ಅಯೋಧ್ಯೆ ರಾಮನಿಗೆ ಉಡುಪಿ ಯಿಂದ ಸ್ವರ್ಣಾಭರಣ.. ಸ್ವರ್ಣ ಜ್ಯುವೆಲ್ಲರ್ಸ್ ನಲ್ಲಿ ತಯಾರಿ

ಅಯೋಧ್ಯೆ ರಾಮನಿಗೆ ಉಡುಪಿ ಯಿಂದ ಸ್ವರ್ಣಾಭರಣ.. ಸ್ವರ್ಣ ಜ್ಯುವೆಲ್ಲರ್ಸ್ ನಲ್ಲಿ ತಯಾರಿ

0Shares

ಅಯೋಧ್ಯೆ ರಾಮಮಂದಿರದ ಮೊದಲ ಮಹಡಿಯಲ್ಲಿ ನಿರ್ಮಿತವಾಗಿರುವ ಶ್ರೀರಾಮ ದರ್ಬಾರ್ ನಲ್ಲಿರುವ ಶ್ರೀರಾಮ‌ಪಟ್ಟಾಭಿಷೇಕ ದ ಶ್ರೀರಾಮ‌ಸೀತೆ ಲಕ್ಷ್ಮಣ ಭರತ ಶತ್ರುಘ್ನ ಆಂಜನೇಯ ವಿಗ್ರಹಗಳಿಗೆ ಉಡುಪಿಯಿಂದ ಸ್ವರ್ಣಾಭರಣಗಳನ್ನು ತಯಾರಿಸಿ ಅರ್ಪಿಸಲಾಗಿದೆ. ಮಂದಿರದ ಟ್ರಸ್ಟ್ ನವರ ಮನವಿಯಂತೆ

ಉಡುಪಿಯ ಪ್ರಸಿದ್ಧ ಸ್ವರ್ಣ ಜ್ಯುವೆಲ್ಪರ್ಸ್ ನವರು ಕೇವಲ‌ ಹತ್ತು ದಿನಗಳಲ್ಲಿ ಈ ಆಭರಣಗಳನ್ನು ತಯಾರಿಸಿ ಕೊಟ್ಟಿದ್ದಾರೆ. ನಿನ್ನೆ ಸೋಮವಾರ ಸಂಸ್ಥೆಯ ಶ್ರೀ ಗುಜ್ಜಾಡಿ ದೀಪಕ್ ನಾಯಕ್ ಮತ್ತಿತರರು ಅಯೋಧ್ಯೆಗೆ ತೆರಳಿ ಈ ಆಭರಣಗಳನ್ನು ಶಿಲಾ ವಿಗ್ರಹಳಿಗೆ ತೊಡಿಸಿರುತ್ತಾರೆ . ಈ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿರುವ ಸಂಸ್ಥೆಯ ಗುಜ್ಜಾಡಿ ರಾಮದಾಸ ನಾಯಕರು ಇದೊಂದು ನಿಜವಾಗಿಯೂ ನಮಗೆ ಅಪೂರ್ವ ಅವಕಾಶ .‌ಗುರುಹಿರಿಯರ ಪುಣ್ಯದಿಂದ ಲಭಿಸಿದೆ. ಅಯೋಧ್ಯೆ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡು ಪ್ರಧಾನಮಂತ್ರಿಯವರಿಂದ ಭಗವಾಧ್ವಜಾರೋಹಣದ ಹೊತ್ತಲ್ಲೇ ಈ ಆಭರಣ ತಯಾರಿಯ ಅವಕಾಶ ದೊರೆತದ್ದು ನಮ್ಮ ” ಸ್ವರ್ಣ” ಕುಟುಂಬಕ್ಕೆ ಶಾಶ್ವತ ಸ್ಮರಣೀಯ ಕ್ಷಣವಾಗಿದೆ .

ಈ ಹಿಂದೆ ಕಾಶಿ ಮಠಾಧೀಶರ ಆದೇಶದಂತೆ ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ಬೆಳ್ಳಿ ಪಲ್ಲಕ್ಕಿ ಸ್ವರ್ಣ ಅಟ್ಟೆ ಪ್ರಭಾವಳಿ ಕಂಠೀಹಾರ ಇತ್ಯಾದಿಗಳನ್ನು ನಿರ್ಮಿಸುವ ಅವಕಾಶವೂ ದೊರೆತಿತ್ತು ಎಂದೂ ಅವರು ಸ್ಮರಿಸಿದ್ದಾರೆ. ಈಗ ಪಟ್ಟಾಭಿಷೇಕದ ಎಲ್ಲಾ ವಿಗ್ರಹಗಳಿಗೆ ಕಾಲಿನ ನೂಪುರ , ಕಂಠೀಹಾರ ಕಿರೀಟ ಕರ್ಣ ಕುಂಡಲ ಸಹಿತ ಕಾಲಿನಿಂದ ತಲೆಯ ವರೆಗೆ ಎಲ್ಲಾ ಆಭರಣಗಳನ್ನು ತಯಾರಿಸಿ ತೊಡಿಸಲಾಗಿದೆ .

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now