ಉಡುಪಿ ಜಿಲ್ಲಾ ಪಿಯು ಸಮಾಜಶಾಸ್ತ್ರ ಉಪನ್ಯಾಸಕರ ಕಾರ್ಯಾಗಾರ

ಉಡುಪಿ ಜಿಲ್ಲಾ ಪಿಯು ಸಮಾಜಶಾಸ್ತ್ರ ಉಪನ್ಯಾಸಕರ ಕಾರ್ಯಾಗಾರ

0Shares

ಸಮಾಜಶಾಸ್ತ್ರಜ್ಞರಿಂದ ಉತ್ತಮ ಸಂಸ್ಕೃತಿಯ ಕಡೆಗೆ ಸಮಾಜ

ನಾಗರಿಕತೆಯಿಂದ ಸಂಸ್ಕೃತಿಯ ಕಡೆಗೆ ಸಮಾಜವನ್ನು ಸಾಗಿಸುವಲ್ಲಿ ಸಮಾಜಶಾಸ್ತ್ರಜ್ಞರ ಪಾತ್ರ ಅತಿ ಮುಖ್ಯ ಎಂದು ಬ್ರಹ್ಮಾವರ ಎಸ್‌.ಎಂ.ಎಸ್‌ಕಾಲೇಜಿನ ಸಂಚಾಲಕ ಎಂ.ಸಿ ಮಥಾಯ್‌ಹೇಳಿದರು.

ಬ್ರಹ್ಮಾವರ ಎಸ್‌.ಎಂ.ಎಸ್‌ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಉಡುಪಿ ಜಿಲ್ಲಾ ಸಮಾಜಶಾಸ್ತ್ರ ಉಪನ್ಯಾಸಕರ ಒಂದು ದಿನದ ವಿಷಯವಾಧಾರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾಗರಿಕತೆ ಮತ್ತು ಸಂಸ್ಕೃತಿಗಳ ನಡುವಿನ ವ್ಯತ್ಯಾಸ, ಸಮಾಜದಲ್ಲಿ ನೈತಿಕತೆ ಮೌಲ್ಯಗಳ ಪತನವಾಗಿದ್ದು ಅವುಗಳನ್ನು ಸ್ಥಾಪಿಸುವಲ್ಲಿ ಉಪನ್ಯಾಸಕರ ಹೊಣೆಗಾರಿಕೆ ಹೆಚ್ಚಿದೆ ಎಂದರು.

ಇದಕ್ಕೂ ಮುನ್ನ ಎಸ್‌.ಎಂ.ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಐವಾನ್ ದೂನಾತ್ ಸುವಾರಿಸ್ ಉದ್ಘಾಟಿಸಿದರು.

ಕಾರ್ಯಾಗಾರದಲ್ಲಿ ನಿವೃತ್ತ ಪ್ರಾಂಶುಪಾಲೆ ಲಕ್ಷ್ಮೀಬಾಯಿ ಸಮಾಜಶಾಸ್ತ್ರದ ಬೋಧನೆ ಮತ್ತು ಸಮಾಜದಲ್ಲಿ ಶಿಕ್ಷಕರ ಪಾತ್ರದ ಕುರಿತು ವಿವರಿಸಿದರು. ಮೂಲ್ಕಿ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕಿ ಡಾ.ರೇಖಾ ಬಿ.ಎಸ್‌ಪ್ರಶ್ನೆ ಪತ್ರಿಕೆಯ ನೀಲ ನಕ್ಷೆ ಕುರಿತು ಮತ್ತು ಸಮಾಜಶಾಸ್ತ್ರದಲ್ಲಿ ತಂತ್ರಜ್ಞಾನದ ಬಳಕೆಯ ಕುರಿತು ಮಾಹಿತಿ ನೀಡಿದರು.

ಇದೇ ಸಂದರ್ಭ 2025-26 ನೇ ಸಾಲಿನಲ್ಲಿ ನಿವೃತ್ತಗೊಂಡ ಕೋಟ ವಿವೇಕ ಪಿಯು ಕಾಲೇಜಿನ ಉಪನ್ಯಾಸಕ ಅಶೋಕ ಕುಮಾರ್ ಶೆಟ್ಟಿ, ಬೈಂದೂರು ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಪಿ ನಾಯಕ್‌ ಅವರನ್ನು ಸನ್ಮಾನಿಸಲಾಯಿತು. ಸಮಾಜ ಶಾಸ್ತ್ರ ವಿಷಯದಲ್ಲಿ 2024 -25 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಅಂತಿಮ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ವಂಡ್ಸೆ ಕರ್ನಾಟಕ ಪಬ್ಲಿಕ್‌ಸ್ಕೂಲ್‌ನ ನವ್ಯ, ಉಡುಪಿ ಎಂ.ಜಿ.ಎಂ ಪಿಯು ಕಾಲೇಜಿನ ದಿವ್ಯ, ಕಾರ್ಕಳ ಭುವನೇಂದ್ರ ಪಿಯು ಕಾಲೇಜಿನ ಸ್ಪಂದನ ಕೆ.ಎಸ್‌, ಕೊಲ್ಲೂರು ಮೂಕಾಂಬಿಕಾ ಪದವಿ ಪೂರ್ವ ಕಾಲೇಜಿನ ಐಸಿರಿ ಮತ್ತು ಬೈಲೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಮುಝೈನಾ ಅವರಿಗೆ ನಗದು ಬಹುಮಾನ ಮತ್ತು ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.

ಕೋಟ ಪಡುಕರೆ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕಿ ಡಾ.ಸುನೀತಾ, ಉಡುಪಿ ಜಿಲ್ಲಾ ಸಮಾಜಶಾಸ್ತ್ರ ಉಪನ್ಯಾಸಕ ಸಂಘದ ಗೌರವ ಅಧ್ಯಕ್ಷ ಪ್ರಕಾಶ ಶೆಟ್ಟಿ ಇದ್ದರು.

ಸಂಘದ ಅಧ್ಯಕ್ಷ ಜೈ ಶಂಕರ್ ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ರಾಘವೇಂದ್ರ ಅಡಿಗ ಮತ್ತು ತೆಂಕನಿಡಿಯೂರು ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕಿ ಛಾಯಾ ವಂದಿಸಿದರು. ಸಂಘದ ಖಜಾಂಚಿ ಶಿವರಾಮ ಐತಾಳ ನಿವೃತ್ತರ ಪರಿಚಯ ನೀಡಿದರು. ಸಂಘದ ಉಪಾಧ್ಯಕ್ಷೆ ಶುಭಾ ಗೀತಾ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಜತೆ ಕಾರ್ಯದರ್ಶಿ ಗಣೇಶ ಹೆಬ್ಬಾರ್‌ಕಾರ್ಯಕ್ರಮ ನಿರೂಪಿಸಿದರು. ಎಸ್‌.ಎಂ.ಎಸ್‌ಪಿಯು ಕಾಲೇಜಿನ ಉಪನ್ಯಾಸಕ ವಿಜಯ ಆಳ್ವ ಸಹಕರಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now