು ಹುಡುಕುತ್ತಿದ್ದೇನೆ. ಸಮಸ್ಯೆ ಮಾಡಬೇಡಿ ಎಂದು ರಕ್ಷಣಾ ಸಮಯದಲ್ಲಿ ಕೂಗಾಡಿದ್ದಾಳೆ. ಮನೆ ಬಿಟ್ಟು ಬಾಳ ಸಮಯವಾಗಿರುವಂತೆ ತೋರಿ ಬರುತ್ತಿದ್ದು ಸಂಬಂಧಿಕರು ಜಿಲ್ಲಾ ಆಸ್ಪತ್ರೆ ಅಥವಾ ಸಖಿ ಸೆಂಟರ್ ಸಂಪರ್ಕಿಸುವಂತೆ ವಿಶುಶೆಟ್ಟಿ ಮನವಿ ಮಾಡಿದ್ದಾರೆ. ರಕ್ಷಣಾ ಸಮಯ ನಗರ ಠಾಣೆಯ ಎಚ್ ಸಿ ರಮೇಶ್ ಶಶಿಕಾಂತ್ ಉಪಾಧ್ಯಾಯ ಅಂಬಲಪಾಡಿ ಹರೀಶ್ ಉದ್ಯಾವರ ಸಹಕರಿಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now