ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮದಿನ ಆಚರಣೆ -ಟ್ರಿನಿಟಿ ಸೆಂಟ್ರಲ್ ಶಾಲೆ

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮದಿನ ಆಚರಣೆ -ಟ್ರಿನಿಟಿ ಸೆಂಟ್ರಲ್ ಶಾಲೆ

0Shares


ಉಡುಪಿ, 05 ಅಕ್ಟೋಬರ್ 2024: ಪೆರಂಪಳ್ಳಿಯ ಟ್ರಿನಿಟಿ ಸೆಂಟ್ರಲ್ ಶಾಲೆಯು ಅಕ್ಟೋಬರ್ 2, 2024 ರಂದು ಗಾಂಧೀ ಜಯಂತಿಯನ್ನು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಆಯೋಜಿಸಿ ಹರ್ಷೋದ್ಗಾರದಿಂದ ಆಚರಿಸಿದರು.

ಶಾಲೆಯ ಪ್ರಾಂಶುಪಾಲರು ರೆ|| ಫಾ|| ಡೊಮಿನಿಕ್ ಸುನಿಲ್ ಲೋಬೋ, ಉಪಪ್ರಾಂಶುಪಾಲರು, ರೆ|| ಫಾ|| ರವಿ ರಾಜೇಶ್ ಸೆರಾವೋ, ಸಂಯೋಜಕಿ ಮಿಸ್ ಮ್ಯಾಗ್ದಲೀನಾ ಲೂವಿಸ್, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮಹಾತ್ಮ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸುವುದರೊಂದಿಗೆ ಸಮಾರಂಭವನ್ನು ಪ್ರಾರಂಭಿಸಿದರು. ಇದನ್ನು ಅನುಸರಿಸಿ ದೀಪವನ್ನು ಬೆಳಗಳಾಯಿತು, ಇದು ಈ ಮಹಾನ್ ನಾಯಕರಿಗೆ ಗೌರವವನ್ನು ಸಂಕೇತಿಸುತ್ತದೆ.


ಸ್ಕೌಟ್ಸ್, ಗೈಡ್ಸ್, ಕಬ್ಸ್, ಬುಲ್ ಬುಲ್‍ನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸರ್ವಧರ್ಮ ಪ್ರಾರ್ಥನೆಯ ಮೂಲಕ ಸಭೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರು ರೆ|| ಫಾ|| ಡೊಮಿನಿಕ್ ಸುನಿಲ್ ಲೋಬೋ ಅವರು ಗಾಂಧೀಜಿಯವರ ತತ್ವಗಳ ಬಗ್ಗೆ ಮಾತನಾಡಿದರು.


5ನೇ ತರಗತಿಯ ವಿದ್ಯಾರ್ಥಿನಿ ಸಾಂಚಿ ಗಾಂಧೀ ಜಯಂತಿಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದಳು.
ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಿರೂಪಿಸಿದರು.


ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಸೇರಿ ತಮ್ಮ ಸುತ್ತಮುತ್ತ ಪರಿಸರವನ್ನು ಸ್ವಚ್ಛಗೊಳಿಸಲು ಕೈ ಜೋಡಿಸಿದರು. ಈ ಕಾರ್ಯಕ್ರಮವು ಏಕತೆ, ಸತ್ಯ ಮತ್ತು ಪರಿಸರ ಪ್ರೀತಿಗೆ ಧ್ವನಿಯಾಯಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now