
ಉಡುಪಿ, ಏಪ್ರಿಲ್ 27 :ಉಡುಪಿ ಜಿಲ್ಲಾ ಅಬಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಯವರಿಗೆ ಏಪ್ರಿಲ್ 26 ರಂದು ಉಡುಪಿಯ ಓಷನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ “Critical Thinking, Logical Reasoning and other Essential Skills” ಎಂಬ ವಿಷಯದ ಕುರಿತು ಒಂದು ದಿನದ ವಿಶೇಷ ತರಬೇತಿ ಕಾರ್ಯಗಾರ ನಡೆಯಿತು.
ತರಬೇತಿ ಕಾರ್ಯಗಾರವನ್ನು ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಡಾ. ಬಾಲಕೃಷ್ಣ ಸಿ.ಎಚ್ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಎ.ಎಚ್ ಸಾಗರ್ ಭಾಗವಹಿಸಿ ಕಾರ್ಯಗಾರ ನಡೆಸಿಕೊಟ್ಟರು.
ಕಾರ್ಯಗಾರದಲ್ಲಿ ಜಿಲ್ಲೆಯ ಎಲ್ಲಾ ಅಬಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು..
ಜಿಲ್ಲಾ ಅಬಕಾರಿ ಉಪಯುಕ್ತೆ ಬಿಂದುಶ್ರೀ ಪಿ. ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಅಬಕಾರಿ ಅಧೀಕ್ಷಕ ಅಶೋಕ ಹೆಚ್. ವಂದಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























