
ಈ ಭೂಮಿ ಮೇಲಿರುವ ಯಾವುದೇ ವನ್ಯ ಜೀವಿಯಾಗಲಿ ಕ್ರಿಮಿ ಕೀಟಗಳಾಗಲಿ ಪರಿಸರದ ನಾಶ ಮಾಡಲ್ಲ. ಸಾಮಾಜಿಕ ಪ್ರಜ್ಞೆವಿರುವ ವಿದ್ಯಾವಂತ ಜನರೇ ಪರಿಸರವನ್ನು ನಾಶ ಮಾಡುತ್ತಾರೆ. ಅಭಿವೃದ್ಧಿ ಮತ್ತು ಅಧುನಿಕತೆ ಎಂದು ಹಸಿರು ಹೊದಿಕೆಯ ಮೇಲೆ ಕೊಡಲಿ ಏಟು ನೀಡುತ್ತಿದ್ದಾನೆ. ನಾವು ಪರಿಸರದ ವಿರುದ್ಧ ಹೋದ್ದಲ್ಲಿ ಪರಿಸರವೇ ನಮ್ಮ ವಿರುದ್ಧ ಬರುತ್ತಿದೆ. ಅಕಾಲಿಕ ಮಳೆ, ಅನಾವೃಷ್ಟೀ, ಅತೀವೃಷ್ಟೀ, ಬರಗಾಲ, ಸುನಾಮಿ, ಭೂಕಂಪ, ಭೂಕುಸಿತಗಳೇ ಇದಕ್ಕೆ ಸಾಕ್ಷಿ ಎಂದು ಮೌಂಟ್ ರೋಸರಿ ಚರ್ಚಿನ ಸಹಾಯಕ ಧರ್ಮಗುರು ಫಾ| ರೋಹನ್ ಮಸ್ಕರೇನಸ್ ಹೇಳಿದರು. ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆ ಆಯೋಜಿಸಿದ ಪರಿಸರ ದಿನ ’ವನಮಹೋತ್ಸವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಗಿಡ ನೆಡುವುದು ಮಾತ್ರವಲ್ಲ ನೆಟ್ಟು ಗಿಡ ಮರವಾಗಿ ಬೆಳೆಯುವಂತೆ ನೋಡಿ ಕೊಳ್ಳಬೇಕೆಂದು ಕರೆ ನೀಡಿದರು.


ಪೂರ್ಣಾನಂದ ವನಮಹೋತ್ಸವದ ಮಹತ್ವವನ್ನು ತಿಳಿಸಿದನು. ವಿದ್ಯಾರ್ಥಿಗಳಿಂದ ಸಂಗೀತರೂಪಕ, ಸಮೂಹಗಾನ ಪರಿಸರ ಕಾಳಜಿಯ ನೃತ್ಯಗಳು ನಡೆದವು. ಪರಿಸರ ದಿನದ ಕುರಿತು ವಿದ್ಯಾರ್ಥಿಗಳೇ ನಿರ್ಮಿಸಿದ ಸಾಕ್ಷಚಿತ್ರದ ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳಾದ ಆನಿಶ್ ಮತ್ತು ಹರ್ಷಿತಾ ನಿರೂಪಿಸಿದರು. ಇಕೋ ಕ್ಲಬ್ಬಿನ ಅಧ್ಯಕ್ಷ ಅ್ಶಶೆಲ್ ಸ್ವಾಗತಿಸಿದರೆ , ವಿದ್ಯಾರ್ಥಿ ಮನ್ವಿತ್ ವಂದಿಸಿದರು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























