

ದಿನಾಂಕ 02.10.2024 ರಂದು ಬೆಳಿಗ್ಗೆ 9:30ಕ್ಕೆ ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ನಮ್ಮ ಉಡುಪಿ ಸ್ವಚ್ಛ ಉಡುಪಿ ಅಭಿಯಾನ ವನ್ನು ಮಣಿಪಾಲ – ಕೊಳಲಗಿರಿ ಸಂಪರ್ಕಿಸುವ ಶೀಂಬ್ರ ಫೆರಾರಿ ಸೇತುವೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೇಶ್ ಶೆಟ್ಟಿ ಜಪ್ಪುರವರು ಚಾಲನೆ ನೀಡಿ ಮಾತನಾಡುತ್ತಾ ಈ ಬ್ರಿಡ್ಜ್ ನಲ್ಲಿ ಗಿಡಗಂಟಿಗಳು ಕಸಗಳು ತುಂಬಿದ್ದು ಮಣ್ಣು ಮತ್ತು ವೈಗೆ ರಾಶಿ ಬಿದ್ದಿದ್ದರಿಂದ ಹಲವಾರು ಅಪಘಾತಗಳು ಸಂಭವಿಸಿದ್ದು ಹಾಗೂ ಈ ಪ್ರದೇಶದಲ್ಲಿ ತಡರಾತ್ರಿಯವರೆಗೂ ಮದ್ಯ ಸೇವನೆ ಅಕ್ರಮಕೂಟ, ಧೂಮಪಾನ ನಡೆಸುವವರ ಬಗ್ಗೆ ನಮ್ಮ ಸಂಘಟನೆಗೆ ದೂರು ಬರುತ್ತಿದ್ದು ಶೀಘ್ರವೇ ಸಿ.ಸಿ ಕ್ಯಾಮೆರಾ ಅಳವಡಿಸುವುದು ಮತ್ತು ದಾರಿದೀಪ ವ್ಯವಸ್ಥೆಯನ್ನು ಮಾಡಬೇಕು ಮತ್ತು ಈ ಬ್ರಿಜ್ಜಿನ ಕೆಳಗಡೆ ಪೈಪ್ ಹಾಗೂ ಇತರ ತ್ಯಾಜ್ಯ ವಸ್ತುಗಳು ಶೇಖರಣೆಯಾಗಿದ್ದು ಕೂಡಲೇ ನಗರಸಭೆ ತೆರಗೊಳಿಸುವಂತೆ ಅಗ್ರಹಿಸಿದರು. ಮುಖ್ಯ ಅತಿಥಿ ಮುಖ್ಯ ಅತಿಥಿ ಗಳಾಗಿ ಆಗಮಿಸಿದ ಉಡುಪಿ ನಗರಸಭೆ ಕೌನ್ಸಿಲರ್ ಅನಿತಾ ಕ್ರಿಶ್ಚಿಯನ್ ಯುನಿಟಿ ಪೆರಾಂಪಳ್ಳಿ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್, ಉಪಾಧ್ಯಕ್ಷ ಗಾಡ್ವಿನ್ , ಉಡುಪಿ ಜಿಲ್ಲಾ ವೀಕ್ಷಕರು ಫ್ರಾಂಕಿ ಡಿಸೋಜ ಕೊಳಲಗಿರಿ.
ಜಿಲ್ಲಾಧ್ಯಕ್ಷ ಕೃಷ್ಣಕುಮಾರ್ ಇಲ್ಲ ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರ, ಬ್ರಹ್ಮವರ ತಾಲೂಕು ಅಧ್ಯಕ್ಷ ಸತೀಶ್ ಪೂಜಾರಿ ಕೀಳಿಂಜೆ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ , ಕಾರ್ಮಿಕ ಘಟಕ ಉಪಾಧ್ಯಕ್ಷ ಕುಶಾಲ್ ಅಮೀನ್ ಬೆಂಗ್ರೆ, ಕಾರ್ಮಿಕ ಘಟಕ ಸಂಘಟನಾ ರೋಶನ್ ಬಂಗೇರ, ಮಹಿಳಾ ಕೋಶಾಧಿಕಾರಿ ಸುನಂದ ಕೋಟ್ಯಾನ್ , ಕಾರ್ಮಿಕ ಘಟಕ ಜೊತೆ ಕಾರ್ಯದರ್ಶಿ ಮಜಿದ್ ಮಹಿಳಾ ಕಾರ್ಯಕಾರಿ ಸದಸ್ಯರಾದ ಜ್ಯೋತಿ, ರವಿಜಾ ವಿದ್ಯಾರ್ಥಿ ಘಟಕ ಮುಖಂಡ ಅಭಿಷೇಕ್ ಭಾಗವಹಿಸಿದ್ದರು ಗಾಂಧಿ ಜಯಂತಿ ಆಚರಣೆ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಯಾಗಲು ಉಡುಪಿ ನಗರಸಭೆ , ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಸಂಪೂರ್ಣವಾಗಿ ಸಹಕಾರ ನೀಡಿದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























