ಅ.26) : ಗಿರೀಶ್ ಆಳ್ವ ನೇತೃತ್ವದ “ವರಾಹ ಫೌಂಡೇಶನ್” ನ ಉದ್ಘಾಟನಾ ಸಮಾರಂಭ…

ಅ.26) : ಗಿರೀಶ್ ಆಳ್ವ ನೇತೃತ್ವದ “ವರಾಹ ಫೌಂಡೇಶನ್” ನ ಉದ್ಘಾಟನಾ ಸಮಾರಂಭ…

0Shares

ಪುತ್ತೂರು : ಬಡ ಅನಾರೋಗ್ಯ ಪೀಡಿತರಿಗೆ ಸಹಾಯ, ಆರ್ಥಿಕವಾಗಿ ಹಿಂದುಳಿದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಹಾಗೂ ಇನ್ನಿತರ ಸಮಾಜಮುಖಿ ಕೆಲಸಗಳನ್ನು ಮಾಡುವ ಉದ್ದೇಶದಿಂದ ಗಿರೀಶ್ ಆಳ್ವ ಅವರ ನೇತೃತ್ವದಲ್ಲಿ ಪ್ರಾರಂಭಿಸಿದ ವರಾಹ ಫೌಂಡೇಶನ್ (ರಿ) ಇದರ ಉದ್ಘಾಟನಾ ಸಮಾರಂಭ ನಾಳೆ (26-10-2025) ಬೆಳಗ್ಗೆ 9.30 ಕ್ಕೆ ಕುಪ್ಪೆಪದವು ಚರ್ಚ್ ವಠಾರದಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಈ ಪ್ರಯುಕ್ತ ಆರೋಗ್ಯ ತಪಾಸಣೆ ಶಿಬಿರ, ಕಣ್ಣಿನ ತಪಾಸಣೆ ಮತ್ತು ಕನ್ನಡಕ ವಿತರಣೆ, ದಂತ ತಪಾಸಣಾ ಶಿಬಿರ, ಆಧಾರ್ ಕಾರ್ಡ್ ನೊಂದಣಿ ಮತ್ತು ತಿದ್ದುಪಡಿ, ಅಂಚೆ ಜನ ಸಂಪರ್ಕ ಅಭಿಯಾನ , ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮತ್ತು ತಿದ್ದುಪಡಿ, ಪಡಿತರ ಚೀಟಿ ತಿದ್ದುಪಡಿ ಮತ್ತು ಆಯುಷ್ಮಾನ್ ಕಾರ್ಡ್ ನೋಂದಣಿ, ಗೃಹಲಕ್ಷ್ಮಿ,ಗೃಹ ಜ್ಯೋತಿ ನೋಂದಣಿ ಮತ್ತು ತಿದ್ದುಪಡಿ, ವಿಧವಾ ವೇತನ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ,ಮನಸ್ವಿನಿ ಯೋಜನೆಗಳ ನೋಂದಣಿ ಮುಂತಾದ ಸೇವೆಗಳು ಉಚಿತವಾಗಿ ಲಭ್ಯವಿರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now