ಯುಎಇ ಬಂಟ್ಸ್ ಇದರ ನೂತನ ಅಧ್ಯಕ್ಷರಾಗಿ ಸಂಘಟಕ, ಮಯೂರ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಕ್ವಾಡಿ ಪ್ರವೀಣ್ ಶೆಟ್ಟಿ ಅವರು ಇತ್ತೀಚಿಗೆ ನೇರವೇರಿದ ಯುಎಇ ಬಂಟ್ಸ್ ಸಭೆಯಲ್ಲಿ ಆಯ್ಕೆಯಾಗಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಕ್ವಾಡಿ ಎಂಬಲ್ಲಿ ೧೯೬೭ ಜುಲೈ ೬ ರಂದು ನಾರಾಯಣ ಶೆಟ್ಟಿ ಮತ್ತು ಸರೋಜಿನಿ ಶೆಟ್ಟಿ ದಂಪತಿಯರಿಗೆ ಪ್ರೀತಿಯ ಕುಮಾರನಾಗಿ ಹುಟ್ಟಿದ ಪ್ರವೀಣ್ ಹೆಸರಿಗೆ ತಕ್ಕಂತೆ ಪಾಠ ಪಾಠೇತರ ಚಟುವಟಿಕೆಗಳಲ್ಲಿ ಜಾಣನೆಂಬಂತೆ ಗುರುತಿಸಿಕೊಳ್ಳುತ್ತಲೇ ತನ್ನ ಮಾತಾಪಿತರ ಉತ್ತಮ ಸಂಸ್ಕಾರದ ಪಾಠದಿಂದ ಬಾಲ್ಯವನ್ನು ಕಳೆದವರು.
ಸರಕಾರಿ ಕಾಲೇಜು ಕೋಟೇಶ್ವರ ಹಾಗೂ ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜು ಮುಖಾಂತರ ಬಿ.ಎಸ್ಸಿ ಪದವಿ ಯನ್ನು ಸಂಪಾದಿಸಿದರು. ತನ್ನ ಕಠಿಣ ಪರಿಶ್ರಮ ದೃಢ ನಿರ್ಧಾರ ಹಾಗೂ ಜೀವನದಲ್ಲಿ ಸ್ಪಷ್ಟ ಗುರಿ ಇರಿಸಿಕೊಂಡ ಈ ಸ್ಪುರದ್ರೂಪಿ ತರುಣ ಕೊಲ್ಲಿ ರಾಷ್ಟ್ರದ ಯುಎಇಯಲ್ಲಿ ಪಾಲುದಾರಿಕೆ ಒಪ್ಪಂದ ಪ್ರಕಾರ ಫಾರ್ಚೂನ್ ಹೊಟೆಲನ್ನು ಆರಂಭಿಸಿದ ನಂತರ ಪ್ರವೀಣ್ ಜೀವನದಲ್ಲಿ ಹೊಸ ತಿರುವು ಕಾಣಿಸಿಕೊಂಡಿತು. ಉದ್ಯಮ ಜೀವನದ ಒಂದು ಹಂತದ ತನ್ನ ಪ್ರಯತ್ನ ಫಲ ನೀಡಿತಾದರೂ ಅದನ್ನೇ ತನ್ನ ಜೀವನದ ಸಾಧನೆಯೆಂದು ಭಾವಿಸದೆ ಮಹತ್ವಾಕಾಂಕ್ಷಿ ಪ್ರವೀಣ್ ಅವರು ಮುಂದೆ ತನ್ನದೇ ಆದ ಗ್ರೂಫ್ ಆಫ್ ಫಾರ್ಚೂನ್ ಹೊಟೇಲನ್ನು ಹುಟ್ಟು ಹಾಕಿ ತನ್ನ ಕಠಿಣ ಪರಿಶ್ರಮದಿಂದ ಕ್ರಮೇಣ ಯಶಸ್ಸನ್ನು ಸಂಪಾದಿಸುತ್ತಾ ಒಂದರ ಮೇಲೊಂದರಂತೆ ಹೊಟೇಲ್ ಗಳನ್ನು ಸ್ಥಾಪಿಸುತ್ತಾ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ ಗಟ್ಟಿ ನೆಲೆ ಹೊಂದುವಂತೆ ಮಾಡುವಲ್ಲಿ ಯಶಸ್ಸನ್ನು ಸಂಪಾದಿಸಿದರು.
ತಾನು ಒಂದು ಹಂತ ತಲುಪಿದ ಮೇಲೆ ಆರಂಭದಿಂದಲೂ ಸಾಮಾಜಿಕ ಚಿಂತನೆಯುಳ್ಳ ವ್ಯಕ್ತಿತ್ವ ಹೊಂದಿದ ಪ್ರವೀಣ್ ಶೆಟ್ಟಿ ಅವರು ಬಿಡುವಿಲ್ಲದ ವ್ಯವಹಾರಗಳ ಮಧ್ಯೆಯೂ ಸಮಾಜ ಪರ ಚಟುವಟಿಕೆಗಳಲ್ಲಿಯೂ ತನ್ನನ್ನು ತೊಡಗಿಸಿ ಕೊಂಡರು. ರಕ್ತದಾನ ಶಿಬಿರ, ಆರ್ತರಿಗೆ, ಅನಾರೋಗ್ಯ ಪೀಡಿತರಿಗೆ ಸಹಾಯ ಮುಂತಾದ ಸಮಾಜಪರ ಕೆಲಸಗಳಲ್ಲಿ ಮುತುವರ್ಜಿ ವಹಿಸುತ್ತಾ ಓರ್ವ ಉತ್ಸಾಹಿ ಯುವ ಸಮಾಜ ಸೇವಕನಾಗಿಯೂ ಗುರುತಿಸಿಕೊಂಡರು. ತನ್ನ ಸಮುದಾಯದ ಬಾಂಧವರನ್ನು ಒಂದುಗೂಡಿಸಿಕೊಂಡು ಅವರ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿ ಸಮಾನ ಆಸಕ್ತ ಬಂಧುಗಳನ್ನು ಒಟ್ಟು ಸೇರಿಸಿ ನಮ್ಮ ತವರು ನೆಲದ ಸಂಸ್ಕೃತಿ, ಆಚಾರ ವಿಚಾರಗಳನ್ನು ಕಾಪಾಡುವ ಬಗ್ಗೆ ಶ್ರಮಿಸಿದರು.
ಕರ್ನಾಟಕ ರಾಜ್ಯ ಕೊಲ್ಲಿ ರಾಷ್ಟ್ರಗಳಲ್ಲಿ ಆರಂಭಿಸಿದ ಕರ್ನಾಟಕ ಎನ್ ಆರ್ ಫೋರಮ್ ಯುಎಇ ಇದರ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಅತ್ಯಮೂಲ್ಯ ಸೇವೆ ನೀಡಿದರಲ್ಲದೇ ಎನ್.ಆರ್.ಐ ತುಳು ಕನ್ನಡಿಗರು ಸ್ಥಾಪಿಸಿದ ಅನೇಕ ಸಂಘಟನೆ ಗಳಲ್ಲಿ ಜವಾಬ್ದಾರಿ ಸ್ಥಾನ ನಿರ್ವಹಿಸುತ್ತಾ ಅದರ ಜೊತೆ ಜೊತೆಗೆ ಹೊಟೇಲ್ ಉದ್ಯಮವನ್ನೂ ಅಭಿವೃದ್ಧಿಗೊಳಿಸುತ್ತಾ ಇಂದು ಪ್ರವೀಣ್ ಶೆಟ್ಟಿ ಅವರು ಓರ್ವ ಉದ್ಯಮಿಯಾಗಿ, ಸಂಘಟಕರಾಗಿ, ಸಮಾಜ ಸೇವಕರಾಗಿ ಹೊರಹೊಮ್ಮಿದ್ದು ವಿಶ್ವ ಬಂಟರ ಸಂಘಗಳ ಒಕ್ಕೂಟ ಹಾಗೂ ಇತರ ಬಂಟ ಸಂಘಟನೆಗಳಿಗೆ ಉದಾರ ಹಸ್ತದ ಸಹಾಯ ನೀಡುವ ಪೋಷಕರಾಗಿ ಪ್ರಸಿದ್ಧಿ ಪಡೆದಿದ್ದಾರೆ. ಇಂದು ಉದಾರ ಹೃದಯಿ ದಾನಿಯಾಗಿ ಜನಪ್ರಿಯತೆಯನ್ನು ಗಳಿಸಿಕೊಂಡಿ ದ್ದಾರೆ. ಇದೀಗ ಇವರ ಕೀರ್ತಿ ಕಿರೀಟಕ್ಕೆ ಮುತ್ತಿನ ಮಣಿ ಸೇರಿಕೊಂಡಂತೆ ಯುಎಇ ಬಂಟರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಸಂಘಕ್ಕೆ ಭೀಮಬಲ ಬಂದಂತಾಗಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now