ಅಮಲು ಸೇವಿಸಿ ಡ್ರೈವ್ ಕಾರಿಗೆ ಹಿಂದೆಯಿಂದ ಡಿಕ್ಕಿ: ಚಾಲಕ ವಶಕ್ಕೆ

ಅಮಲು ಸೇವಿಸಿ ಡ್ರೈವ್ ಕಾರಿಗೆ ಹಿಂದೆಯಿಂದ ಡಿಕ್ಕಿ: ಚಾಲಕ ವಶಕ್ಕೆ

0Shares

ಸುಳ್ಯ ಸಮೀಪದ ಬೊಳುಬೈಲಿನಲ್ಲಿ ಎದುರಿನಿಂದ ಹೋಗುತಿದ್ದ ಕಾರಿಗೆ ಹಿಂಬದಿಯಿಂದ ಅಮಲು ಸೇವಿಸಿ ಡ್ರೈವ್ ಮಾಡಿಕೊಂಡು ಬಂದ ಕಾರು ಚಾಲಕ ನಿಯಂತ್ರಣ ಕಳೆದು ಗುದ್ದಿದ ಪರಿಣಾಮ ಎದುರು ಕಾರಿನಲ್ಲಿದ್ದ ಐವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತ ನಡೆಸಿದ ಚಾಲಕನನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸುಳ್ಯ ಜಯನಗರದ ಕುಕ್ಕೆಶ್ರೀ ವಸಂತ ಎಂಬವರು ಪತ್ನಿ, ಮಕ್ಕಳೊಂದಿಗೆ ಮಡಂತ್ಯಾರಿಗೆ ಕಾರಿನಲ್ಲಿ ಹೋಗುತಿದ್ದರು. ಈ ವೇಳೆ ಅವರ ಹಿಂಬದಿಯಿಂದ ಕಾರು ಚಲಾಯಿಸಿಕೊಂಡು ಬರುತ್ತಿದ್ದ ಪೇರಾಲು ಉದ್ದಂತಡ್ಕ ಮಂಜುನಾಥ್‌ ಎಂಬವರು ಚಲಾಯಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರಿನ ಕಾರಿಗೆ ಗುದ್ದಿತು. ಪಕ್ಕದ ವಿದ್ಯುತ್ ಕಂಬಕ್ಕೂ ಕಾರು ಗುದ್ದಿದೆ.

ಪರಿಣಾಮ ಕುಕ್ಕೆಶ್ರೀ ವಸಂತ ಹಾಗೂ ಅವರ ಕಾರಿನಲ್ಲಿದ್ದವರು ಗಾಯಗೊಂಡರು. ಅವರನ್ನು ಸ್ಥಳೀಯರು ಸುಳ್ಯಸರಕಾರಿ ಆಸ್ಪತ್ರೆಗೆ ದಾಖಲಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now