
ಉಡುಪಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಟ್ರಕ್ ನಿಂದ ಟ್ಯಾಂಕ್ ರಸ್ತೆಗೆ ಉರುಳಿದೆ. ವಾಹನ ಮತ್ತು ಟ್ಯಾಂಕ್ ಸಂಚಾರಕ್ಕೆ ಸಮಸ್ಯೆ ತಂದೊಡ್ಡಿದೆ. ಉಡುಪಿ ನಗರದಿಂದ ಹೊರಗಿರುವ ಕಿನ್ನಿಮುಲ್ಕಿ ಜಂಕ್ಷನ್ ಸಮೀಪ ಈ ಘಟನೆ ನಡೆದಿದೆ. ಹೆದ್ದಾರಿ ಪಕ್ಕದಲ್ಲಿ ಹಾಕುವ ರಸ್ತೆ ಸೂಚನಾ ಫಲಕ ಅಡ್ಡ ಬಂದ ಕಾರಣ ಟ್ರಕ್ ಗೆ ಮುಂದೆ ಸಾಗಲು ಸಾಧ್ಯವಾಗಿರಲಿಲ್ಲ. ಎರಡು ದಿನ ಅಲ್ಲೇ ನಿಲ್ಲಿಸಿದ್ದ ಚಾಲಕ , ಟ್ರಕ್ ಅನ್ನು ರಿವರ್ಸ್ ತೆಗೆದು ಬೇರೆ ರೂಟ್ ನಲ್ಲಿ ಹೋಗಲು ಪ್ರಯತ್ನ ಮಾಡಿದ್ದಾನೆ. ಈ ಸಂದರ್ಭ ಬಾರಿ ಗಾತ್ರದ ಟ್ಯಾಂಕ್ ರಸ್ತೆಗೆ ಉರುಳಿದೆ. ಉಡುಪಿ ಟ್ರಾಫಿಕ್ ಪೊಲೀಸರು ಟ್ರಕ್ ಚಾಲಕನಿಗೆ ಕೂಡಲೇ ತೆರವು ಮಾಡುವಂತೆ ಸೂಚನೆ ನೀಡಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























