ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 6

ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 6

0Shares

ಆ ಮದುವೆ ಊಟ ದಲ್ಲಿ ಉಪ್ಪು ಹೆಚ್ಚು ,ಹುಳಿ, ಕಾರ ಕಮ್ಮಿ ಇದ್ದದ್ದು ಯಾಕೆ ?

ಆ 3 ಜನ ಯುವಕರು ಮದುವೆ ಯಲ್ಲಿ ಹೊಟ್ಟೆತುಂಬ ಊಟ ಮುಗಿಸಿ ಹಾಲ್ ಗೆ ಬಂದು ಪಟ್ಟಾಂಗ ಮಾಡುತಿದ್ದರು.ಮೊದಲನೆಯವ ಎಂದ ಮದುವೆ ಒಳ್ಳೆಯ ರೀತಿಯಲ್ಲೇ ಆಗಿತ್ತು ಆದರೆ ಟೊಮೇಟೊ ಸಾರ್ ಗೆ ಉಪ್ಪು ಸ್ವಲ್ಪ ಹೆಚ್ಚಿತ್ತು ಅಲ್ವೆನ್ರೋ ಎಂದ …ಮತ್ತಿಬ್ಬರು ತಮ್ಮ ವಿಶ್ಲೇಷಣೆ ಮುಂದಿಟ್ಟರು ಹೌದು ಹಾಗೆ ಹುಳಿ ಗೆ ಹುಳಿ ಹಾಗು ಖಾರ ಸಪ್ಪೆ ಇತ್ತು, ಬರಿ ಚಪ್ಪೆ ಚಪ್ಪೆ ಅನ್ನಿಸುತಿತ್ತು ಎಂದರು …..

ಇದನ್ನೆಲ್ಲಾ ಕೇಳುತಿದ್ದ ವೃದ್ಧರೊಬ್ಬರು ಹಿಂದಿನಿಂದ ಹೇಳುತಿದ್ದರು …ಹೌದು ಕಣ್ರೋ ಮಗಳ ಮದುವೆ ಗೆ ಹುಡುಗಿ ತಂದೆ ತನ್ನ ಮನೆಯನ್ನೇ ಮಾರಿದ್ದ ..ತನ್ನ ನಾಳೆ ಯನ್ನು ಯೋಚಿಸಿ ಅಡುಗೆ ಮನೆಯಲ್ಲಿ ಅಳುತಿದ್ದರು ಹಾಗಾಗಿ ಅವರ ಕಣ್ಣೀರು ಆ ಟೊಮೇಟೊ ಸಾರ್ ಒಳಗೆ ಬಿದ್ದು ಸಾರ್ ಉಪ್ಪು ಉಪ್ಪಾಗಿದೆ…ಮತ್ತೆ ಹುಳಿ ( ನಂಜು,ಮತ್ಸರ) ನಿಮ್ಮಲ್ಲೇ ಜಾಸ್ತಿ ಇದೆಯಲ್ಲ ಎಂದು ನಿಮಗೆ ಹಾಕಿದ ಹುಳಿ ಗೆ ಹುಳಿ ಹಿಂಡಿರಲಿಲ್ಲ,ಮತ್ತೆ ನಿಮ್ಮ ಈ ಖಾರವಾದ ಮಾತು ಪಾಪದ ಹುಡುಗಿಯ ಬಡ ತಂದೆ ತಾಯಿಗಳಿಗೆ ಇನ್ನಷ್ಟು ಖಾರ ಆಗಬಾರದೆಂದು ನಿಮಗೆ ಹಾಕಿದ ಹುಳಿ ಯಲ್ಲಿ ಖಾರ ಕಮ್ಮಿ ಹಾಕಲಾಗಿತ್ತು ..ಎಂದಾಗ
ತಮ್ಮ ತಪ್ಪಿನ ಅರಿವಾಗಿ ಯುವಕರು ಅಲ್ಲಿಂದ ಕಾಲ್ಕಿತ್ತಿದ್ದರು ……

*ಹೌದು ಮಗಳ ಮದುವೆ ಗಾಗಿ ಅದೆಷ್ಟೋ ತಂದೆ ತಾಯಿ ತಮ್ಮ ಅಸ್ತಿ ಮನೆ ಬಂಗಾರ ಎಲ್ಲ ಖಾಲಿ ಮಾಡಿ ಅದೆಷ್ಟೋ ಲಕ್ಷ ಲಕ್ಷ ಸಾಲ ಮಾಡಿ ನಾಳೆ ಸಾಲ ತೀರಿ ಸಲಾಗದೆ ಮನೆ ಮಾರಿ ಬೀದಿಗೆ ಬಂದಿರುವ ಅದೆಷ್ಟೋ ಬಡ ತಂದೆ ತಾಯಿಗಳು, ಅಷ್ಟೊಂದು ಕಷ್ಟ ಪಟ್ಟು ಮಾಡಿಸುವ ಮದುವೆ ಯಲ್ಲಿ ಏನಾದರೂ ಚಿಕ್ಕ ಪುಟ್ಟ ಲೋಪ ವಾಗಿದ್ದರೆ ಅದನ್ನು ದೊಡ್ಡದು ಮಾಡದಿರಿ ..ಸಾದ್ಯವಾದರೆ ಅವರ ಅಕೌಂಟ್ ಗೆ ನಿಮ್ಮ ಊಟದ ಹಣವಾದರೂ ಅವರಿಗೆ ಗೊತ್ತಾಗ ದಂತೆ ಗೂಗಲ್ ಪೆ ಇಲ್ಲ ಫೋನ್ ಪೇ ಮಾಡಿ ಬಿಡಿ , ನಿಮ್ಮ ಆಗಮನ ಅವರಿಗೆ ನಿಜವಾದ *ಉಡುಗೊರೆ ಯಾಗಿರಲಿ,*
ಹೊರೆಯಾಗದಿರಲಿ ಎಂಬುದಷ್ಟೇ ನನ್ನ ಅಭಿಲಾಷೆ
🔴🔴🔴🔴🔴🔴


ಡಾ.ಶಶಿಕಿರಣ್ ಶೆಟ್ಟಿ
9945130630
(ವಾಟ್ಸಪ್ )
ಉಡುಪಿ
🔴🔴🔴🔴🔴🔴

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now