
ಉಡುಪಿ: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಉಡುಪಿ 80 ಬಡಗಬೆಟ್ಟು ಗ್ರಾಮದ ತೆಂಕೋಡೆ 2ನೇ ಕ್ರಾಸ್ ಬಳಿ, ಟಿಎಪಿಎಂಐ ರಸ್ತೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಭಟ್ಕಳ ಗುಲ್ಟಾರ್ ಸ್ಟ್ರೀಟ್ ನಿವಾಸಿ ಅರಿಬ್ ಅಹ್ಮದ್ (31) ಎಂದು ಗುರುತಿಸಲಾಗಿದೆ.

ಆಂಧ್ರಪ್ರದೇಶದ ವಿಜಯವಾಡದಿಂದ ತಂದಿದ್ದ ಗಾಂಜಾವನ್ನು ಮಾರಾಟ ಮಾಡಲು ಅರಿಬ್ ಅಹ್ಮದ್ ಆಗಸ್ಟ್ 13 ರಂದು 2 ನೇ ಕ್ರಾಸ್‌ಗೆ ಬಂದಿದ್ದ. ಖರೀದಿಸಲು ಬಂದಿದ್ದ ಅಪರಿಚಿತ ವ್ಯಕ್ತಿಯ ಬಳಿ ತೆರಳುತ್ತಿದ್ದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯಿಂದ ರೂ 5.75 ಲಕ್ಷ ಮೌಲ್ಯದ 304 ಗ್ರಾಂ ಗಾಂಜಾ, ಎರಡು ಮೊಬೈಲ್ ಫೋನ್‌ಗಳು ಮತ್ತು ರೂ 1520 ನಗದು ವಶಪಡಿಸಿಕೊಳ್ಳಲಾಗಿದೆ. ನಗದು ಸೇರಿದಂತೆ ಒಟ್ಟು ರೂ 5,96,520 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಚಾರಣೆಯ ವೇಳೆ ಆರೋಪಿ ವಿಜಯವಾಡದ ಸೈಕಲ್ ರಿಕ್ಷಾದಿಂದ ಗಾಂಜಾ ಖರೀದಿಸಿದ ಬಗ್ಗೆ ಮಾಹಿತಿ ಬಾಯಿಬಿಟ್ಟಿದ್ದಾನೆ. ಸೆನ್ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























