ಉಡುಪಿ ಮೆಸ್ಕಾಂ ; ಕಿರಿಯ ಪವರ್ ಮ್ಯಾನ್ ಗಳ ನೇಮಕಾತಿ ಪ್ರಕ್ರಿಯೇ

ಉಡುಪಿ ಮೆಸ್ಕಾಂ ; ಕಿರಿಯ ಪವರ್ ಮ್ಯಾನ್ ಗಳ ನೇಮಕಾತಿ ಪ್ರಕ್ರಿಯೇ

0Shares

ಉಡುಪಿ ಮೇ 30 ; ಕರ್ನಾಟಕ ಸರಕಾರದ ಮಂಗಳೂರು ವಿದ್ಯುತ್ ಚ್ಛಕ್ತಿ ಸರಬರಾಜು ಕಂಪನಿ ನಿಯಮಿತ , ಉಡುಪಿ ವಲಯದ ಆಶ್ರಯದಲ್ಲಿ ಮೇ 26 ರಿಂದ 29ರವರೆಗೆ ಉಡುಪಿ ಮಹಾತ್ಮಾಗಾಂಧಿ ಕ್ರೀ ಡಾಂಗಣ ಅಜ್ಜರಕಾಡು ಉಡುಪಿಯಲ್ಲಿ ಕಿರಿಯ ಪವರ್ ಮ್ಯಾನ್ ಗಳ ನೇಮಕಾತಿ ಅಂಗವಾಗಿ ಸಹನಶಕ್ತಿ ಪರೀಕ್ಷೆ ಕೇಂದ್ರಕ್ಕೆ ಮೆಸ್ಕಾಂ ಮ್ಯಾನೇಜಿಂಗ್ ಡೈರೆಕ್ಟರ್ ( M D ) ಜಯಕುಮಾರ್ ಭೇಟಿ ನೀಡಿ , ವಿವಿಧ ಚಟುವಟಿಕೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು

ಮೆಸ್ಕಾಂ ಗೆ ರಾಜ್ಯದಲ್ಲಿ ಪವರ್ ಮ್ಯಾನ್ ಗಳ ಹೆಚ್ಚಿನ ಅವಶ್ಯಕತೆ ಇದ್ದು ಉಡುಪಿ ,ಮಂಗಳೂರು , ಶಿವಮೊಗ್ಗ ಕೇಂದ್ರಗಳಲ್ಲಿ ನೇಮಕಾತಿ ಪ್ರಕ್ರಿಯೇ ನೆಡೆಯುತಿದೆ , ಸಂಪೂರ್ಣ ವೀಡಿಯೊ ಚಿತ್ರೀಕರಣ ನೆಡೆಸಿ ಪಾರದಕ್ಷತೆ ನಿರ್ವಹಿಸಲಾಗಿದೆ , ಈಬಾರಿ ಮಹಿಳಾ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವೀ ಕಂಡಿದ್ದಾರೆ ,ಉಡುಪಿ ಯಲ್ಲಿ ಇಂದು 31 ಮಹಿಳೆಯರು ಸಹಿತ ಸುಮಾರು 201 ಪವರ್ ಮ್ಯಾನ್ ಭಾಗವಹಿಸಿದರು.

ಮೆಸ್ಕಾಂ ಮಂಗಳೂರಿನ ಆರ್ಥಿಕ ಸಲಹೆಗಾರರಾದ ಮುರುಳೀಧರ್ ನಾಯಕ್ , ಮೆಸ್ಕಾಂ ವಲಯ ನಿಯಂತ್ರಣ ಅಧಿಕಾರಿ ಉಮೇಶ್ ಗಟ್ಟಿ , AGM ವಸಂತ ಶೆಟ್ಟಿ , ಉಡುಪಿ ಮೆಸ್ಕಾಂ ಅಧೀಕ್ಷಕರಾದ ಶ್ರೀ ದಿನೇಶ್ ಉಪಾಧ್ಯಾಯ , ಅಧಿಕಾರಿಗಳಾದ ಪ್ರಸನ್ನ ಕುಮಾರ್ , ಗಣರಾಜ್ ಭಟ್ , ಮೆಸ್ಕಾಂ ವಿವಿಧ ವಿಭಾಗದ ಕಾರ್ಕಳ , ಹೆಬ್ರಿ , ಬೈಂದುರು , ಕುಂದಾಪುರ , ಬ್ರಹ್ಮಾವರ ,ಕಾಪು ಅಧಿಕಾರಿಗಳು , ಸಿಬ್ಬಂಧಿಗಳು ಉಪಸ್ಥಿತರಿದ್ದರು .

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now