ರಕ್ಷಿಸಲ್ಪಟ್ಟ ಮಹಿಳೆ ಸಂಬಂಧಿಕರ ವಶ

ರಕ್ಷಿಸಲ್ಪಟ್ಟ ಮಹಿಳೆ ಸಂಬಂಧಿಕರ ವಶ

0Shares

ಉಡುಪಿ – ಅಕ್ಟೋಬರ್ :- 8 – ಅಜ್ಜರಕಾಡು ಬ್ರಹ್ಮಗಿರಿ ಪರಿಸರದಲ್ಲಿ ರಾತ್ರಿಯ ಹೊತ್ತು ಬೆಳೆಬಾಳುವ ಆಭರಣಗಳನ್ನು ಧರಿಸಿದ್ದ ಅಪರಿಚಿತ ಮಹಿಳೆ ಯೊಬ್ಬರು ಹೆದರಿ ಅತ್ತಿತ್ತ ತಿರುಗಾಡುತ್ತಿದ್ದು ವಿಶು ಶೆಟ್ಟಿ ಅಂಬಲಪಾಡಿಯವರು ರಿಕ್ಷಾ ಪಾಪಣ್ಣನ ಸಹಾಯದಿಂದ ಸಖಿ ಸೆಂಟರಿಗೆ ದಾಖಲಿಸಿದ್ದು ಇದೀಗ ಸಂಬಂಧಿಕರ ಪತ್ತೆ ಮಾಡಿ ಆಕೆಯನ್ನು ಹಸ್ತಾಂತರಿಸಲಾಗಿದೆ.

ಅವಿವಾಹಿತ ಮಹಿಳೆ ರೇಣುಕಾ (50)ಗದಗ ಮೂಲದವರಾಗಿದ್ದು ಹಾಗೂ ಕಿವುಡರಾಗಿದ್ದು ಅಸಮತೋಲನ ಮಾನಸಿಕ ಸ್ಥಿತಿ ಉಳ್ಳವರಾಗಿದ್ದರು. ಇದೀಗ ಮಹಿಳೆಯ ಸಂಬಂಧಿಕರು ಪತ್ತೆಯಾಗಿದ್ದು ಮಹಿಳೆಯ ಸಹೋದರನ ಮಕ್ಕಳು ಉಡುಪಿಗೆ ಬಂದು ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾರೆ. ಮಹಿಳೆ ಕಾಣೆಯಾದ ದಿನದಿಂದ ಮನೆಯವರು ಹುಡುಕಾಟ ನಡೆಸಿ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು .

ಇದೀಗ ಮಹಿಳೆ ಪತ್ತೆಯಾಗಿರುವುದರಿಂದ ಸಂಬಂಧಿಕರು ನಿಟ್ಟುಸಿರು ಬಿಟ್ಟಿದ್ದಾರೆ. ರಕ್ಷಿಸಿದವರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಮಹಿಳೆಯನ್ನು ರಕ್ಷಿಸದೇ ಇದ್ದಲ್ಲಿ ಆಕೆಯ ಚಿನ್ನಾಭರಣ ರಾತ್ರಿ ಹೊತ್ತು ಕಳ್ಳರ ಪಾಲಾಗುತ್ತಿತ್ತು ಎಂದು ಸಂಬಂಧಿಕರು ಆತಂಕವನ್ನು ವ್ಯಕ್ತಪಡಿಸಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now