ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ; ಉದ್ಯಾವರದಲ್ಲಿ ಜಿಪಿಎಲ್ ಸೀಸನ್ 2 ಕ್ರಿಕೆಟ್ ಪಂದ್ಯಕೂಟ ಉದ್ಘಾಟನೆ

ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ; ಉದ್ಯಾವರದಲ್ಲಿ ಜಿಪಿಎಲ್ ಸೀಸನ್ 2 ಕ್ರಿಕೆಟ್ ಪಂದ್ಯಕೂಟ ಉದ್ಘಾಟನೆ

0Shares

ಗ್ರಾಮೀಣ ಪ್ರದೇಶಗಳಲ್ಲಿ ಕ್ರಿಕೆಟ್ ಬೆಳವಣಿಗೆಯಾಗಲು ಹೆಚ್ಚು ಹೆಚ್ಚು ಪಂದ್ಯಕೂಟಗಳು ಆಯೋಜನೆಯಾಗ ಬೇಕು, ಇದರಿಂದ ಹೊಸ ಪ್ರತಿಭೆಗಳು ಮೂಡಲು ಸಹಕಾರಿಯಾಗುತ್ತದೆ ಎಂದು ಉದ್ಯಾವರ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ಮಾಲತಿ ಸಂದೀಪ್ ಅವರು ಅಭಿಮತ ವ್ಯಕ್ತಪಡಿಸಿದರು. ಅವರು ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಆಶ್ರಯದಲ್ಲಿ ಜಿಪಿಎಲ್ ಸೀಸನ್-2 ಕ್ರಿಕೆಟ್ ಪಂದ್ಯಕೂಟವನ್ನು ಉದ್ಯಾವರದ ಬೋಳಾರ್ ಗುಡ್ಡೆ ಮೈದಾನದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಂಘದ ಅಧ್ಯಕ್ಷರಾದ ರೋಷನ್ ಕರ್ಕಡ ಕಾಪು ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ (ಮಂಗಳೂರು ಮತ್ತು ಉಡುಪಿ) ಇದರ ಚಯರ್ ಮ್ಯಾನ್ ಜನಾರ್ದನ್ ಎ, ಅಧ್ಯಕ್ಷರಾದ ದಿನಕರ್ ಕುಲಾಲ್, ಪ್ರಧಾನ ಕಾರ್ಯದರ್ಶಿ ರಾಜ್ ಗೋಪಾಲ್, ಸಂಘಟನಾ ಕಾರ್ಯದರ್ಶಿಗಳಾದ ಶರತ್ ಆಚಾರ್ಯ, ಪುಷ್ಪರಾಜ್ ಶೆಟ್ಟಿ, ಸರ್ವೋ ಲುಬ್ರಿಕಂಟ್ ಇದರ ಪ್ರತಿನಿಧಿಗಳಾದ ರಾಘವೇಂದ್ರ ಭಟ್, ಮಾರೂರು ಮೋಟರ್ಸ್ ನ ಪ್ರತಿನಿಧಿಗಳಾದ ಅನಿರುದ್ದ್ ಮತ್ತು ಸಂತೋಷ್, ಮಂಗಳೂರಿನ ಬುಲಿಪು ತುಳು ಚಿತ್ರತಂಡದ ಕಲಾವಿದರಾದ ಅವಿನಾಶ್ ಆಚಾರ್ಯ, ದುರ್ಗಾ ಪ್ರಸಾದ್, ವೈಭವ್ ಶೆಟ್ಟಿಗಾರ್, ಯೋಗೀಶ್, ಸಂಘದ ಸ್ಥಾಪಕ ಅಧ್ಯಕ್ಷರಾದ ಪ್ರಭಾಕರ್ ಕೆ, ಉಪಾಧ್ಯಕ್ಷರಾದ ಎಸ್ ಜಿ ಕೃಷ್ಣ ಮತ್ತು ವಿನಯ್ ಕುಮಾರ್ ಕಲ್ಮಾಡಿ, ಗೌರವ ಸಲಹೆಗಾರರಾದ ಯಾದವ ಶೆಟ್ಟಿಗಾರ್, ಉದಯ ಕಿರಣ್ ಕ್ರೀಡಾ ಕಾರ್ಯದರ್ಶಿಗಳಾದ ಮಧುಸೂದನ್ ಕನ್ನರ್ಪಾಡಿ ಮತ್ತು ಸಂತೋಷ್ ಪೂಜಾರಿ ಕಾಪು, ಪದಾಧಿಕಾರಿಗಳಾದ ರವಿ ತೆಂಕಪೇಟೆ, ಮಹೇಶ್ ನಿಟ್ಟೂರು, ನವೀನ್ ಉದ್ಯಾವರ, ಸಿಲ್ವರ್ ಸ್ಟಾರ್ ಡಿಸೋಜಾ, ಸುಧಾಕರ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.

ಉಪಾಧ್ಯಕ್ಷರಾದ ವಿನಯ್ ಕುಮಾರ್ ಸ್ವಾಗತಿಸಿ ಕೋಶಾಧಿಕಾರಿ ಸಂತೋಷ್ ಕುಮಾರ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ ಕಾರ್ಯಕ್ರಮ ನಿರೂಪಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now