ಗಾಂಧಿ ಆಸ್ಪತ್ರೆಯಲ್ಲಿ ಕಾಗದರಹಿತ ಒಳರೋಗಿ ಡಿಜಿಟಲ್ ದಾಖಲೆ ವ್ಯವಸ್ಥೆ ಉದ್ಘಾಟನೆ

ಗಾಂಧಿ ಆಸ್ಪತ್ರೆಯಲ್ಲಿ ಕಾಗದರಹಿತ ಒಳರೋಗಿ ಡಿಜಿಟಲ್ ದಾಖಲೆ ವ್ಯವಸ್ಥೆ ಉದ್ಘಾಟನೆ

0Shares

ಉಡುಪಿ ಜನವರಿ 02 : ನಗರದ ಗಾಂಧಿ ಆಸ್ಪತ್ರೆಯಲ್ಲಿ ಕಾಗದರಹಿತ ಒಳರೋಗಿ ಡಿಜಿಟಲ್ ದಾಖಲೆ ನಿರ್ವಹಣಾ ವ್ಯವಸ್ಥೆಯನ್ನು ಶ್ರೀ ರಾಘವೇಂದ್ರ ಮಠದ ಪೂಜ್ಯರಾದ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪೂಜ್ಯ ಸ್ವಾಮೀಜಿಗಳು, ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸುವ ಮೂಲಕ ಪ್ರಕೃತಿಯ ಸಂರಕ್ಷಣೆ ಸಾಧ್ಯ ಎಂದು ತಿಳಿಸಿದರು. ಕಾಗದ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಪರಿಸರ ರಕ್ಷಣೆಗೂ ಸಹಕಾರ ದೊರೆಯುತ್ತದೆ ಎಂದು ಹೇಳಿ, ಇಂತಹ ಐತಿಹಾಸಿಕ ಹಾಗೂ ದೂರದೃಷ್ಟಿಯ ನಿರ್ಧಾರವನ್ನು ಕೈಗೊಂಡಿರುವ ಗಾಂಧಿ ಆಸ್ಪತ್ರೆಯನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಗಾಂಧಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಹರಿಶ್ಚಂದ್ರ ಹಾಗೂ ಅವರ ಪತ್ನಿ ಶ್ರೀಮತಿ ಲಕ್ಷ್ಮಿ ಉಪಸ್ಥಿತರಿದ್ದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ವ್ಯಾಸರಾಜ ತಂತ್ರಿ ಅವರು ಕಾರ್ಯಕ್ರಮದ ಪರಿಚಯ ಭಾಷಣ ನೀಡಿ, ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು.

ಈ ಉದ್ಘಾಟನಾ ಸಮಾರಂಭದಲ್ಲಿ

ಐಎಂಎ ಅಧ್ಯಕ್ಷ ಡಾ. ಅಶೋಕ್ ಕುಮಾರ್ ಕಾಮತ್,

ಎಪಿಐ ಅಧ್ಯಕ್ಷ ಡಾ. ಸುರೇಶ್ ಹೆಗಡೆ,

ಮಾಜಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಧುಸೂಧನ ನಾಯಕ್,

ಹಿರಿಯ ವೈದ್ಯರಾದ ಡಾ. ಚಂದ್ರಶೇಖರ್ ಅಡಿಗ, ಡಾ. ಆರ್.ಎನ್. ಭಟ್, ಡಾ. ಅಶೋಕ್ ಕುಮಾರ್ ವೈ.ಜಿ.,

ಹೃದಯ ರೋಗ ತಜ್ಞ ಡಾ. ವಿಷುಕುಮಾರ್,

ಡಾ. ಕಿರಣ್ ಕುಮಾರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಗಳು ಡಿಜಿಟಲ್ ದಾಖಲೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ಡಿ-ಸ್ಕ್ರೈಬ್ ಸಾಫ್ಟ್‌ವೇರ್‌ನ ಸಹ ಸಂಸ್ಥಾಪಕರಾದ ಶ್ರೀ ಅಕ್ಷಯ ವಿ. ನಾಯಕ್ ಹಾಗೂ ಶ್ರೀ ಕಿರಣ್ ರಾವ್ ಅವರಿಗೆ ಸ್ಮರಣಿಕೆ ನೀಡಿ ಆಶೀರ್ವದಿಸಿದರು.

ಹಿರಿಯರಾದ ಅಗ್ರಹಾರ ಲಕ್ಷ್ಮೀನಾರಾಯಣ ತಂತ್ರೀ ,ಶ್ರೀ ದಾಮೋದರ ಭಟ್ ರವರು ಹಾಗೂ ಉಡುಪಿಯ ರಾಘವೇಂದ್ರ ಮಠದ ವ್ಯವಸ್ಥಾಪಕ ಶ್ರೀ ಜಯತೀರ್ಥ ರವರು ಉಪಸ್ಥಿತರಿದ್ದರು

ಕಾರ್ಯಕ್ರಮವನ್ನು ಶ್ರೀಯುತ ಯೂಸುಫ್ ರವರು ಆಸ್ಪತ್ರೆಯ ಸಿಬ್ಬಂದಿಗಳೊಂದಿಗೆ ಸಜ್ಜುಗೊಳಿಸಿದರು. ಕರ್ತವ್ಯ ನಿರತ ವೈದ್ಯರು ಹಾಗೂ ರೋಗಿಗಳ ಬಂಧುಗಳು ಸಾಕ್ಷಿಯಾಗಿ ಕಂಡು ಸಂಭ್ರಮಿಸಿದರು

PRANA-CARE – ನಿಜವಾದ ಪೇಪರ್‌ಲೆಸ್ IPD ವ್ಯವಸ್ಥೆ :

ಸಲಹೆಗಾರರು ಮತ್ತು ಮಾಧ್ಯಮ ಪ್ರತಿನಿಧಿಗಳಿಗಾಗಿ ವಿಶೇಷ ಮಾಹಿತಿ ಕಾರ್ಯಕ್ರಮ

ಗಾಂಧಿ ಆಸ್ಪತ್ರೆಯಲ್ಲಿ PRANA-CARE – Paperless Record & Admission for Nursing & Assisted CARE ಎಂಬ ನಿಜವಾದ ಅರ್ಥದ ಪೇಪರ್‌ಲೆಸ್ ಒಳರೋಗಿ (IPD) ದಾಖಲೆ ವ್ಯವಸ್ಥೆಯ ಅನುಷ್ಠಾನ ಕುರಿತು ಸಲಹೆಗಾರ ವೈದ್ಯರು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡುವ ವಿಶೇಷ ಕಾರ್ಯಕ್ರಮವನ್ನು 01-01-2026 ರಂದು ಯಶಸ್ವಿಯಾಗಿ ಆಯೋಜಿಸಲಾಯಿತು.

ಈ PRANA-CARE ಪೇಪರ್‌ಲೆಸ್ IPD ವ್ಯವಸ್ಥೆಯನ್ನು ಮಂತ್ರಾಲಯ ಮಠದ ಶ್ರೀ ಶ್ರೀ ಸುಬುದೇಂದ್ರ ತೀರ್ಥ ಸ್ವಾಮೀಜಿಯವರು 27-12-2025 ರಂದು ಉದ್ಘಾಟಿಸಿದ್ದರು. ಅದರ ಮುಂದುವರಿದ ಭಾಗವಾಗಿ, ವ್ಯವಸ್ಥೆಯ ಕಾರ್ಯವಿಧಾನ, ವೈಶಿಷ್ಟ್ಯಗಳು ಹಾಗೂ ಪ್ರಯೋಜನಗಳ ಕುರಿತು ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಂಧಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಹರಿಶ್ಚಂದ್ರ ಅವರು ವಹಿಸಿದ್ದರು. ಅವರು ಮಾತನಾಡಿ ನರ್ಸಿಂಗ್ ಕೇರ್ ನ ಪ್ರಾಮುಖ್ಯತೆ ಒತ್ತಿ ಹೇಳಿದರು

ಕಾರ್ಯಕ್ರಮದಲ್ಲಿ ವೈದ್ಯಕೀಯ ನಿರ್ದೇಶಕರಾದ ಡಾ. ವ್ಯಾಸರಾಜ ತಂತ್ರಿ ಅವರು ಪರಿಚಯ ಭಾಷಣವನ್ನು ನೀಡಿ, ಕೇವಲ ಕಾಗದಗಳನ್ನು ಸ್ಕ್ಯಾನ್ ಮಾಡುವ ಡಿಜಿಟಲೀಕರಣ ಮತ್ತು PRANA-CARE ಮೂಲಕ ಜಾರಿಗೆ ತಂದಿರುವ ನಿಜವಾದ ಪೇಪರ್‌ಲೆಸ್ IPD ವ್ಯವಸ್ಥೆಯ ನಡುವಿನ ಸ್ಪಷ್ಟ ವ್ಯತ್ಯಾಸವನ್ನು ವಿವರಿಸಿದರು. PRANA-CARE ವ್ಯವಸ್ಥೆಯಲ್ಲಿ ರೋಗಿ ದಾಖಲಾಗುವ ಕ್ಷಣದಿಂದಲೇ ಎಲ್ಲಾ ವೈದ್ಯಕೀಯ, ನರ್ಸಿಂಗ್ ಹಾಗೂ ಚಿಕಿತ್ಸಾ ದಾಖಲಾತಿಗಳು ನೇರವಾಗಿ ಡಿಜಿಟಲ್ ರೂಪದಲ್ಲೇ ಸೃಜಿಸಲಾಗುತ್ತವೆ ಎಂದು ಅವರು ವಿವರಿಸಿದರು.

D-Scribe ಸಾಫ್ಟ್‌ವೇರ್‌ನ ಸಹ-ಸ್ಥಾಪಕರಾದ ಶ್ರೀ ಅಕ್ಷಯ್ ವಿ. ನಾಯಕ್ ಅವರು PRANA-CARE ವ್ಯವಸ್ಥೆಯ ತಾಂತ್ರಿಕ ಪ್ರಸ್ತುತಿಯನ್ನು ನೀಡಿದರು. ಈ ವೇಳೆ ವ್ಯವಸ್ಥೆಯ ಕಾರ್ಯಕ್ಷಮತೆ, ರಿಯಲ್ ಟೈಮ್ ಡಾಕ್ಯುಮೆಂಟೇಶನ್, ಚಿಕಿತ್ಸಾ ನಿರಂತರತೆ, ದೋಷರಹಿತ ದಾಖಲಾತಿ ಹಾಗೂ ಪರಿಸರ ಸ್ನೇಹಿ ವೈಶಿಷ್ಟ್ಯಗಳನ್ನು ವಿವರಿಸಿದರು.

IMA ಅಧ್ಯಕ್ಷರಾದ ಡಾ. ಅಶೋಕ್ ಕುಮಾರ್ ಅವರು ಮಾತನಾಡಿ, PRANA-CARE ಮಾದರಿಯಂತಹ ಪೇಪರ್‌ಲೆಸ್ ವ್ಯವಸ್ಥೆಗಳು ಭವಿಷ್ಯದ ಆರೋಗ್ಯ ಸೇವೆಗೆ ದಿಕ್ಕು ತೋರಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಶ್ರೀ ಸುಬ್ರಹ್ಮಣ್ಯ ಭಟ್ ಅವರು ಶುಭಾಶಯ ಭಾಷಣ ನೀಡಿ, ಪರಿಸರ ಸಂರಕ್ಷಣೆ ಹಾಗೂ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸುತ್ತಿರುವ ಈ ಪ್ರಯತ್ನವನ್ನು ಶ್ಲಾಘಿಸಿದರು.

ಈ ಕಾರ್ಯಕ್ರಮವನ್ನು ಸಲಹೆಗಾರ ವೈದ್ಯರು ಮತ್ತು ಮಾಧ್ಯಮ ಪ್ರತಿನಿಧಿಗಳಿಗಾಗಿ ವಿಶೇಷವಾಗಿ ಆಯೋಜಿಸಲಾಗಿದ್ದು, PRANA-CARE ಪೇಪರ್‌ಲೆಸ್ IPD ವ್ಯವಸ್ಥೆಯ ಕಾರ್ಯವಿಧಾನ ಹಾಗೂ ಅದರ ಲಾಭಗಳ ಬಗ್ಗೆ ಸಮಗ್ರ ಒಳನೋಟವನ್ನು ನೀಡಲಾಯಿತು.

PRANA-CARE ವ್ಯವಸ್ಥೆಯ ಮೂಲಕ ಗಾಂಧಿ ಆಸ್ಪತ್ರೆ ಪರಿಸರ ಸಂರಕ್ಷಣೆ, ದಾಖಲೆಗಳ ನಿಖರತೆ, ಚಿಕಿತ್ಸಾ ನಿರಂತರತೆ ಹಾಗೂ ಆಧುನಿಕ ಆರೋಗ್ಯ ಸೇವೆಯತ್ತ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now