ಉಡುಪಿ ಜಿಲ್ಲಾ ಬಾಲಕಿಯರ ತಂಡಕ್ಕೆ ಮೈಸೂರು ವಿಭಾಗ ಪ್ರಶಸ್ತಿ*

ಉಡುಪಿ ಜಿಲ್ಲಾ ಬಾಲಕಿಯರ ತಂಡಕ್ಕೆ ಮೈಸೂರು ವಿಭಾಗ ಪ್ರಶಸ್ತಿ*

0Shares

ದಿನಾಂಕ 26/09/2026 ಶುಕ್ರವಾರ ಸರಕಾರಿ ಪ್ರೌಢಶಾಲೆ ಹೆಸ್ಕತ್ತೂರು, ಕುಂದಾಪುರ. ಇಲ್ಲಿ ನಡೆದ ಮೈಸೂರು ವಿಭಾಗದ ಮಟ್ಟದ 17 ವರ್ಷ ವಯೋಮಾನದ ಬಾಲಕಿಯರ ಕ್ರಿಕೆಟ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲಾ ತಂಡವು ಕೊಡಗು ತಂಡವನ್ನು ಸೋಲಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿರುತ್ತದೆ. ಉಡುಪಿ ಜಿಲ್ಲಾ ತಂಡವನ್ನು ಎಸ್. ಎಮ್. ಎಸ್. ಆಂಗ್ಲ ಮಾಧ್ಯಮ ಪ್ರೌಢಶಾಲೆ (ರಾಜ್ಯ ಪಠ್ಯಕ್ರಮ) ದ ಸಿಯಾನ ಡಿ’ ಅಲ್ಮೇಡಾ ಳ ನಾಯಕತ್ವದಲ್ಲಿ ಈ ಸಾಧನೆಯನ್ನು ಮಾಡಿದೆ. ಎದುರಾಳಿ ನೀಡಿದ ಅಲ್ಪ ಮೊತ್ತವನ್ನು ವಿಕೇಟ್ ನಷ್ಟವಿಲ್ಲದೆ ಬೆನ್ನಟ್ಟಿ ಪ್ರಶಸ್ತಿ ಜಯಿಸಿದೆ. ಎಸ್. ಎಂ. ಎಸ್. ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ, ಶಮಿತಾ ಶೆಟ್ಟಿ, ರವಿನಾ. ಅಹಾನ, ಭೂಮಿಕಾ ಮತ್ತು ಸಿಯಾನ ಡಿ ಅಲ್ಮೇಡ ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now