ದೆಹಲಿ NSD ವಿದ್ಯಾರ್ಥಿಗಳಿಗೆ ತಿಂಗಳೆಯಲ್ಲಿ ಯಕ್ಷಗಾನ ತರಬೇತಿ

ದೆಹಲಿ NSD ವಿದ್ಯಾರ್ಥಿಗಳಿಗೆ ತಿಂಗಳೆಯಲ್ಲಿ ಯಕ್ಷಗಾನ ತರಬೇತಿ

0Shares

ಉಡುಪಿ: ದೆಹಲಿಯ NSD ವಿದ್ಯಾರ್ಥಿಗಳಿಗೆ ಗುರು ಬನ್ನಂಜೆ ಸಂಜೀವ ಸುವರ್ಣ ರಿಂದ ಯಕ್ಷಗಾನ ತರಬೇತಿ ಶಿಬಿರ ಆರಂಭವಾಗಿದೆ. ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ತಿಂಗಳೆಯಲ್ಲಿ ತಿಂಗಳೆ ಪ್ರತಿಷ್ಠಾನದ ಸಹಯೋಗದೊಂದಿಗೆ ಈ 11 ದಿನಗಳ ಶಿಬಿರ ನಡೆಯಲಿದೆ.

ಬುಧವಾರ ಶಿಬಿರಕ್ಕೆ ಉದ್ಯಮಿ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಚಾಲನೆ ನೀಡಿದರು. ಗುರು ಸಂಜೀವ ಸುವರ್ಣ ಅವರಲ್ಲಿ ಯಕ್ಷಗಾನ ತರಬೇತಿ ಪಡೆಯುವುದೇ ಪೂರ್ವ ಜನ್ಮದ ಸುಕೃತ ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುರು ಬನ್ನಂಜೆ ಸಂಜೀವ ಸುವರ್ಣ ಮಾತನಾಡಿ, ಕಲಿಯುವ ತುಡಿತ ಸಾಧನೆಯ ಛಲ ಇವೆರಡು ಇದ್ದರೆ ಸಾಕು ಯಾವ ಕಲೆಯನ್ನು ಸುಲಲಿತವಾಗಿ ಅಭ್ಯಾಸ ಮಾಡಬಹುದು ಎಂದರು.

ವೇದಿಕೆಯಲ್ಲಿ ತಿಂಗಳೆ ಪ್ರತಿಷ್ಠಾನದ ಮುಖ್ಯಸ್ಥರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ಎನ್ ಎಸ್ ಡಿ ದೆಹಲಿ ಇದರ ಮುಖ್ಯಸ್ಥರಾದ ಪ್ರೊ.ವಿವೇಕ್, ಭಾಗವತರಾದ ಲಂಬೋಧರ ಹೆಗಡೆ, ಶ್ರೀಧರ ಹೆಗಡೆ ಉಪಸ್ಥಿತರಿದ್ದರು.

ಬನ್ನಂಜೆ ಸಂಜೀವ ಸುವರ್ಣ ರ ಶಿಷ್ಯರಾದ ಶೃತಿ ಬಂಗೇರ , ಪಲ್ಲವಿ ಕೊಡಗು , ಶಿಶಿರ್, ಮನೋಜ್, ಕಾರ್ತಿಕ್ ,ಸುಮಂತ್ ತಂಡದವರು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ದೆಹಲಿ NSD ಯ 30 ವಿದ್ಯಾರ್ಥಿಗಳು ಮುಂದಿನ 10 ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಭಾಗವಹಿಸಿ ಯಕ್ಷಗಾನವನ್ನು ಅಭ್ಯಾಸ ಮಾಡಲಿದ್ದಾರೆ. ಡಾ ಪ್ರಶಾಂತ ಶೆಟ್ಟಿ ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿದರು

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now