ಬದುಕ ಕಲಿಸುವ ಕಥೆಗಳು – ಕಥೆ ಸಂಖ್ಯೆ 8

ಬದುಕ ಕಲಿಸುವ ಕಥೆಗಳು – ಕಥೆ ಸಂಖ್ಯೆ 8

0Shares

ಬಿದ್ದಾಗ ನಗುವ ನನ್ನವರಿಗಿಂತ ಕೈ ಹಿಡಿದು ಮೇಲೆತ್ತುವ ಮಂದಿ ಬೇಕಾಗಿದ್ದಾರೆ



ಕಥೆ 1
ಆ ಪಕ್ಷಿ ತನ್ನ ಮರಿಗೆ ಹಾರುವುದನ್ನು ಕಳಿಸಿಕೊಡುತ್ತಿತ್ತು, ಮೊದಲ ದಿನ ಎತ್ತರದ ಗುಡ್ಡದಿಂದ ಕೆಳಗೆ ದೂಡಿತು ದೊಪ್ಪನೆ ಬಿತ್ತು ಮರಿ ಮೈ ಅಲ್ಲಿ 2 ಗಾಯಗಳಾಗಿದ್ದವು ತಾಯಿ ಹಕ್ಕಿ ಮತ್ತೆ ಮರಿಯನ್ನು ತನ್ನ ಕೊಕ್ಕಿನಲ್ಲಿ ಕಚ್ಚಿ ಕೊಂಡು ತನ್ನ ಗೂಡಿಗೆ “ಹೋಗಿತ್ತು ..ಮಾರನೆಯ ದಿನ ಅದೇ ಗುಡ್ಡದಿಂದ ಮತ್ತೆ ಕೆಳಗೆ ದೂಡಿತು ,ಈ ಬಾರಿ ಮರಿ ಸ್ವಲ್ಪ ರೆಕ್ಕೆ ಬಡಿಯಿತು ಆದರೂ ಕೆಳಗೆ ಬಿದ್ದಿತ್ತು😔 ಆದರೆ ಒಂದು ಆಶ್ಚರ್ಯ ಗಮನಿಸಿತ್ತು ಅದು ..
ನಿನ್ನೆ ಬಿದ್ದಾಗ ಆದ ಪೆಟ್ಟು ಹೆಚ್ಚು ಇತ್ತು ಹಾಗೆ ಇಂದು ನೋವಾಗದೆ ಬಿದ್ದಿತ್ತು ,ರೆಕ್ಕೆ ಬಡಿದರೆ ನೋವು ಕಮ್ಮಿ ಆಗುತ್ತದೆ ಎನ್ನುವ ಸತ್ಯ ಮನವರಿಕೆ ಆಗಿತ್ತು ಮರಿಗೆ , ತಾಯಿ ಹಕ್ಕಿ ಮತ್ತೆ ಮರು ದಿನ ಗುಡ್ಡದಿಂದ ಕೆಳಗೆ ದೂಡಿತು ಮರಿಯನ್ನು , ಈ ಬಾರಿ ಹೆಚ್ಚು ರೆಕ್ಕೆ ಬಡಿಯಿತು ಆಶ್ಚರ್ಯ ಗಾಳಿಯಲ್ಲಿ ಹಾರುತಿತ್ತು ಹಕ್ಕಿ ಹಾರಿ ಮತ್ತೆ ತಾಯಿ ಬಳಿ ಬಂತು ಖುಷಿ ಖುಷಿ ಇಂದ ಅಲ್ಲಿಂದ ಹಾರಿ ಹೋಯಿತು …ಹೀಗೆ ತಾಯಿ ಮರಿಗೆ ಹಾರಲು (ಬದುಕಲು)ಕಲಿಸಿತ್ತು ….

ಬಿದ್ದಾಗ ಮೇಲೆತ್ತಿ ಮತ್ತೆ ಹಾರಲು ಉತ್ತೇಜಿಸಿದ್ದರಿಂದ ಮರಿ ಹಾರಾಟ ಕಲಿತಿತ್ತು..

ಕಥೆ.2
ತಾಯಿ ತನ್ನ 2 ಹೆಣ್ಣು ಮಕ್ಕಳನ್ನು ಒಂದೇ ದಿನ ಮದುವೆ ಮಾಡಿಸಿ ಕೊಟ್ಟಿದ್ದರು ಇಬ್ಬರೂ ಚೊಚ್ಚಲ ಹೆರಿಗೆಗೆ ತಾಯಿ ಮನೆಗೆ ಬಂದಿದ್ದರು ..ಇಲ್ಲಿ ಕಿರಿ ಮಗಳು ಎಲ್ಲ ವಿಧ ವಿಧದ ಅಡುಗೆ ಮಾಡಿದ್ದರೆ ದೊಡ್ಡವಳಿಗೆ ಅಡುಗೆ ಮಾಡಲು ಬರುತ್ತಿರಲಿಲ್ಲ😔 ..


ತಾಯಿಗೆ ಆಶ್ಚರ್ಯ ದಿಂದ ಕಿರಿಯವಳಲ್ಲಿ ವಿಚಾರಿಸಿದಳು ..ಅಮ್ಮ ನಮ್ಮ ಮನೆಯಲ್ಲಿ ನನ್ನ ಗಂಡ ಮಾವ ನಾನು ಏನೇ ಅಡುಗೆ ಮಾಡಿದರೂ ಏನೂ ಹೇಳದೆ ತಿನ್ನುತ್ತಾರೆ ಒಮ್ಮೆ ಮೈಸೂರ್ ಪಾಕ್ ಮಾಡಲು ಹೋಗಿ ಪಾಕ ಕಟ್ಟಲು ಆಗದೆ ಪುಡಿ ಪುಡಿ ಆಗಿತ್ತು ನನ್ನ ಗಂಡ ಅದನ್ನು ಪ್ಲೇಟ್ಗೆ ಹಾಕಿ ಸ್ಪೂನ್ ಹಾಕಿ ಸ್ಪೆಷಲ್ ಸ್ವೀಟ್ ಕಿಚಿಡಿ ಎಂದು ನನ್ನ ಅತ್ತೆ ಮಾವ ನೊಂದಿಗೆ ತಿಂದು ಕಾಲಿ ಮಾಡಿದ್ದರು😀


…ಹಾಗೆ ಬಿರಿಯಾನಿ ಮಾಡುವಾಗ ಅನ್ನಅತಿಯಾಗಿ ಬೆಂದಾಗಲೂ ಏನೂ ಹೇಳದೆ ತಿದ್ದಿದ್ದರು ಅದು ನನಗೆ ಮತ್ತಷ್ಟು ಅಡುಗೆ ಮಾಡಲು ಉತ್ತೇಜಿಸಿದವು, ಹಾಗಾಗಿ ಎಲ್ಲ ಹೊಸರುಚಿಗಳನ್ನೂ ಕಲಿತೆ ಹೇಗೂ ಹಾಳಾದರೆ ಯಾರೂ ಬಯ್ಯುದಿಲ್ಲ ನನ್ನ ಗಂಡ ಹೇಗೆ ಮಾಡಿದರೂ ತಿನ್ನುತ್ತಾರೆ ಎನ್ನುವ ಆತ್ಮವಿಶ್ವಾಸ ನನ್ನ ಅಡುಗೆಯನ್ನು ಸುಧಾರಿಸೀತಮ್ಮ ಎನ್ನುತ್ತಾಳೆ ಕಿರಿಯವಳು ..

ಆದರೆ ದೊಡ್ಡ ಮಗಳು ಅಳುತ್ತಾ ಹೇಳುತ್ತಾಳೆ, ಈ ವಿಷಯದಲ್ಲಿ ನಾನು ಅದೃಷ್ಟ ಹೀನೇ ಅಂದು ಮೊಸರನ್ನ ಮಾಡಿದ್ದೆ ಸ್ವಲ್ಪ ಉಪ್ಪು ಕಮ್ಮಿ ಆದದ್ದಕ್ಕೆ ಮನೆಯವರಾರು ಊಟ ಮಾಡಿರಲಿಲ್ಲ ಸಂಜೆತನಕ ಎಲ್ಲರೂ ನನಗೆ ಬಯ್ಯುತ್ತಲೇ ದಿನ ಕಳೆದರು ಇದು ಅಂದಿನಿಂದ ಅಡುಗೆ ಮನೆಗೆ ಹೋಗಲು ನನಗೆ ಹೆದರಿಕೆ ಆಗುತಿತ್ತು, ಅಮ್ಮ ಎಂದಳು ..ತಾಯಿಗೆ ಸ್ಪಷ್ಟ ವಾಗಿತ್ತು ಬಿದ್ದಾಗ ಕೈ ಹಿಡಿದು ಮೇಲೆತ್ತುವವರು ಬೇಕು ಮನೆಯಲ್ಲಿ ಎಂದು

ಈ ಎರಡು ಕತೆಗಳಲ್ಲಿ ಕೂಡ ನೀತಿ ಸ್ಪಷ್ಟ ಹುಟ್ಟಿದ ಮಗು ನಡೆಯಲು ಕಲಿಯುವಾಗ ಬೀಳುವುದು ಸಹಜ ಹಾಗೆಂದು ಬಿದ್ದಾಗ ನಾವು ನಗುತ್ತ ಕೂತರೆ ಅವಮಾನ ಮಾಡುತ್ತ ಕೂತರೆ ಆ ಮಗು ನಡೆಯಲು ಕಲಿಯಲಾರದು ಬದಲಾಗಿ ಅದಕ್ಕೆ ಧೈರ್ಯ ಹೇಳಿ ಕೈ ಹಿಡಿದು ನಡೆಸುವವರು ಬೇಕಿತ್ತು ಆ ಸಂದರ್ಭದಲ್ಲಿ,ಇಷ್ಟು ಮಾಡಿದಲ್ಲಿ ಮುಂದೆ ಮಗು ನಡೆಯುವುದಷ್ಟೇ ಅಲ್ಲ ಒಡಲು ಕೂಡ ಕಲಿಯುವುದರಲ್ಲಿ ಸಂಶಯವೇ ಇರಲಿಲ್ಲ ,ಈ ರೀತಿ ಬೀಳುವುದು ನಡೆ ಯುವಾಗ ಮಾತ್ರ ಅಲ್ಲ ,ವ್ಯಾಪಾರ ನಷ್ಟ ವಾದಾಗ ,ವಿದ್ಯೆ ತಲೆಗೆ ಹತ್ತದಾಗ ,ಪ್ರೀತಿ ಕೈಕೊಟ್ಟಾಗ ,ಅಸೆ ಈಡೇರಡಾಗ..ಬದುಕಲ್ಲಿ ಯೆಡವಿದಾಗ,ವಿಧಿ ಬದುಕಲ್ಲಿ ನರ್ತನ ಗೈದಾಗ ಎಡವುದು ಸಹಜ ….ಆಗ..ನಕ್ಕು ಹಾಸ್ಯ ಮಾಡುವ 100 ಮಂದಿಯ ಮದ್ಯ ಒಬ್ಬ ನಮ್ಮ ಕೈಹಿಡಿದು ಎತ್ತಿದರೆ ಆತ ಭಗವಂತನ ಸ್ವರೂಪ ವಾಗ ಬಲ್ಲನು ಅಲ್ಲವೇ ????

ಹಾಗಾಗಿ ಮತ್ತೆ ಮತ್ತೆ ಹೇಳುತಿದ್ದೇನೆ ….

ಬಿದ್ದಾಗ ನಗುವ ನನ್ನವರಿಗಿಂತ ಕೈ ಹಿಡಿದು ಮೇಲೆತ್ತುವ ಮಂದಿ ಬೇಕಾಗಿದ್ದಾರೆ

…. 🙏🙏🙏
🔴🔴🔴🔴🔴🔴
ಡಾ.ಶಶಿಕಿರಣ್ ಶೆಟ್ಟಿ
9945130630
(ವಾಟ್ಸಪ್ )
ಉಡುಪಿ
(ಕತೆಯ ಕುರಿತಾದ ನಿಮ್ಮ ಅಭಿಪ್ರಾಯ ವಾಟ್ಸಪ್ ಮೂಲಕ ನನಗೆ ತಿಳಿಸಿ )
🔴🔴🔴🔴🔴🔴

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now