
ಉಡುಪಿ ಜ. 17: ಕಳೆದ ಆರು ದಿನಗಳ ಹಿಂದೆ ಉಡುಪಿ ಜಿಲ್ಲಾಸ್ಪತ್ರೆಗೆ ವಿಶು ಶೆಟ್ಟಿ ಅಂಬಲಪಾಡಿಯವರು ತೀವ್ರ ಅಸ್ವಸ್ಥಗೊಂಡ ಕ್ಷಯರೋಗಿ ಯುವಕನನ್ನು ಚಿಕಿತ್ಸೆಗೆ ದಾಖಲಿಸಿದ್ದು, ಇದೀಗ ದೀರ್ಘಕಾಲದ ಚಿಕಿತ್ಸೆಗೆ ವಿಶು ಶೆಟ್ಟಿ ರೋಗಿಯನ್ನು ಮಂಗಳೂರಿನ ಮೂಡುಶೆಡ್ಡೆಯ ಕ್ಷಯರೋಗ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯುವಕ ದಾವಣಗೆರೆ ಮೂಲದ ರಮೇಶ್ ನಾಯಕ್ (28) ಸಂಬಂಧಿಕರ ಪತ್ತೆಯಾಗದೆ ಅಸಹಾಯಕನಾದವ ತನಗೆ ಚಿಕಿತ್ಸೆ ಕೊಡಿಸಿ ಬದುಕುವಂತೆ ಮಾಡಿ ಎಂದು ರೋಗಿ ವಿಶು ಶೆಟ್ಟಿಯವರ ಬಳಿ ಅಂಗಲಾಚಿದ್ದಾನೆ. ಯುವಕನ ಅಸಹಾಯಕತೆ ಹಾಗೂ ಚಿಕಿತ್ಸೆ ನೆರವಿಗಾಗಿ ಮಂಗಳೂರಿನ ಶಾಸಕ ಭರತ್ ಶೆಟ್ಟಿ ಅವರ ಗಮನಕ್ಕೆ ವಿಶು ಶೆಟ್ಟಿ ತಂದಿದ್ದು, ಶಾಸಕರು ಕೂಡಲೇ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ ಯುವಕನ ಚಿಕಿತ್ಸೆ ಬಗ್ಗೆ ಸ್ಪಂದಿಸಿ ದಾಖಲು ಪ್ರಕ್ರಿಯೆಗೆ ಸಹಕರಿಸಿದ್ದಾರೆ. ಸ್ಪಂದಿಸುವ ಸಂಬಂದಿಕರು ಆಸ್ಪತ್ರೆಯನ್ನು ಸಂಪರ್ಕಿಸಿ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now