ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಮಹಾಸಭೆ

ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಮಹಾಸಭೆ

0Shares

ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ ಮಹಾಸಭೆ ವರದಿ

ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ ಉಡುಪಿ ಇದರ ಮಹಾಸಭೆಯು 27.05.2025 ರಂದು ಸಹಕಾರಿಯ ನೋಂದಾಯಿತ ಕಚೇರಿಯಲ್ಲಿ ಅಧ್ಯಕ್ಷರಾದ ಶ್ರೀಮತಿ. ಜೆಸಿಂತಾ ಡಿ ಸೋಜ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭ ದೇವರ ಸ್ತುತಿಯೊಂದಿಗೆ ಪ್ರಾರ್ಥನೆಯನ್ನು ಶಾಖಾ ಸಿಬ್ಬಂದಿಗಳು ನೆರವೇರಿಸಿದರು. ಕಾರ್ಯಕ್ರಮಕ್ಕೆ ಶ್ರೀ ಗುರುಚರಣ ಇವರು ಸ್ವಾಗತಿಸಿದರು, ಲೆಕ್ಕ ಪರಿಶೋಧನಾ ವರದಿ ವಾಚನೆ ಮತ್ತು ನಿರೂಪಣೆಯನ್ನು ಮುಖ್ಯಕಾರ್ಯನಿರ್ವಾಹಕರಾದ ಶ್ರೀ ಜೀವನ್ ಡಿ ಸೋಜ ಇವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಶೈಲೇಶ್ ಆರ್ ಹಳದಿಪುರ ( ಸಮಾಜ ಸೇವಕರು) ಉಪಸ್ಥಿತರಿದ್ದರು. ಸಂಸ್ಥೆಗೆ ಆಶೀರ್ವದಿಸಿ ಅನುಭವದ ಮಾತುಗಳನ್ನಾಡಿ ಸಲಹೆ ಸೂಚನೆಗಳನ್ನು ನೀಡಿ ಸಹಕಾರಿಯ ಅಭಿವೃದ್ಧಿ ಮತ್ತು ಸಹಕಾರಿಯ ಮಹತ್ವದ ಕುರಿತು ತಮ್ಮ ಅನಿಸಿಕೆಗಳನ್ನು ತಿಳಿಸಿದರು.ತದನಂತರ ಅಧ್ಯಕ್ಷೀಯ ಭಾಷಣ ಮಾಡಿದ ಸಹಕಾರಿಯ ಅಧ್ಯಕ್ಷರಾದ ಶ್ರೀಮತಿ ಜೆಸಿಂತಾ ಡಿ ಸೋಜ ನಮ್ಮ ಸಹಕಾರಿಯು ಅಭಿವೃದ್ಧಿ ಹೊಂದುತ್ತಿದ್ದು ತಮ್ಮೆಲ್ಲರ ಸಹಕಾರದಿಂದ ಈ ಮಟ್ಟಕ್ಕೆ ಬೆಳೆದಿದೆ ಎನ್ನಲು ನಮಗೆ ಸಂತೋಷವಾಗುತ್ತದೆ ಎಂದು ತಿಳಿಸಿದರು. ಸದಸ್ಯರ ಸಂಪೂರ್ಣ ಸಹಕಾರ ಇನ್ನೂ ಹೆಚ್ಚು ನೀಡಿದಲ್ಲಿ ನಮ್ಮ ಸಹಕಾರಿಯು ಇನ್ನಷ್ಟು ಅಭಿವೃದ್ಧಿ ಹೊಂದಲು ಸಹಕಾರಿಯಾಗುವುದು ಎಂದು ತಿಳಿಸಿದರು. ಉಪಾಧ್ಯಕ್ಷರಾದ ಶ್ರೀ ಅಜಯ್ ಕುಮಾರ್, ನಿರ್ದೇಶಕರುಗಳಾದ ಶ್ರೀ ಪ್ರಶಾಂತ್ ಕುಮಾರ್, ಶ್ರೀ ಜೂದ್ ನೆಲ್ಸನ್ ಡಿ ಸೋಜಾ,
ಶ್ರೀ ಗುರುಚರಣ್ ನಾಯ್ಕ್, ಶ್ರೀ ರೋಹನ್ ಪ್ರಶಾಂತ್ ಕೂಲಾಸೊ, ಕುಮಾರಿ ಪ್ರಶಾಂತಿ ಪ್ರಿಯಾ ಕ್ಯಾಸ್ತಲಿನೋ, ಶ್ರೀಮತಿ ಸೀಮಾ, ಶ್ರೀ ಅಜಿತ್, ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಜೀವನ್ ಡಿ ಸೋಜಾ, ಸಿಬ್ಬಂದಿ ವರ್ಗದವರು ಹಾಗೂ ಸಹಕಾರಿಯ ಸದಸ್ಯರು ಉಪಸ್ಥಿತರಿದ್ದರು. ಧನ್ಯವಾದವನ್ನು ನಿರ್ದೇಶಕರಾದ ಶ್ರೀ ಪ್ರಶಾಂತ್ ಕುಮಾರ್ ಇವರು ಸಲ್ಲಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now