
ಉಡುಪಿ : ಉಡುಪಿ ಜಿಲ್ಲೆಗೆ ಶಿಕ್ಷಣದ ಕಾಶಿಯೆಂದು ಕರೆಯುತ್ತಾರೆ. ಪ್ರತಿವರ್ಷ ಹತ್ತನೇ ಮತ್ತು ಪಿಯುಸಿ ತರಗತಿಗಳ ಪಬ್ಲೀಕ್ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನವನ್ನು ರಾಜ್ಯಮಟ್ಟದಲ್ಲಿ ಪಡೆಯುತ್ತ ಬರುತ್ತಿದೆ. ಇಪ್ಪತ್ತು ವರ್ಷಗಳಿಂದ ಪ್ರತಿಭಾ ಕಾರಂಜಿ ಸ್ಫರ್ಧೆಗಳು ನಡೆಯುತಿದ್ದು ಪಠ್ಯೇತರ ವಿಷಯಗಳಾದ ಭರತನಾಟ್ಯ, ಸಂಗೀತ, ಭಾಷಣ, ಚರ್ಚೆ, ಕ್ವಿಜ್, ಚಿತ್ರಕಲೆ ವಿಭಾಗದಲ್ಲೂ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿ ರಾಜ್ಯಮಟ್ಟದಲ್ಲಿ ನಾವು ಪ್ರಥಮ ಸ್ಥಾನಿಯಾಗಬೇಕು ಎಂದು ಉಡುಪಿ ಶಾಸಕ ಯಶ್‍ಪಾಲ್ ಸುವರ್ಣ ಕರೆ ನೀಡಿದರು.
ಅವರು ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ಆಯೋಜಿಸಿದ ಬ್ರಹ್ಮಾವರ ವಲಯ ಮಟ್ಟದ ಪ್ರತಿಭಾ ಕಾರಂಜಿ 2025 ಉದ್ಘಾಟಿಸಿ ಮತನಾಡಿದರು. ಸಂಸ್ಥೆ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಉಡುಪಿ ಜಿಲ್ಲೆ ಸಾಂಸ್ಕøತಿಕ ನಗರಿಯಾಗಬೇಕಾದರೆ ಶಾಸ್ತ್ರೀಯ ಸಂಗೀತ, ನಾಟ್ಯ, ಪದ್ಯರಚನೆಯಲ್ಲಿ ವಿದ್ಯಾರ್ಥಿಗಳು ಲವಲವಿಕೆಯಿಂದ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ ಮೌಂಟ್ ರೋಸರಿ ಚರ್ಚಿನ ಧರ್ಮಗುರು ವಂ|ಡಾ| ರೋಕ್ ಡಿ’ಸೋಜ ಸ್ಪರ್ಧಾಳುಗಳಿಗೆ ಶುಭಾ ಹಾರೈಸಿ ಆಶೀರ್ವದಿಸಿದರು. ಉಡುಪಿ ನಗರ ಸಭಾಧ್ಯಕ್ಷ ದಿನಕರ ಹೇರೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಎಂ.ಎ ಗಫೂರ್, ಡಯೆಟ್ ಉಡುಪಿ ಪ್ರಾಂಶುಪಾಲ ಆಶೋಕ್ ಕಾಮತ್, ಚರ್ಚಿನ ಸಹಾಯಕ ಧರ್ಮಗುರು ಫಾ| ರೋಹನ್, ಮುಖ್ಯ ಶಿಕ್ಷಕಿ ಸಿ| ಆನ್ಸಿಲ್ಲಾ, ಶಿಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನೋಡಲ್ ಅಧಿಕಾರಿ ನಾಗರಾಜ್ ಭಟ್ ಪ್ರಾಸ್ತವಿಕ ನುಡಿಗಳನ್ನು ಆಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ, ಬ್ರಹ್ಮಾವರ ಶ್ರೀಮತಿ ಉಮಾ ಸ್ವಾಗತಿಸಿದರು ಪ್ರಶಾಂತ್ ಶೆಟ್ಟಿ ವಂದಿಸಿದರು. ಶಿಕ್ಷಕರಾದ ಸತೀಶ್ಚಂದ್ರ ಶೆಟ್ಟಿ ಮತ್ತು ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಾವರ ತಾಲೂಕಿನ ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಒಟ್ಟು 1500 ವಿದ್ಯಾರ್ಥಿಗಳು 37 ವಿಭಾಗಗಳಲ್ಲಿ ಸ್ಫರ್ಧಿಸಿದರು.
ಆರಂಭದಲ್ಲಿ ಸಂತಕಟ್ಟೆಯಿಂದ ಭವ್ಯ ಮೆರವಣಿಗೆಯಲ್ಲಿ ಆತಿಥಿ ಅಭ್ಯಗತರನ್ನು ಶಾಲಾ ವಾದ್ಯತಂಡ ಜೊತೆಗೆ ಪೂರ್ಣಕುಂಭ ಸ್ವಾಗತ ನೀಡಿ ಸಭಾಂಗಣಕ್ಕೆ ಕರೆ ತರಲಾಯಿತು. ಶಾಲೆಯ ಹಿರಿಯ ಶಿಕ್ಷಕ ಆಲ್ವಿನ್ ದಾಂತಿ ಶಿಕ್ಷಕಿ ವನಿತಾ ಫೆರ್ನಾಂಡಿಸ್ ಸಮಗ್ರ ನಿರ್ವಹಣೆ ಮಾಡಿದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now