ಎಂಪಿಸಿಸಿ ಮುಂಬಯಿ ವಾರ್ ರೂಮ್ ಡೆಸ್ಕ್ ಹೆಡ್ ಆಗಿ ಇನಿಶ್ ಐವಾನ್ ಡಿಸೋಜಾ ಶಿರ್ವಾ (ಉಡುಪಿ) ನೇಮಕ

ಎಂಪಿಸಿಸಿ ಮುಂಬಯಿ ವಾರ್ ರೂಮ್ ಡೆಸ್ಕ್ ಹೆಡ್ ಆಗಿ ಇನಿಶ್ ಐವಾನ್ ಡಿಸೋಜಾ ಶಿರ್ವಾ (ಉಡುಪಿ) ನೇಮಕ

0Shares

ಮುಂಬಯಿ, ಡಿ.22: ಮುಂಬಯಿ ಪ್ರಾದೇಶಿಕ ಕಾಂಗ್ರೆಸ್ ಸಮಿತಿಯ ಮುಂಬಯಿ ವಾರ್ ರೂಮ್‍ನ ಡೆಸ್ಕ್ ಹೆಡ್ ಆಗಿ ಇನಿಶ್ ಐವಾನ್ ಡಿಸೋಜಾ ಇವರನ್ನು ಮುಂಬಯಿ ಪ್ರಾದೇಶಿಕ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ, ಸಂಸದೆ ಪೆÇ್ರ| ವರ್ಷಾ ಏಕನಾಥ ಗಾಯಕ್ವಾಡ್ ನೇಮಕ ಮಾಡಿದ್ದಾರೆ.

ಮುಂಬಯಿ ವಿಟಿ ಯ ಮಹಾಪಾಲಿಕಾ ಮಾರ್ಗದಲ್ಲಿನ ಆಜಾದ್ ಮೈದಾನ್ ರಾಜೀವ್ ಗಾಂಧಿ ಭವನದಲ್ಲಿ ಇತ್ತೀಚೆಗೆ ಇನಿಶ್ ಡಿಸೋಜಾ ಅವರಿಗೆ ನೇಮಕಪತ್ರವನ್ನಿತ್ತು ವರ್ಷಾ ಏಕನಾಥ ಗಾಯಕ್ವಾಡ್ ಅಭಿನಂದಿಸಿದ್ದು, ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕಿ ಸೋನಿಯಾಜಿ ಗಾಂಧಿ ಮತ್ತು ಧುರೀಣ ರಾಹುಲ್ ಗಾಂಧಿ ಹಾಗೂ ಮುಂಬಯಿಯಲ್ಲಿನ ಸಹ ನಾಗರಿಕರ ಹೃದಯಗಳು ಮತ್ತು ಮನಸ್ಸಿನಲ್ಲಿ ಏಕತೆ ಮತ್ತು ಶಾಂತಿಯ ಸಂದೇಶವನ್ನು ಹರಡಲು ಈ ಸೇವಾ ನಿರ್ವಹಣೆಯಲ್ಲಿ ನಿಮ್ಮ ಸಾಮರ್ಥ್ಯದೊಂದಿಗೆ ಅತ್ಯುತ್ತಮ ಕೆಲಸ ಮಾಡುತ್ತೀರಿ ಎಂದು ಆಶಿಸುತ್ತೇವೆ ಎಂದಿದ್ದಾರೆ.

ಕಾಂಗ್ರೆಸ್ ಪದಾಧಿಕಾರಿಗಳಾಗಿ ನಮ್ಮ ಮುಂದೆ ಹಲವು ಸವಾಲುಗಳಿವೆ. ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ನಿಮ್ಮ ದಕ್ಷ ಸೇವೆಯನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಲು ಸಮರ್ಪಿಸಬೇಕು ಎಂದು ಗಾಯಕ್ವಾಡ್ ತಿಳಿಸಿ ಮುಂದಿನ ಸೇವೆಗೆ ಶುಭ ಹಾರೈಸಿದರು.

ಇನಿಶ್ ಡಿಸೋಜಾ ಇವರು ಮೂಲತಃ ಉಡುಪಿ ಜಿಲ್ಲೆಯ ಶಿರ್ವಾ ಸನಿಹದ ಪಿಲಾರ್‍ಕಾನಾ ಅಲ್ಲಿನ ಸದ್ಯ ವಿಖ್ರೋಲಿ ಪೂರ್ವದಲ್ಲಿ ವಾಸವಾಗಿರುವ ಐವಾನ್ ಡಿಸೋಜಾ ಶಿರ್ವಾ ಇವರ ಸುಪುತ್ರರಾಗಿದ್ದಾರೆ. ಐವಾನ್ ಇವರು ಕೂಡಾ ಇತ್ತೀಚೆಗೆ ಮುಂಬಯಿ ಪ್ರದೇಶÀ ಕಾಂಗ್ರೆಸ್ ಸಮಿತಿ (ಎಂಆರ್‍ಸಿಸಿ) ಇದರ ಕಾರ್ಯದರ್ಶಿ ಆಗಿ ಸೇವಾ ನಿರತರಾಗಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now