
ಉಡುಪಿ : ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಬ್ರಹ್ಮಾವರ , ಮೇ 22 ಗುರುವಾರದಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೆಯ ಸ್ವಾಮೀಜಿಯವರು ಶ್ರೀದೇವಳಕ್ಕೆ ಭೇಟಿ ನೀಡಿದರು.
ದೇವಳದ ವತಿಯಿಂದ ಪೂಜ್ಯ ಸ್ವಾಮೀಜಿಯವರನ್ನು ದೇವಾಲಯದ ದ್ವಾರದಲ್ಲಿ ವೇದಘೋಷ, ಪೂರ್ಣಕುಂಭ ಹಾಗೂ ಮಂಗಳವಾದ್ಯಗಳೊಂದಿಗೆ ಸ್ವಾಗತಸಲಾಯಿತು. ಬಳಿಕ ಶ್ರೀಗಳವರಿಂದ ದೇವಸ್ಥಾನದ ಪ್ರಧಾನ ದೇವರಾದ ಶ್ರೀ ಲಕ್ಷ್ಮೀ ವೆಂಕಟರಮಣ ದರ್ಶನ ಪಡೆದು ಬಳಿಕ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದೇವಳದ ಹತ್ತು ಸಮಸ್ತರಿಂದ ಶ್ರೀಗಳವರಿಗೆ ವಿಶೇಷ ಪಾದ ಪೂಜೆಸಲ್ಲಿಸಿ , ಕಾಣಿಕೆ ಸಮರ್ಪಿಸಲಾಯಿತು
ಪರಮಪೂಜ್ಯ ಶ್ರೀಗಳವರು ಭಕ್ತಾದಿಗಳಿಗೆ ಆಶೀರ್ವದಿಸಿ, “ ಶ್ರೀ ರಾಮನಾಮ ಸ್ಮರಣೆಯಿಂದ ಬದುಕು ಪಾವನ , ಭಕ್ತರ ಎಲ್ಲಾ ಸಮಸ್ಯೆಯನ್ನು ಪರಿಹರಿಸುವ ಶಕ್ತಿ ಜಪ ಅನುಷ್ಠಾನದಲ್ಲಿದೆ , ನಿತ್ಯ ಜಪ ಮತ್ತು ಶ್ರದ್ಧಾ-ಭಕ್ತಿಯುತ ಪ್ರಾರ್ಥನೆಗಳ ಮೂಲಕ ಮತ್ತಷ್ಟು ಸಮರ್ಪಣೆ ಸಲ್ಲಿಸೋಣ. ಸರ್ವ ಭಕ್ತಾದಿಮಾನಿಗಳಿಗೆ ಶ್ರೀ ದೇವರ ಸೇವೆಯನ್ನು ಮಾಡಲು ಇನ್ನಷ್ಟು ಸ್ಪೂರ್ತಿ ನೀಡಲಿ” ಎಂದು ಆಶೀರ್ವಚನ ನೀಡಿದರು.
ದೇವಸ್ಥಾನದಲ್ಲಿ ನಿರಂತರ ನಡೆಯುತ್ತಿರುವ ಶ್ರೀರಾಮನಾಮ ಜಪ ಅಭಿಯಾನದ
ಕೇಂದ್ರ ಕೆ ಶ್ರೀಗಳವರು ಭೇಟಿ ನೀಡಿದರು, 401 ದಿನ ಪೂರೈಸಿದ ಈ ವೇಳೆ ಶ್ರೀ ಗಳವರ ಉಪಸ್ಥಿತಿಯಲ್ಲಿ ವಿಶೇಷ ಶ್ರೀರಾಮನಾಮ ಜಪ ನಡೆಯಿತು. ಬಳಿಕ ಶ್ರೀಗಳು ವಸಂತ ಪೂಜೆಯಲ್ಲಿ ಪಾಲ್ಗೊಂಡು ಶ್ರೀದೇವರಿಗೆ ಆರತಿ ಬೆಳೆಗಿಸಿ ಭಾಕ್ತಾದಿಗಳಿಗೆ ಪ್ರಸಾದ ನೀಡಿ ಹರಿಸಿದರು ,
ಧಾರ್ಮಿಕ ಸಭಾ ವೇದಿಕೆಯಲ್ಲಿ ಕೆ ನರೇಂದ್ರ ಪೈ, ಮೊಕ್ತೇಸರರು , ಬಿ ಸತ್ಯನಾಥ ಪೈ, ಸೇವಾದಾರರು, ಬಿ ಪಾಂಡುರಂಗ ಭಟ್, ಪ್ರಧಾನ ಅರ್ಚಕರು, ಬಿ ಪಿ ಮೋಹನದಾಸ ಪೈ, ರಾಮ ನಾಮ ಅಭಿಯಾನ ಸಮಿತಿ ಸಂಚಾಲಕರು ಹಾಗು ಹತ್ತು ಸಮಸ್ತರು , ರಾಮ ನಾಮ ಜಪ ಅಭಿಯಾನ ಸಮಿತಿಯ ಪದಾಧಿಕಾರಿಗಳು , ಜಿ ಎಸ್ ಬಿ ಮಹಿಳಾ ಮಂಡಳಿ , ಜಿ ಎಸ್ ಬಿ ಯುವಕ ಮಂಡಳಿಯ ಸದಸ್ಯರು ಸಹಕರಿಸಿದರು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























