ಶಿರ್ವ: ಮಹಾತ್ಮ ಗಾಂಧೀಜಿಯವರ ಹೆಸರು ಕಿತ್ತು ಹಾಕುವುದರ ಮೂಲಕ ರಾಷ್ಟ್ರಪಿತನಿಗೆ ಅಗೌರವ: ಸೊರಕೆ**

ಶಿರ್ವ: ಮಹಾತ್ಮ ಗಾಂಧೀಜಿಯವರ ಹೆಸರು ಕಿತ್ತು ಹಾಕುವುದರ ಮೂಲಕ ರಾಷ್ಟ್ರಪಿತನಿಗೆ ಅಗೌರವ: ಸೊರಕೆ**

0Shares

ಶಿರ್ವ ತಾರೀಕು 24 ಶನಿವಾರ ಬೆಳಗ್ಗೆ 10:30 ಗಂಟೆಗೆ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ನೇತ್ರತ್ವದಲ್ಲಿ ಶಿರ್ವ ಗ್ರಾಮೀಣ ಕಾಂಗ್ರೆಸ್ ಹಾಗೂ ಶಿರ್ವ ಗ್ರಾಮೀಣ ಯುವ ಕಾಂಗ್ರೆಸ್ ಆಶ್ರಯದಲ್ಲಿ ಶಿರ್ವ ಪೇಟೆಯ ಪಂಚಾಯತ್ ಕಟ್ಟಡದ ಎದುರು ಪ್ರತಿಭಟನೆ ನಡೆಯಿತು.
ಕೇಂದ್ರ ಸರ್ಕಾರ ಗ್ರಾಮೀಣ ಉದ್ಯೋಗ ಯೋಜನೆಗೆ “ಪೂಜ್ಯ ಬಾಪು ಗ್ರಾಮೀಣ ಉದ್ಯೋಗ ಯೋಜನೆ (PBGRY)” ಎಂದು ಹೊಸ ಹೆಸರು ನೀಡಿರುವುದಕ್ಕೆ ಕಾಂಗ್ರೆಸ್ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಹೆಸರು ಬದಲಾವಣೆಯಿಂದ ಗ್ರಾಮೀಣ ಜನರಿಗೆ ಉದ್ಯೋಗ ಸಿಗುವುದಿಲ್ಲ; ನೆಲಮಟ್ಟದಲ್ಲಿ ಕೆಲಸ, ಕೂಲಿ ಮತ್ತು ದಿನಗಳ ಭರವಸೆ ನೀಡುವುದೇ ಮುಖ್ಯ ಎಂದು ಕಾಪು ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ವೈ. ಸುಕುಮಾರ್ ಹೇಳಿದ್ದಾರೆ.

ಈ ಹಿಂದೆ “ವಿಕಸಿತ ಭಾರತ – ಉದ್ಯೋಗ ಮತ್ತು ಜೀವನೋಪಾಯ ಭರವಸೆ ಮಿಷನ್ (ಗ್ರಾಮೀಣ)” ಎಂಬ ಹೆಸರನ್ನೂ ಪ್ರಸ್ತಾಪಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ಯೋಜನೆಯ ಮೂಲ ಆತ್ಮವನ್ನು ದುರ್ಬಲಗೊಳಿಸಿ, ಕೇವಲ ಮರುನಾಮಕರಣದಲ್ಲಿ ತೊಡಗಿದೆ,
ಗ್ರಾಮೀಣ ಭಾರತಕ್ಕೆ ಘೋಷಣೆಗಳಲ್ಲ, ನಿಜವಾದ ಉದ್ಯೋಗ ಭರವಸೆ ಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಗ್ರಾಮ ಪಂಚಾಯಿತಿ ಯ ಅಧಿಕಾರವನ್ನು ಮಟಕುಗೊಳಿಸಲಾಗಿದೆ ಈ ಹಿಂದೆ 90 % ಕೇಂದ್ರ ಸರಕಾರ 10% ರಾಜ್ಯ ಸರ್ಕಾರ ಕೊಡುತ್ತಿತ್ತು, ರಾಜ್ಯ ಸರಕಾರದ ಅನುಮತಿ ಕೇಳದೆ ಏಕಾಏಕಿ 40% ಪರ್ಸೆಂಟ್ ಕೊಡಬೇಕು ಎಂದಿದ್ದಾರೆ, ಕಾಂಗ್ರೆಸ್ ಸರಕಾರ ಗ್ರಾಮ ಸ್ವರಾಜ್ ಕಲ್ಪನೆ ಮಾಡಿತ್ತು,ಕೇಂದ್ರ ಸರ್ಕಾರ ಗ್ರಾಮೀಣ ಉದ್ಯೋಗ ಯೋಜನೆಗೆ “ಪೂಜ್ಯ ಬಾಪು ಗ್ರಾಮೀಣ ಉದ್ಯೋಗ ಯೋಜನೆ (PBGRY)” ಎಂದು ಹೊಸ ಹೆಸರು ನೀಡಿರುವುದು ಜನರ ಗಮನ ಬೇರೆಡೆ ಸೆಳೆಯುವ ರಾಜಕೀಯ ತಂತ್ರ ಮಾತ್ರ,
ಗ್ರಾಮೀಣ ಯುವಕರಿಗೆ ಕೆಲಸವಿಲ್ಲ, ಕಾರ್ಮಿಕರಿಗೆ ಸಮಯಕ್ಕೆ ಕೂಲಿ ಇಲ್ಲ, ಉದ್ಯೋಗ ದಿನಗಳು ಕಡಿತಗೊಂಡಿವೆ – ಆದರೆ ಸರ್ಕಾರಕ್ಕೆ ಹೆಸರು ಬದಲಾಯಿಸುವುದೇ ಸಾಧನೆ
ಈ ಹಿಂದೆ “ವಿಕಸಿತ ಭಾರತ – ಉದ್ಯೋಗ ಮತ್ತು ಜೀವನೋಪಾಯ ಭರವಸೆ ಮಿಷನ್ (ಗ್ರಾಮೀಣ)” ಎಂಬ ಭಾರೀ ಹೆಸರುಗಳನ್ನು ಹೇಳಿಕೊಂಡು, ನೆಲಮಟ್ಟದಲ್ಲಿ ಯೋಜನೆಯನ್ನು ದುರ್ಬಲಗೊಳಿಸಿರುವುದು ಜನವಿರೋಧಿ ನೀತಿಯ ಸ್ಪಷ್ಟ ಉದಾಹರಣೆ .
ಪೂಜ್ಯ ಬಾಪು ಅವರ ಹೆಸರನ್ನು ಬಳಸಿಕೊಂಡು ಸರ್ಕಾರ ತನ್ನ ವಿಫಲತೆಗಳನ್ನು ಮುಚ್ಚಲು ಯತ್ನಿಸುತ್ತಿದೆ; ಆದರೆ ಗ್ರಾಮೀಣ ಭಾರತದ ಸಂಕಷ್ಟವನ್ನು ಹೆಸರು ಬದಲಾವಣೆಗಳಿಂದ ಮರೆಮಾಚಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಪಕ್ಷ ಎಚ್ಚರಿಸಿದೆ.
ಗ್ರಾಮೀಣ ಜನರಿಗೆ ಘೋಷಣೆಗಳಲ್ಲ, ನಿಜವಾದ ಉದ್ಯೋಗ ಭರವಸೆ, ಸಂಪೂರ್ಣ ಹಣಕಾಸು ಹಂಚಿಕೆ ಮತ್ತು ಪಾರದರ್ಶಕ ಜಾರಿಯೇ ಬೇಕು ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಆಗ್ರಹಿಸಿದ್ದಾರೆ

ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಶ್ರೀ ವಿನಯ್ ಕುಮಾರ್ ಸೊರಕೆ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ವೈ ಸುಕುಮಾರ್, ಕಾಪು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಶ್ರೀ ನವೀನ್ ಚಂದ್ರ ಸುವರ್ಣ, ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶ್ರೀ ಹಸನಬ್ಬ ಶೇಖ್, ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮೆಲ್ವಿನ್ ಡಿಸೋಜ, ಕಾಪು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಶ್ರೀ ರತನ್ ಕುಮಾರ್ ಶೆಟ್ಟಿ, . ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿಯಾದ ಶ್ರೀ ರಿಯಾಜ್ ಮುದರಂಗಡಿ, .ಶಿರ್ವ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಕೀರ್ತನ್ ಪೂಜಾರಿ, ಕಾಪು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಶ್ರೀ ಅಬ್ದುಲ್ ಲತೀಫ್,.ಕಿಸಾನ್ ಘಟಕದ ಬ್ಲಾಕ್ ಅಧ್ಯಕ್ಷರಾದ ಶ್ರೀ ಸದಾನಂದ ಶೆಟ್ಟಿ ಕೋಡು ಗ್ಲ್ಯಾಡಿಸ್ ಅಲ್ಮೇಡ, ಮೋಹನ್ ನೊರೊನ್ನ, ರಾಯನ್ ಮಿನೇಜಸ್, ಸುರೇಶ್ ಪೂಜಾರಿ, ಶ್ರೇಯಸ್ ಪೂಜಾರಿ, ಮಿಗೇಶ್ ಪೂಜಾರಿ, ವಾಲ್ಟರ್ ಮಿನೇಜಸ್, ವಿನುತ ಕ್ಯಾಸ್ತಲಿನೊ, ಫಿಲಿಪ್ ಕ್ಯಾಸ್ತಲಿನೊ, ವಿನ್ಸೆಂಟ್ ನಜ್ರತ್ .
ರಮೇಶ್ ಬಂಗೇರ ಸ್ ಫರ್ನಾಂಡಿಸ್ ರವೀಂದ್ರ ಆಚಾರ್ಯ ಸ್ಟ್ಯಾನ್ಲಿ ಡೈಸ್ ಹಾಜರಿದ್ದರು

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now