ಈ ಕ್ಷಣ ನಮ್ಮದ್ದು ನಾಳೆ ಭಗವಂತನದ್ದು 👌👌..

🟥🟩🟦🌹🟥🟩🟦
ಆ ಗುಲಾಬಿ ಹೂವನ್ನು ಬಾಳೆಯ ನಾರಿನಲ್ಲಿ ಬೇರೆ ಹೂಗಳೊಂದಿಗೆ ಕಟ್ಟಿ ದೇವರ ತಲೆಯ ಮೇಲೆ ಇಟ್ಟಿದ್ದರು. ಬಾಳೆಯ ನಾರು ತನ್ನೊಂದಿಗೆ ಒಂದಿಷ್ಟು ನಾರುಗಳನ್ನು ಕೊಂಡೊಯ್ದಿತ್ತು. ಆದರೆ ಆ ಗುಲಾಬಿಗೆ ಮಾತ್ರ ಅಹಂಕಾರವಿತ್ತು. ತಾನೊಬ್ಬನೇ ದೇವರ ತಲೆಯಲ್ಲಿರಬೇಕು ಎಂಬ ಅಹಂಕಾರ ಅದರೊಳಗಿತ್ತು. ಯಾವಾಗ ಜನರೆಲ್ಲಾ ಬಂದು ತನಗೆ ಆರತಿ ಎತ್ತಿ ಪೂಜೆ ಮಾಡುತ್ತಿದ್ದರೋ ಅವಾಗ ಅಹಂಕಾರ ಮತ್ತಷ್ಟು ಹೆಚ್ಚಿತ್ತು.
ಅಲ್ಲೇ ಹೊರಗೆ ಅಂಗಳದಲ್ಲಿ ತನ್ನೊಂದಿಗಿದ್ದ ಇತರ ಗುಲಾಬಿಗಳಿಗೆ ಕೂಗಿ ಹೇಳಿತು… “ನೋಡ್ರೋ ಅವಿವೇಕಿಗಳ ದೇವರ ತಲೆಯ ಮೇಲೆ ಕೂರೋಕೂ ಯೋಗ ಇರ್ಬೇಕು. ನಾನು ಅತ್ಯಂತ ಶ್ರೇಷ್ಠ. ಈ ಜನ್ಮದಲ್ಲಿ ನೀವು ನನ್ನ ಸಮನಾಗಲು ಸಾಧ್ಯವೇ ಇಲ್ಲ. ಅಲ್ಲೇ ದೂರದಿಂದ ನೋಡಿ ಖುಷಿಪಡಿ. ನೀವು ಈಗ ನನ್ನ ಕಾಲಿನ ಧೂಳಿಗೂ ಸಮನಲ್ಲ” ಎಂದಿತು. ಬೇರೆ ಗುಲಾಬಿಗಳಿಗೆ ಬೇಸರವಾಗಿತ್ತು ಜೊತೆಗಾರನ ಈ ಮಾತು ಕೇಳಿ😔.
ಸಮಯ ಮಧ್ಯಾಹ್ನವಾಗಿತ್ತು. ಅಲ್ಲಿ ದೇವರಿಗೆ ಹೊಸ ಪೂಜೆ ತಯಾರಾಗಿತ್ತು. ಹಳೆಯ ಹೂವಿನ ಅಲಂಕಾರ ಬದಲಿಸುತಿದ್ದರು. ಆತ ಬಂದವನೇ ಆ ಗುಲಾಬಿ ಹೂವಿನ ಮಾಲೆಯನ್ನು ಧೂಳಿರುವ ಕಸದ ಬುಟ್ಟಿಗೆ ಎಸೆದ. ಅಲ್ಲಿಯೂ ಗುಲಾಬಿ ಕೂಗುತಿತ್ತು ನಾನಿನ್ನು ಒಣಗಿಲ್ಲ ಯಾಕೆ ನನ್ನನ್ನು ಎಸೆಯುತ್ತಿದ್ದೀರಿ ಎಂದು. ಆದರೆ ಅದರ ಕೂಗನ್ನು ಕೇಳುವವರು ಅಲ್ಲಿ ಯಾರೂ ಇರಲಿಲ್ಲ😔.
ಆ ಬುಟ್ಟಿಯಲ್ಲಿರುವ ಕಸವನ್ನು ಯಾರೋ ಬಂದು ಪಕ್ಕವೇ ಹರಿಯುತಿದ್ದ ಗಟಾರಕ್ಕೆ ಎಸೆದಿದ್ದರು. ಗುಲಾಬಿ ಹಾಗು ಬಾಳೆಯ ನಾರು ಎರಡೂ ಕೊಳೆತ ವಾಸನೆಯ ಗಟಾರದಲ್ಲಿ ಮುಳುಗುತಿದ್ದವು. ಅಲ್ಲೇ ಇದ್ದ ಬಾಳೆಗಿಡ ಗಾಳಿಯ ಸಹಾಯ ಪಡೆದು, ಒಂದು ದೊಡ್ಡ ಬಾಳೆಯ ಎಲೆಯನ್ನು ಗಟಾರಕ್ಕೆ ಇಳಿಸಿ ಹೂವಿನಿಂದ ಬೆರ್ಪಟ್ಟಿದ್ದ ತನ್ನ ನಾರನ್ನು ಎತ್ತಿ ರಕ್ಷಿಸಿ ಕೊಂಡಿತು.
ಅಹಂಕಾರದಿಂದ ಕೂಡಿದ ಗುಲಾಬಿ ಮಾತ್ರ ಅದೇ ಕೊಳಕಲ್ಲಿ ಮುಳುಗುತ್ತಿದ್ದರೆ ಉಳಿದ ಗುಲಾಬಿಗಳು ಗಿಡದಲ್ಲಿ ತಂಗಾಳಿಯ ಸ್ಪರ್ಶ ಸುಖವನ್ನು ಅನುಭವಿಸುತ್ತಿದ್ದವು. ಸುಖ ಬಂದಾಗ ತನ್ನವರನ್ನೂ ಸುಖದಲ್ಲಿ ಭಾಗಿಯಾಗಲು ಅವಕಾಶ ಮಾಡಿ ಕೊಟ್ಟ ಬಾಳೆಯ ನಾರ ಜೊತೆ ಬಾಳೆಯ ಗಿಡ ಅದರ ಕಷ್ಟದೊಂದಿಗೂ ಭಾಗಿಯಾಗಿತ್ತು👌. ಸುಖ ಬಂದಾಗ ಅಹಂಕಾರ ಪ್ರದರ್ಶಿಸಿದ್ದ ಗುಲಾಬಿಯನ್ನು ರಕ್ಷಿಸಲು ಇಲ್ಲಿ ಯಾವ ಗುಲಾಬಿಯೂ ಇರಲಿಲ್ಲ😱.
ಸಂದೇಶ ಸ್ಪಷ್ಟವಾಗಿದೆ. ಹಣದ, ಶ್ರೀಮಂತಿಕೆಯ, ಅಧಿಕಾರದ ಅಮಲು ತಲೆಗೇರಿದಾಗ,ನಿಮ್ಮವರ
ಕಷ್ಟದಲ್ಲಿ ನೆರವಾಗಲು ಕಲಿಯಿರಿ. ಅದು ಬಿಟ್ಟು ಅಹಂಕಾರ ಪ್ರದರ್ಶಿಸಿದರೆ ನಿಮ್ಮವರ ಎದುರಲ್ಲೇ ಮುಂದೊಂದು ದಿನ ನಿಮ್ಮ ಹಣ, ಅಧಿಕಾರ ನೆಲಕಚ್ಚಲಿದೆ. ಯಾಕೆಂದರೆ ನೆನಪಿರಲಿ, ಈ ಕ್ಷಣ ಮಾತ್ರ ನಮ್ಮದು. ನಾಳೆ ಭಗವಂತನದ್ದು…🙏
🟥🟩🟦🌹🟥🟩🟦
ಇಂತಹ ಇನ್ನಷ್ಟು ಮೌಲ್ಯ ಯುಕ್ತ ಕತೆಗಳ ಸಂಗ್ರಹ ಪುಸ್ತಕ ಬದುಕ ಬದಲಿಸುವ ಕತೆಗಳು ಪ್ರತಿಗಳಿಗಾಗಿ ಸಂಪರ್ಕಿಸಿ (9945130630).
ಸಣ್ಣಕತೆ: ಡಾ. ಶಶಿಕಿರಣ್ ಶೆಟ್ಟಿ
ಹೋಂ ಡಾಕ್ಟರ್ ಫೌಂಡೇಶನ್
ಉಡುಪಿ,
9945130630(whatsup)

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























