ಕೋಲಾರ, 11 December,2024: ಸರ್ಕಾರ ಹಾಗೂ ಟ್ರಾಫಿಕ್ ಪೊಲೀಸರು ಹೆಲ್ಮಟ್ ಧರಿಸಿ ಬೈಕ್ನಲ್ಲಿ ಹೋಗಿ ಎಂದು ಎಷ್ಟು ಹೇಳಿದರೂ ಜನ ಕೇಳಲ್ಲ. ಈ ರೀತಿ ಅವರ ಮಾತು ಕೇಳದಿದ್ದರೇ ಯಾವ ತರ ಘಟನೆಗಳು ನಡೆದು ಹೋಗುತ್ತವೆ ಎನ್ನುವುದಕ್ಕೆ ಕೋಲಾರದ ಡಾ.ಸಂಧ್ಯಾ ಅವರ ಜೀವವೇ ಇಲ್ಲಿ ಸಾಕ್ಷಿ. ಡಾ.ಸಂಧ್ಯಾ ಇನ್ನಿಲ್ಲವಾದರೂ ಅವರು ಇಂದು 12 ಜನರಿಗೆ ಬೆಳಕಾಗಿದ್ದಾರೆ.
ಡಾ.ಸಂಧ್ಯಾ ಅವರು ಎಂದಿನಂತೆ ಮನೆಯಿಂದ ಕೆಲಸಕ್ಕೆ ಹೋಗುತ್ತಿದ್ದರು. ದುರದೃಷ್ಟ ಅನಿಸುತ್ತೆ ಡಿಸೆಂಬರ್ 6 ರಂದು ಅವರಿಗೆ ಬಸ್ ಮಿಸ್ ಆಗಿ ಬಿಡುತ್ತದೆ. ಹೀಗಾಗಿ ತಂದೆಯ ಬೈಕ್ನಲ್ಲಿ ಡ್ರಾಪ್ ತೆಗೆದುಕೊಂಡಿರುತ್ತಾರೆ. ಬೈಕ್ನಲ್ಲಿ ಹೋಗುವಾಗ ಹೆಲ್ಮಟ್ ಧರಿಸಿದೇ ಹಿಂದೆ ಕುಳಿತುಕೊಂಡಾಗ ಕೋಲಾರದ ಕೆಜಿಎಫ್ನಲ್ಲಿ ಬಳಿ ಆಕಸ್ಮಿಕವಾಗಿ ಕೆಳಕ್ಕೆ ಬೀಳುತ್ತಾರೆ. ಸ್ಥಳೀಯರ ಸಹಾಯದಿಂದ ತಕ್ಷಣ ಅವರನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಬೈಕ್ನಲ್ಲಿ ಇರುವಾಗ ಹೆಲ್ಮಟ್ ಧರಿಸದೇ ಇದ್ದಿದ್ದಕ್ಕೆ ಸಂಧ್ಯಾ ತಲೆಗೆ ಬಲವಾದ ಗಾಯಗಳು ಆಗಿ ಬೈನ್ ಪ್ರಾಬ್ಲಂ ಆಗಿರುತ್ತದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿರುತ್ತದೆ.
ಆದರೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಂಧ್ಯಾ ಕೊನೆಯುಸಿರೆಳೆಯುತ್ತಾರೆ. ಮಗಳ ದೇಹವನ್ನು ಮಣ್ಣಿಗೆ ಹಾಕಲು ಇಷ್ಟ ಇಲ್ಲದೆ ಇಡೀ ದೇಹವನ್ನು ದಾನ ಮಾಡಲು ಪೋಷಕರು ಮುಂದಾಗಿದ್ದರು. ಹೀಗಾಗಿಯೇ ಬಿಜಿಎಸ್, ಜಾಲಪ್ಪ ಆಸ್ಪತ್ರೆ ಅಧಿಕಾರಿಗಳ ಜೊತೆ ಈ ಕುರಿತು
ಹೀಗಾಗಿ ಆಸ್ಪತ್ರೆಗೆ ಮಗಳ 12 ಅಂಗಾಂಗ ದಾನ ಮಾಡಿ ಮಣ್ಣು ಮಾಡಿದೇವು. ಇಂದು ನನ್ನ ಮಗಳಿಂದ 12 ಕುಟುಂಬಸ್ಥರು ಖುಷಿಯಾಗಿದ್ದಾರೆ. ಇದರಿಂದ ನನಗೂ ನನ್ನ ಇನ್ನೊಬ್ಬಳು ಮಗಳಿಗೆ ಒಳ್ಳೆದಾಗುತ್ತದೆ ಎಂದು ಭಾವಿಸಿದ್ದೇವೆ ಎಂದು ಸಂಧ್ಯಾ ತಾಯಿ ಹೇಳಿದ್ದಾರೆ. ಒಂದು ವೇಳೆ ಹೆಲ್ಕೆಟ್ ಹಾಕಿದ್ದರೇ ಮಗಳು ಬದುಕುಳಿತ್ತಿದ್ದಳು. ಹೀಗಾಗಿ ಹೊರಗಡೆ ಬೈಕ್ನಲ್ಲಿ ಹೋಗುವಾಗ ದಯವಿಟ್ಟು ಎಲ್ಲರೂ ಹೆಲ್ಮಟ್ ಹಾಕಿ ಎಂದು ಮೃತಳ ತಾಯಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now