
ಉಡುಪಿ (ನಂದಿಕೂರು) ಕೆಮುಂಡೇಲ್ ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಾನ (ರಿ.) ಉಳ್ಳೂರು ಇಲ್ಲಿಯ 19ನೇ ವರ್ಷದ ವಾರ್ಷಿಕ ಪ್ರತಿಷ್ಟಾ ವರ್ಧಂತಿ ಉತ್ಸವ ಕಳೆದ ಭಾನುವಾರ (ಫೆ.01) ವಿಜೃಂಭಣೆಯಿಂದ ನೆರವೇರಿತು. ಈ ಸಂಧರ್ಭದಲ್ಲಿ ಅರ್ಚಕ ದಿನೇಶ್ ಶಾಂತಿ ನೇತೃತ್ವದಲ್ಲಿ ಶ್ರೀ ಕ್ಷೇತ್ರದಲ್ಲಿ ಪುಣ್ಯಾಹ ವಾಚನದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು ಚಂಡಿಕಾಯಾಗ ನೆರವೇರಿತು. ಸಂಜೆ ಶ್ರೀದುರ್ಗೆಯ ರಂಗಪೂಜೆ, ಪಾಂಡುರಂಗ ಭಜನಾ ಮಂಡಳಿ ಕೆಮುಂಡೇಲು, ಶ್ರೀ ನಾರಾಯಣಗುರು ಭಜನಾ ಮಂಡಳಿ ಮುದರಂಗಡಿ, ಶ್ರೀ ವರ ಸಿದ್ದಿವಿನಾಯಕ ಭಜನಾ ಮಂಡಳಿ ಪಲಿಮಾರು ಇವರಿಂದ ಭಜನಾ ಸೇವೆ ನೆರವೇರಿತು.
ಪ್ರತಿವರ್ಷದಂತೆ ಸಭಾಕ್ರಾರ್ಯಕ್ರಮದಲ್ಲಿ ವಿದ್ಯಾಥಿಗಳ ದತ್ತು ಸ್ವೀಕಾರ, ದತ್ತಿನಿಧಿ, ವಿದ್ಯಾಥಿ ವೇತನ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‌ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜೆ.ಸುವರ್ಣ, ಎರ್ಮಾಳು ಬರ್ಪಾಣಿ ಸಂತೋಷ್ ಶೆಟ್ಟಿ, ವೀಣಾ ಮುಂಬಯಿ, ಡಾ| ಹೇಮಲತಾ ಮುಂಬಯಿ, ಎಲ್ಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಉಷಾ ದಯಾನಂದ್, ಮೂಕಾಂಬಿಕಾ ಮಂದಿರ ಅಸಲ್ಫಾ ಇದರ ಸುಧಾಕರ್ ಪೂಜಾರಿ, ಸುಹಾಸ್ ಶೆಟ್ಟಿ ಬರ್ಪಾಣಿ, ಭೋಜ ಅಮೀನ್ ಮುಂಬಯಿ, ಉಳ್ಳೂರು ಭಂಡಾರ ಮನೆ ಜಗನ್ನಾಥ ಶೆಟ್ಟಿ, ಕ್ಷೇತ್ರದ ಅಧ್ಯಕ್ಷ ಶೇಖರ್ ಶಾಂತಿ, ಕೋಶಾಧಿಕಾರಿ ಸಿಎಸ್| ಜಯರಾಮ್ ಪೂಜಾರಿ, ವ್ಯವಸ್ಥಾಪಕ ಉಳ್ಳೂರು ಧನಂಜಯ್ ಶಾಂತಿ, ಅರ್ಚಕ ಶಂಕರ್ ಶಾಂತಿ, ನಿತೀನ್ ಅಮೀನ್, ಅಮಿತ್ ಜಿ.ಸಾಲ್ಯಾನ್ ಉಪಸ್ಥಿತರಿದ್ದರು.
ಉಪನ್ಯಾಸಕ ಹಾಗೂ ಜೊತೆ ಕಾರ್ಯದರ್ಶಿ ಹರೀಶ್ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು. ವರ್ಧಂತಿ ಉತ್ಸವ ಸುಸಂದರ್ಭದಲ್ಲಿ ದುರ್ಗಾಪರಮೇಶ್ವರಿ ಸನ್ನಿದಾನದಲ್ಲಿ ರಾಜೇಶ್ ಶಾಂತಿ ಅವರು ರಂಗೋಲಿಯಲ್ಲಿ ಮೂಡಿದ ಅಷ್ಟಭುಜ ದಾರಿಣಿ ದುರ್ಗೆ ಮನಾಕರ್ಷಣೆ ಗೊಳಿಸಿತು


Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now