
ಸಂತ ಅಂತೋನಿ ಓರ್ಥೋಡಕ್ಸ್ ಸಿರಿಯನ್ ಚರ್ಚಿನ ಆಶೀರ್ವದಿತ ಫಾದರ್ ರೋಕ್ ಜೆಫ್ರಿನ್ ನೊರೋನ್ಹಾರ ನಾಮದಲ್ಲಿ ಪ್ರತಿಸ್ಥಾಪಿಸಲ್ಪಟ್ಟ ಕಾರ್ತಿಬೈಲು ಬೆಳ್ಮಾರನ ದಾನಿಗಳಾದ ಶ್ರೀ ಆಗೋಸ್ಟಿನ್ ಡಿಸೋಜ ಹಾಗೂ ಕುಟುಂಬಸ್ಥರು ದಾನವಾಗಿ ನೀಡಿದ ಜಾಗದಲ್ಲಿ ಸ್ಥಾಪಿಸಲ್ಪಟ್ಟ ಪವಿತ್ರ ಶಿಲುಬೆಯ ಹಬ್ಬವನ್ನು 01-10-2024 ರಂದು ಮಂಗಳವಾರ ಸಂಜೆ 6:00 ಗಂಟೆಗೆ ಆಚರಿಸಲ್ಪಟ್ಟಿತು ಚರ್ಚಿನ ಕುಟುಂಬಸ್ಥರು ನೆರೆದಿದ್ದರು . ಬಂದವರಿಗೆ ಪ್ರೀತಿಯ ಭೋಜನಕೂಟವನ್ನು ನೀಡಲಾಯಿತು,





02-10-24 ಬುಧವಾರದಂದು ಅಮ್ಮುಂಜೆ ಇಗರ್ಜಿಯಲ್ಲಿ ಬೆಳಿಗ್ಗೆ 8:00 ಗಂಟೆಗೆ ಹಬ್ಬದ ಬಲಿ ಪೂಜೆಯನ್ನು ಅರ್ಪಿಸಲಾಯಿತು ಈ ಎರಡು ದಿನದ ಕಾರ್ಯಕ್ರಮವನ್ನು ರೆವರೆಂಡ್ ಫಾದರ್ ಜಿ.ಎಂ. ಸ್ಕರಿಯ ರಂಭನ್ ರವರು ಮುಖ್ಯ ನೇತೃತ್ವವನ್ನು ವಹಿಸಿ ನಡೆಸಿಕೊಟ್ಟರು ಹಾಗೂ ಅವರ 60ನೇ ವರ್ಷದ ಜನ್ಮದಿನಾಚರಣೆಯನ್ನು ಪವಿತ್ರ ಬಲಿ ಪೂಜೆಯ ನಂತರ ಎಲ್ಲ ಭಕ್ತಾದಿಗಳು ಹಾಗೂ ಮಕ್ಕಳ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಸಂತ ಅಂತೋನಿ ಸೀರಿಯನ ಚರ್ಚಿನ ಧರ್ಮಗುರುಗಳು ಫಾದರ್ ಲಾರೆನ್ಸ್ ಡಿಸೋಜಾ ಎಲ್ಲಾ ಕಾರ್ಯಕ್ರಮದಲ್ಲಿ ಸಹಭಾಗಿಯಾಗಿ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು ಚರ್ಚಿನ ಟ್ರಸ್ಟಿ ವಿನ್ಸೆಂಟ್ ಡಿಸೋಜ, ಕಾರ್ಯದರ್ಶಿಯಾದ ವಿನುತ ಡಿಸೋಜ ಹಾಗೂ ರೋಹನ್ ಡಿಸೋಜ ಮತ್ತು ಆಡಳಿತ ಮಂಡಳಿ ಸದಸ್ಯರು ಹಾಗೂ ಇಗರ್ಜಿಯ ಸರ್ವಭಕ್ತರು ಉಪಸ್ಥಿತರಿದ್ದರು




Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























