ಉಡುಪಿ ದಸರಾ ನಾಡ ಹಬ್ಬವಾಗಿ ಆಚರಿಸುವಂತಾಗಲಿ : ಪುತ್ತಿಗೆ ಶ್ರೀ

ಉಡುಪಿ ದಸರಾ ನಾಡ ಹಬ್ಬವಾಗಿ ಆಚರಿಸುವಂತಾಗಲಿ : ಪುತ್ತಿಗೆ ಶ್ರೀ

0Shares

ಉಡುಪಿ : ಉಡುಪಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ದಶಮ ವರ್ಷದ ಸಂಭ್ರಮದ ಉಡುಪಿ ದಸರಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಜರುಗಿತು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ ಎರಡನೇ ತಾರೀಖಿನವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದ್ದು ಅಕ್ಟೋಬರ್ 3 ನೇ ತಾರೀಖಿನಂದು ಉಡುಪಿ ದಸರಾ ವಿಜೃಂಭಣೆಯ ಶೋಭ ಯಾತ್ರೆ ಜರಗಲಿದೆ ಎಂದು ಸಮಿತಿಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಗೀತಾ ಮಂದಿರದಲ್ಲಿ ಉಡುಪಿ ದಸರಾದ ಪೋಸ್ಟರ್ ಬಿಡುಗಡೆ ಮಾಡಿ ಅನುಗ್ರಹಿಸಿದ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಮಾತನಾಡಿ ಹಿಂದೂ ಸಂಸ್ಕೃತಿಯ ಹಬ್ಬಗಳ ರಾಜ ನವರಾತ್ರಿ ಉಡುಪಿಯ ಪರ್ಯಾಯ ಮತ್ತು ಅಷ್ಟಮಿಯ ವಿಜೃಂಭಣೆಯ ಆಚರಣೆಯಂತೆ ಈ ಸಾರಿಯಿಂದ ಉಡುಪಿ ದಸರವು ನಾಡಹಬ್ಬದ ರೀತಿಯಲ್ಲಿ ಆಚರಿಸುವಂತಹ ಗಲಿ ಎಂದು ಆಶೀರ್ವದಿಸಿದರು ಪುತ್ತಿಗೆ ಪರ್ಯಾಯದ ಸಂದರ್ಭದಲ್ಲಿ ಶ್ರೀಕೃಷ್ಣನ ಸಾನಿಧ್ಯದಲ್ಲಿ ನಡೆಯಲಿರುವ ನವರಾತ್ರಿಯ ಎಲ್ಲಾ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಹಾರೈಸಿದರು

ಈ ಸಂದರ್ಭದಲ್ಲಿ ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ, ಸಮಿತಿಯ ಅಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ , ಪರ್ಯಾಯ ಸಮಿತಿಯ ರಮೇಶ್ ಭಟ್,ಉಡುಪಿ ದಸರಾ ಸಮಿತಿಯ ಪ್ರಮುಖರಾದ ಮಟ್ಟು ಲಕ್ಷ್ಮೀನಾರಾಯಣ ರಾವ್,ರಾಧಾಕೃಷ್ಣ ಮಂಡನ್ ಜೀ ವಿ ಆಚಾರ್ಯ, ತಾರಾ ಯು ಆಚಾರ್ಯ, ವೀಣಾ ಶೆಟ್ಟಿ,ಸುರೇಶ್ ಸೇರಿ ಗಾರ್, ಸತೀಶ್ ಕುಮಾರ್, ಸರೋಜಾ ಯಶವಂತ್, ಶೋಭಾ ಶೆಟ್ಟಿ,ಪ್ರದೀಪ್ ಕುಮಾರ್,ದೀಪಕ್ Shet, ಜಯರಾಮ್ ದೇವಾಡಿಗ, ಸುಕನ್ಯ ಶೇಖರ್, ಜಯರಾಮ್ ಜಿ,ಸುಜಾತ ದೇವಾಡಿಗ, ಪ್ರಭಾವತಿ ಅಲೆ ಊರು,ತಾರಾ ಸತೀಶ್, ಭಾರತಿ ಶೆಟ್ಟಿ,ಜಯಲಕ್ಷ್ಮಿ ಅಮೀನ್, ದಾಮೋದರ್ ಭಟ್ ಶಾಂತ ಸೇರಿ ಗಾರ್, ವಿಗ್ರಹ ರಚನೆಕಾರ ಕುಬೇರ ಶಿವಮೊಗ್ಗ ಮತ್ತಿತರರು ಉಪಸ್ಥಿತರಿದ್ದರು

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now