ಸೇವೆಯ ಮೂಲಕ ಜೀವನದ ಸಾಫಲ್ಯತೆಯನ್ನು ಕಾಣಬೇಕು – ಸಿ.ಎ.ಕಮಲಾಕ್ಷ ಕಾಮತ್

ಸೇವೆಯ ಮೂಲಕ ಜೀವನದ ಸಾಫಲ್ಯತೆಯನ್ನು ಕಾಣಬೇಕು – ಸಿ.ಎ.ಕಮಲಾಕ್ಷ ಕಾಮತ್

0Shares

ಉಡುಪಿ : ಸೇವೆಯ ಮೂಲಕ ಜೀವನದ ಸಾಫಲ್ಯತೆಯನ್ನು ಕಾಣಬೇಕು. ರಾಮನ ನಡೆ ಕೃಷ್ಣನ ನುಡಿ ನಮ್ಮದಾಗಬೇಕು. ವಿದ್ಯಾರ್ಥಿಗಳು ಕಷ್ಟದ ಸಂದರ್ಭದಲ್ಲಿ ಕೈಹಿಡಿದ ಸಮಾಜದ ಋಣವನ್ನು, ಮುಂದೆ ವಿದ್ಯಾಭ್ಯಾಸದಲ್ಲಿ ಶ್ರೇಷ್ಠತೆಯ ಸಾಧನೆಗೈದು ಉದ್ಯೋಗ ಅಥವಾ ಉದ್ಯಮದ ಮೂಲಕ ಸಮಾಜಕ್ಕೆ ಹಿಂದುರುಗಿಸುವ ಸಂಕಲ್ಪ ಕೈಗೊಳ್ಳಬೇಕು ಎಂದು ಖ್ಯಾತ ಲೆಕ್ಕಪರಿಶೋಧಕ ಹಾಗೂ ದಾನಿಗಳಾದ ಸಿ.ಎ.ಕಮಲಾಕ್ಷ ಕಾಮತ್ ಹೇಳಿದ್ದಾರೆ.

ಅವರು ಉಡುಪಿಯ ಅಂಬಾಗಿಲು ಅಮೃತ ಗಾರ್ಡನ್ ಆಡಿಟೋರಿಯಂನಲ್ಲಿ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಮತ್ತು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಮುದರಂಗಡಿ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಡೆದ 11ನೇ ವರ್ಷದ ವಿದ್ಯಾ ಪೋಷಕ ನಿಧಿ ವಿದ್ಯಾರ್ಥಿವೇತನ ವಿತರಣೆ, ಶೈಕ್ಷಣಿಕ ಪ್ರೇರಣಾ ಕಾರ್ಯಾಗಾರ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯು ಸಮಾಜ ಸಂಘಟ ನೆ ಮತ್ತು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಂಕಷ್ಟಕ್ಕೆ ನೆರವಾಗುತ್ತಿರುವುದು ಶ್ಲಾಘನೀಯ.

ಯುವ ಪೀಳಿಗೆ ವಿದ್ಯಾಭ್ಯಾಸದ ಜತೆಗೆ ಸಂಸ್ಕೃತಿ ಮತ್ತು ಸಂಸ್ಕಾರದವನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ವಿದ್ಯಾಪೋಷಕ ನಿಧಿಯ ಅಧ್ಯಕ್ಷ ಸಿಎ ಎಸ್.ಎಸ್.ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ವಿದ್ಯಾಭ್ಯಾಸಕ್ಕೆ ನೀಡುವ ನೆರವು ಸಮಾಜದ ಏಳಿಗೆಗೆ ವಿನಿಯೋಗವಾಗಬೇಕು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಜನತೆ ಉದ್ಯೋಗ ಪಡೆಯುವಲ್ಲಿ ಮಾತ್ರ ತೃಪ್ತಿ ಪಟ್ಟುಕೊಳ್ಳದೆ ಉದ್ಯಮಶೀಲತೆ ಮೂಲಕ ನೂರಾರು ಜನರಿಗೆ ಉದ್ಯೋಗ ದೊರಕಿಸುವ ಕಾರ್ಯಕ್ಕೆ ಮನ ಮಾಡಬೇಕು ಎಂದರು.

ಸಾಗರದ ಉದ್ಯಮಿ ಶಿವಾನಂದ ಭಂಡಾರ್ಕರ್ ಮಾತನಾಡಿ, ಕ್ರೀಡಾ ವಿಭಾಗದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಪರಿಶ್ರಮ ಪಡುತ್ತಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ ಮತ್ತು ವಿಶೇಷ ತರಬೇತಿಗೆ ತಗಲುವ ಖರ್ಚು ವೆಚ್ಚಗಳನ್ನು ಭರಿಸಲು ಜಿಎಸ್‌ಬಿ ಹಿತರಕ್ಷಣಾ ವೇದಿಕೆಯ ಮೂಲಕ ಸಹಕರಿಸುವುದಾಗಿ ಘೋಷಿಸಿದರು.

ಬೆಂಗಳೂರಿನ ಉದ್ಯಮಿ ಬೇಲಾಡಿ ಜಯವಂತ ಕಾಮತ್, ಶಿವಮೊಗ್ಗದ ಸಾಮಾಜಿಕ ಮುಂದಾಳು ಮಹಿಳಾ ಉದ್ಯಮಿ ರೀತಾಪ್ರಕಾಶ್ ಪ್ರಭು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವೇ . ಮೂ . ರಾಮಚಂದ್ರ ಅನಂತ್ ಭಟ್ ಮಾರ್ಗದರ್ಶನದಲ್ಲಿ ಸಾಮೂಹಿಕ ಶ್ರೀ ರಾಮನಾಮ ಜಪ ಪಠಣ ನೆಡೆಯಿತು , ಸುಪ್ರಸಿದ್ದ ಗಾಯಕರಾದ ಶಂಕರ್ ಶಾನ್ ಬೋಗ್ ಶ್ರೀ ರಾಮನಾಮ ಸ್ಮರಣೇ ಭಕ್ತಿ ಗಾನ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now