ಮೂಡುಬೆಳ್ಳೆ ಸಂತ ಲಾರೆನ್ಸ್ ಚರ್ಚ್ ನಿಂದ ಅತ್ತೂರು ವಾರ್ಷಿಕ ಹಬ್ಬಕ್ಕೆ 21ನೇ ವರ್ಷದ ಪಾದಯಾತ್ರೆ*

ಮೂಡುಬೆಳ್ಳೆ ಸಂತ ಲಾರೆನ್ಸ್ ಚರ್ಚ್ ನಿಂದ ಅತ್ತೂರು ವಾರ್ಷಿಕ ಹಬ್ಬಕ್ಕೆ 21ನೇ ವರ್ಷದ ಪಾದಯಾತ್ರೆ*

0Shares

ಮೂಡುಬೆಳ್ಳೆ 27 ರಂದು ಮಂಗಳವಾರ ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕೋತ್ಸವದ ಪ್ರಯುಕ್ತ ಸಾಯಂಕಾಲ 4 ಗಂಟೆಗೆ ಸರಿಯಾಗಿ ಮೂಡುಬಳ್ಳೆ ಸಂತ ಲಾರೆನ್ಸ್ ಚರ್ಚ್ ನಿಂದ ಅತ್ತೂರು ಸಂತ ಲಾರೆನ್ಸ್ ಬಸಿಲಿಕಕ್ಕೆ 21ನೇ ವರ್ಷದ ಪಾದಯಾತ್ರೆ ಪ್ರಾರಂಭವಾಯಿತು.
ಮೂಡ ಬೆಳ್ಳೆ ಶ್ರೈನ್ ಮುಂದೆ ಸರಿಸುಮಾರು 250 ಜನರನ್ನು ಒಳಗೊಂಡ ಪಾದಯಾತ್ರೆಗೆ ಫಾ. ರೋಷನ್ ಡಿಸೋಜ ಹೋಲಿ ಕ್ರಾಸ್, ಕೆನಡಾ ಇವರು ಪ್ರಾರ್ಥನೆ ಮಾಡಿ ಆಶೀರ್ವದಿಸಿದರು. ಪಾದಯಾತ್ರೆಯ ಉದ್ದಕ್ಕೂ ದಾನಿಗಳಿಂದ ನೀರು, ಪಾನಕ ವಿತರಣೆ ಮಾಡಲಾಗುತ್ತದೆ. ನಾಲ್ಕು ಬೀದಿಯಲ್ಲಿ ಸನ್ ಶೈನ್ ಕ್ಯಾಟರಿಂಗ್, ಪಳ್ಳಿ ಯಲ್ಲಿ ಸದಾನಂದ ಶೆಣೈ ಹಾಗೂ ಗೋವಿಂದ ಜೋಗಿ ಪಾನಕವನ್ನು ವಿತರಿಸಿದರು. ಪ್ರತಿವರ್ಷದಂತೆ ಗುಂಡ್ಯಡ್ಕದಲ್ಲಿ ಫಲಹಾರವನ್ನು ಮೆಲೋನ ಕ್ಯಾಟರರ್ಸ್ ಕಟಪಾಡಿ ಇವರು ವಿತರಿಸಿದರು.
21 ವರ್ಷದಿಂದ ಈ ಪಾದಯಾತ್ರೆಯ ನೇತೃತ್ವವನ್ನು ಶ್ರೀ ಜೆರಾಲ್ಡ್ ಫರ್ನಾಂಡಿಸ್ ಮೂಡುಬೆಳ್ಳೆ ಮತ್ತು ಇವರ ಕುಟುಂಬಸ್ಥರು ವಹಿಸಿಕೊಳ್ಳುತ್ತಾರೆ. ಸ್ವಂತ ಖರ್ಚಿನಿಂದ ಉಳಿದ ವ್ಯವಸ್ಥೆ ಹಾಗೂ ಯಾತ್ರಾತ್ರಿಗಳಿಗೆ ರಾತ್ರಿ ಹಿಂದೆ ಬರಲು ಬಸ್ ವ್ಯವಸ್ಥೆಯನ್ನು ಮಾಡುತ್ತಾರೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now