
ಉಡುಪಿಯ ಹೃದಯ ಭಾಗದಲ್ಲಿರುವ ಆಭರಣ ಮಳಿಗೆಯಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ಒಂದು ವಿಶಿಷ್ಟ ಗಣೇಶನ ಕಲಾಕೃತಿಯನ್ನು ಮಹೇಶ್ ಕಾಮತ್ ಅವರು ಅನಾವರಣಗೊಳಿಸಿದರು.
ಕಲಾವಿದರಾದ ಶ್ರೀನಾಥ್ ಮಣಿಪಾಲ್ ಮತ್ತು ರವಿಹಿರಬೆಟ್ಟು, ವೆಂಕಿ ಪಲಿಮಾರು ಅವರು ಈ ಕಲಾಕೃತಿಯನ್ನು ಸುಮಾರು 500ಕ್ಕೂ ಅಧಿಕ ಗೆರಟೆಗಳನ್ನು ಉಪಯೋಗಿಸಿ ರಚಿಸಿದ್ದಾರೆ. ಕಲಾಕೃತಿಯು ಸುಮಾರು 9 ಅಡಿ ಎತ್ತರವಿದೆ.
ಗಣೇಶ ಚತುರ್ಥಿಯ ಸಂದರ್ಭದಲ್ಲಿ ಮೂಡಿಬಂದ ಈ ಕಲಾಕೃತಿಯು ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ಕಲಾಕೃತಿಯನ್ನು ಶ್ರೀಕೃಷ್ಣ ಜನ್ಮಷ್ಟಮಿಯವರೆಗೆ ಸಾರ್ವಜನಿಕರ ಪ್ರದರ್ಶನಕ್ಕಿಡಲಾಗಿದೆ.


Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now