11ನೇ ವರ್ಷದ ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ

11ನೇ ವರ್ಷದ ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ

0Shares

ಉಡುಪಿ : ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಮತ್ತು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಮುದರಂಗಡಿ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ಅಂಬಾಗಿಲು ಅಮೃತ ಗಾರ್ಡನ್ ಆಡಿಟೋರಿಯಂನಲ್ಲಿ ಭಾನುವಾರ ನಡೆದ 11ನೇ ವರ್ಷದ ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ ಜರಗಿತು

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ವೇ . ಮೂ . ರಾಮಚಂದ್ರ ಅನಂತ್ ಭಟ್ , ವೇ . ಮೂ . ವಿಠ್ಠಲ್ ಭಟ್ ಮಂಗಳೂರು , ಸಿ ಎ ಸುಧೀರ್ ಪ್ರಭು ಬೆಂಗಳೂರು , ಹೋಟೆಲ್ ಉಧ್ಯಮಿ ಸಮಾಜ ಸೇವಕ ರಘುವೀರ್ ಶೆಣೈ ಆಂಧ್ರಪ್ರದೇಶ , ಪ್ರಸಿದ್ಧ ಗಾಯಕರಾದ ಶಂಕರ್ ಶಾನ್ ಬೆಂಗಳೂರು , ಬೋಗ್ ವಿದ್ಯಾಪೋಷಕ ನಿಧಿಯ ಅಧ್ಯಕ್ಷ ಸಿಎ ಎಸ್.ಎಸ್.ನಾಯಕ್ , ಸಿಎ ಗೋಪಾಲಕೃಷ್ಣ ಭಟ್ , ವಿನೋದ್ ಕಾಮತ್ ಕಲ್ಯಾಣಪುರ , ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಜಿ. ಸತೀಶ್ ಹೆಗ್ಡೆ ಕೋಟ , ಸಂಚಾಲಕ ಆರ್. ವಿವೇಕಾನಂದ ಶೆಣೈ , ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ , ಪಧಾದಿಕಾರಿಗಳು ಉಪಸ್ಥರಿದ್ದರು

ವಿದ್ಯಾ ಪೋಷಕ್‌ ನಿಧಿ:

ಉಡುಪಿ ಮತ್ತು ದ.ಕ.ಜಿಲ್ಲೆಯ ಒಟ್ಟು 393 ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ ನಿಧಿ ವಿದ್ಯಾರ್ಥಿವೇತನ,
ಉಡುಪಿ/ದ.ಕ/ಶಿವಮೊಗ್ಗ/ಉ.ಕ ಜಿಲ್ಲೆಯಲ್ಲಿ ತಂದೆತಾಯಿಯನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆಯಡಿಯಲ್ಲಿ 171 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ,

ಎಸ್‌ಎಸ್‌ಎಲ್‌ಸಿ/ಪಿಯುಸಿ ಪದ ವಿ/ಸ್ನಾತಕೋತ್ತರ/ಇಂಜಿನಿಯರಿಂಗ್/ ಮೆಡಿಕಲ್/ ಸಿಎ/ಕಂಪೆನಿ ಸೆಕ್ರೆಟರಿ/ ಪಿಎಚ್‌ಡಿ ಸಾಧನೆಗೈದ ರಾಜ್ಯದ 148 ಶೈಕ್ಷಣಿಕ ಸಾಧಕರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ಸಾಣೂರು ಸರಕಾರಿ ಪದವಿಪೂರ್ವ ವಿದ್ಯಾಲಯದ 20 ಮಂದಿ ಮತ್ತು ಸಾಣೂರು ಸರಕಾರಿ ಪ್ರೌಢ ಶಾಲೆಯ 10 ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಚೆಕ್ಕನ್ನು ಪ್ರಾಂಶುಪಾಲೆ ಸುಚೇತಾ ಕಾಮತ್ ರವರಿಗೆ ಹಸ್ತಾಂತರಿಸಲಾಯಿತು. ಹೀಗೆ.. ಒಟ್ಟು 85 ಲಕ್ಷ ರೂ. ವಿದ್ಯಾರ್ಥಿವೇತನ ವಿತರಣೆ ನಡೆಯಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now