ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಉಡುಪಿಯ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪದಕ

ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಉಡುಪಿಯ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪದಕ

0Shares

ಉಡುಪಿ, ಆಗಸ್ಟ್ 08 : ಮಹಿಳಾ ಕ್ರೀಡಾಪಟುಗಳನ್ನು ಉತ್ತೇಜಿಸುವ ಸಲುವಾಗಿ ಎಚ್.ಸಿ.ಎಲ್. ಫೌಂಡೇಶನ್ ನವರು ಚೆನ್ನೈನಲ್ಲಿ ನಡೆಸಿದ ಏಳನೇ ಆವೃತ್ತಿಯ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಉಡುಪಿಯ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ, ಕಾಲೇಜು ವಿಭಾಗದ ಪೂರ್ಣಿಮಾ ಉದ್ದಜಿಗಿತ ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದರೆ, ಪ್ರೌಢಶಾಲಾ ವಿಭಾಗದ ಒಂಭತ್ತನೆಯ ತರಗತಿಯ ಮಾನ್ಯ ಹರ್ಡಲ್ಸನಲ್ಲಿ ಬೆಳ್ಳಿ ಪದಕ ಪಡೆದಿರುತ್ತಾರೆ.

ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರೀಯ ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಸಂಸ್ಥೆಯ ಪರವಾಗಿ ಸಂಭ್ರಮದ ಸ್ವಾಗತ ಕೋರಲಾಯಿತು. ಪ್ರಾಂಶುಪಾಲg ಜಗದೀಶ ಕುಮಾರ ಮತ್ತು ಮುಖ್ಯೋಪಾಧ್ಯಾಯಿನಿ ಇಂದಿರಾ ರವರು ಪದಕ ವಿಜೇತರನ್ನು ಸನ್ಮಾನಿಸಿದರು.

ದೈಹಿಕ ಶಿಕ್ಷಕರಾದ ವಸಂತ ಜೋಗಿ ಕ್ರೀಡಾಪಟುಗಳ ಸಾಧನೆಯ ಹೆಜ್ಜೆಗಳ ಬಗ್ಗೆ ಮಾತನಾಡಿದರು. ಶಿಕ್ಷಣ ಸೇವಾ ಸಮಿತಿಯ ಶೇಖರ ಕೋಟ್ಯಾನ್, ಉಪನ್ಯಾಸಕ ಮತ್ತು ಅಧ್ಯಾಪಕ ವೃಂದದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now