ಮಾದಕ ವಸ್ತು ಎಂ.ಡಿ.ಎಂ.ಎ ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ

ಮಾದಕ ವಸ್ತು ಎಂ.ಡಿ.ಎಂ.ಎ ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ

0Shares

ಉಡುಪಿ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕರಾದ ಪ್ರಭು ಡಿ.ಟಿ ಮಾರ್ಗದರ್ಶನದಲ್ಲಿ ಉಡುಪಿ ನಗರ ಠಾಣಾ ಪ್ರಭಾರ ಪೊಲೀಸ್‌ ನಿರೀಕ್ಷಕರಾದ ಮಹೇಶ ಪ್ರಸಾದ್‌, ನೇತೃತ್ವದಲ್ಲಿನ ತಂಡವು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಶಿವಳ್ಳಿ ಗ್ರಾಮದ ಕರಂಬಳ್ಳಿ ರಾಮಬೆಟ್ಟು ಸಮೀಪ ಸಾರ್ವಜನಿಕ ಸ್ಥಳದಲ್ಲಿ KA20AC 5863ನೇ ಆಟೋರಿಕ್ಷಾ ದಲ್ಲಿ ನಿಷೇದಿತ ಮಾದಕ ವಸ್ತು MDMA ಪೌಡರ್‌ ಮಾರಾಟ ಮಾಡಲು ಹೊಂದಿದ್ದ ಆರೋಪಿ ಅಬ್ದುಲ್‌ ರೌಫ್‌, ಪ್ರಾಯ 26 ವರ್ಷ ತಂದೆ ಹಮೀದ್‌ ವಾಸ: 1-4-182ಎ ದೊಡ್ಡನಗುಡ್ಡೆ ಮಸೀದಿ ಹತ್ತಿರ ಶಿವಳ್ಳಿ ಗ್ರಾಮ ಉಡುಪಿ ಎಂಬಾತನಿಂದ 1) 7.59 ಗ್ರಾಂ ತೂಕದ MDMA ಅಂದಾಜು ಮೌಲ್ಯ 15,000/- ರೂಪಾಯಿಗಳು, 2) MDMA ನ್ನು ಮಾರಾಟ ಮಾಡಿ ಗಳಿಸಿದ್ದ 3100/- ರೂ ಮತ್ತು 3) KA20AC 5863 ನೇ ನಂಬ್ರದ ಕಪ್ಪು-ಹಳದಿ ಬಣ್ಣದ ಆಟೋರಿಕ್ಷಾ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ವಾಧೀನ ಪಡಿಸಿದ ಸೊತ್ತಿನ ಒಟ್ಟು ಮೌಲ್ಯ ರೂ, 3,23,100 ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 217/2025, ಕಲಂ: 8(c) 22(b)) NDPS ರಂತೆ ಪ್ರಕರಣ ದಾಖಲಾಗಿರುತ್ತದೆ.

ಈ ಕಾಯ೯ಚರಣೆಯಲ್ಲಿ ಉಡುಪಿ ನಗರ ಪೊಲೀಸ್ ಠಾಣಾ ಪಿಎಸ್‌ಐರವರಾದ ಭರತೇಶ ಕಂಕಣವಾಡಿ, ಗೋಪಾಲ ಕೃಷ್ಣ ಜೋಗಿ ಹಾಗೂ ಉಡುಪಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಹರೀಶ್‌ ನಾಯ್ಕ, ಪ್ರಸನ್ನ.ಸಿ. ನೇತ್ರಾವತಿ, ಸತೀಶ್‌ ಪಳ್ಳಿ ಹೇಮಂತ್‌ ಕುಮಾರ್‌, ಸಂತೋಷ್‌ ರಾತೋಡ್‌ ಆನಂದ ರವರ ತಂಡವು ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿರುತ್ತಾರೆ.

ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now