ಶಿರ್ವ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಕಳವಾದ 5 ದ್ವಿಚಕ್ರ ವಾಹನ ವಶ, ಸಾರ್ವಜನಿಕರಿಂದ ಪ್ರಶಂಸೆ

ಶಿರ್ವ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಕಳವಾದ 5 ದ್ವಿಚಕ್ರ ವಾಹನ ವಶ, ಸಾರ್ವಜನಿಕರಿಂದ ಪ್ರಶಂಸೆ

0Shares

ಉಡುಪಿ: ಶಿರ್ವ ಪಿರ್ಯಾದಿದಾರಾದ ಶ್ರೀಮತಿ ಗುಣವತಿರವರ ಮಗ ಕೌಶಿಕ್ ರವರು ದಿನಾಂಕ: 05/12/2025 ರಂದು ಪಿರ್ಯಾದಿದಾರರ ಮಾಲೀಕತ್ವದ KA20HD8622 ಹೊಂಡಾ ಆಕ್ಟಿವಾ ಸ್ಕೂಟರ್ ನ್ನು ಬಂಟಕಲು ಮಧ್ವ ವಾದಿರಾಜ ಇಂಜಿನೀಯರಿಂಗ್ ಕಾಲೇಜಿಗೆ ತೆಗೆದುಕೊಂಡು ಹೋಗಿದ್ದು ಮದ್ಯಾಹ್ನ 12:45 ಗಂಟೆಗೆ ಕಾಲೇಜಿನ ಊಟದ ಸಮಯದಲ್ಲಿ ಬಂಟಕಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಊಟಕ್ಕೆ ಹೋಗಿ ಅಲ್ಲಿಯೇ ಪಾರ್ಕಿಂಗ್ ಮಾಡಿ ಊಟ ಮಾಡಿ ಮರಳಿ 13:15 ಗಂಟೆಗೆ ಬಂದಾಗ ಸ್ಕೂಟರ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವ ವಿಚಾರವನ್ನು ಪಿರ್ಯಾದಿದಾರರಿಗೆ ತಿಳಿಸಿರುತ್ತಾನೆ. ಕಳವಾದ ಸ್ಕೂಟರಿನ ಅಂದಾಜು ಮೌಲ್ಯ ರೂ. 60,000/- ಆಗಿರುತ್ತದೆ. ಆದುದರಿಂದ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡು ಕಳವಾದ ಆಕ್ಟಿವಾ ಸ್ಕೂಟರನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿಕೆ ಎಂಬಿತ್ಯಾದಿಯಾಗಿದೆ.

ಸದರಿ ಪ್ರಕರಣದಲ್ಲಿ ಶಿರ್ವ ಪೊಲೀಸರಿಂದ ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚಿಸಿ ಉಡುಪಿ, ಮಲ್ಪೆ, ಕಾರ್ಕಳ, ಧರ್ಮಸ್ಥಳ ಕಡೆಗಳಲ್ಲಿ ಸಂಚರಿಸಿ ಆರೋಪಿತ ಓಂ ಕೋಲಾರ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಸದರಿ ಬಂದಿತ ಆರೋಪಿಯಿಂದ ಶಿರ್ವ ಪೊಲೀಸ್ ಠಾಣೆಗೆ ಸಂಬಂದಿಸಿದ ಒಂದು ದ್ವಿಚಕ್ರ ವಾಹನ ಹಾಗೂ ಇತರ ಕಾಪು, ಬೆಂಗಳೂರು ನಗರದಲ್ಲಿನ ಪೊಲೀಸ್ ಠಾಣೆಗಳಿಗೆ ಸಂಬಂದಿಸಿದ ಒಟ್ಟು ಐದು ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿರುತ್ತದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಂ ಶಂಕರ್ ರವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ್ ಎಸ್ ನಾಯ್ಕ್ ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ಹರ್ಷ ಪ್ರಿಯಂವದಾ ರವರ ಹಾಗೂ ಕಾಪು ವೃತ್ತ ನಿರೀಕ್ಷಕರಾದ ಅಜಮತ್ ಅಲಿ ಮೇಲುಸ್ತುವಾರಿಯಲ್ಲಿ ಶಿರ್ವ ಪೊಲೀಸ್ ಠಾಣಾಧಿಕಾರಿರವರ ತಂಡ ಕಾರ್ಯ ಚರಣೆ ನಡೆಸಿ ಒಟ್ಟು 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುವುದಾಗಿದೆ.

ಈ ಕಾರ್ಯಾಚರಣೆಯಲ್ಲಿ ಶಿರ್ವ ಠಾಣಾ ಉಪನಿರೀಕ್ಷಕರಾದ ಮಂಜುನಾಥ ಮರಬದ, ಲೋಹಿತ್ ಕುಮಾರ್ ಸಿ ಎಸ್, ಸಿಬ್ಬಂದಿಗಳಾದ ಹೆಡ್ ಕಾನ್ಸ್ಟೇಬಲ್ ಮಂಜುನಾಥ ಅಡಿಗ, ದಯಾನಂದ ಪ್ರಭು, ಅನ್ವ‌ರ್ ಅಲಿ, ಸಿದ್ದರಾಯಪ್ಪ, ಮಂಜುನಾಥ ಹೊಸಮನಿ, ಕಿರಣ್, ಶಿವಾನಂದಪ್ಪ, ಬಸವರಾಜ್, ಆರ್ ಡಿಸಿ ವಿಭಾಗದ ದಿನೇಶ್ ರವರು, ಜೀವನ, ಬಸವರಾಜ್, ನಾಗರಾಜ್, ಪ್ರಕಾಶ್, ಜಗದೀಶ್, ಅರುಣ್ ಭಾಗವಹಿಸಿರುತ್ತಾರೆ.
ಪ್ರಶಂಸೆ
ಶಿರ್ವ ಠಾಣಾ ಪೊಲೀಸ್ರು 5 ತಿಂಗಳಲ್ಲಿ ಅಂತರ್ ರಾಜ್ಜ್ಯ ಕಳ್ಳ ಇತ್ತೇ ಬರ್ಪೆ ಅಬೂಬಕ್ಕರ್. ಕಬ್ಬಿಣದ ಸೆಂಟ್ರಿಂಗ್ ಶೀಟ್ ಕಳ್ಳ ತನದಲ್ಲಿ ರಶೀದ್ ಹಾಗೂ ನಕಲಿ ಗೋಲ್ಡ್ ನ್ನು ಬ್ಯಾಂಕ್ ನಲ್ಲಿ ಇಟ್ಟು ವಂಚಿಸಿದ ಪ್ರಕರಣ ದಲ್ಲಿ ಆರೋಪಿ ಗಳನ್ನು ಬೇರೆ ಬೇರೆ ರಾಜ್ಯ ದಲ್ಲಿ ಬಂಧಿಸಿ.ರುತ್ತಾರೆ
ಸೈಬರ್ ಕ್ರೈಂ ಪ್ರಕರಣದಲ್ಲಿ ಶುಭಾಮ್ ಸುಕ್ಲಾ ಎಂಬುವರನ್ನು ಉತ್ತರ ಪ್ರದೇಶ ದಲ್ಲಿ ಬಂಧಿಸಿರುತ್ತಾರೆ. ಶಿರ್ವ ಪೊಲೀಸರ ಈ ಕ್ಷಿಪ್ರ ಕಾರ್ಯಾಚರಣೆಗೆ ಶಿರ್ವ ಹಾಗೂ ಆಸು ಪಾಸಿನ ಜನರು ಠಾಣಾಧಿಕಾರಿ ಹಾಗೂ ಸಿಬ್ಬಂದಿಯನ್ನು ಪ್ರಶಂಶಿಸಿದ್ದಾರೆ

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now