ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 5

ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 5

0Shares

ನಿಮಗೂ ದೇವರಾಗಬೇಕೇ?

ಆತನಿಗೆ ದೇವರಾಗ ಬೇಕು ಎಂಬ ಅಸೆಯೊಂದು ಹುಟ್ಟಿಕೊಂಡಿತು ..ಒಮ್ಮೆಮಹಾ ಪುರುಷರ ಬಗ್ಗೆ ಯೋಚಿಸಿದ ಒಮ್ಮೆ ದೇವರ ಸಾಕ್ಷಾತ್ಕಾರ ಪಡೆದವರು ಮತ್ಯಾವತ್ತೂ ಮನುಷ್ಯ ನಾಗ ಬಯಸಿರಲಿಲ್ಲ ಯಾರೂ ಬುದ್ಧ,ಮಹಾವೀರ,ಯೇಸು,ರಾಮ,ಕೃಷ್ಣ ಎಲ್ಲರೂ ಹಾಗೆ ದೇವರಾದವರು ಯಾರೂ ವಾಪಾಸ್* ಮನುಷ್ಯನಾಗಿರಲಿಲ್ಲ‼️….

ಅಂದು ಕೂತು ಗೀತಾ ,ಬೈಬಲ್,ಖುರಾನ್ ಸಂಪೂರ್ಣ ವಾಗಿ ಓದಿ ಮುಗಿಸಿದ್ದ. ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸು ಆ ಮೂಲಕ ದೇವರಾಗ ಬಹುದು ಎಂಬುದು 3 ಧರ್ಮಗ್ರಂಥಗಳಲ್ಲಿಯೂ ಸ್ಪಷ್ಟವಾಗಿ ತಿಳಿಸಿತ್ತು ,ಹಾಗೆ ದೇವರು ನಿನಗೆ ಅವಕಾಶಗಳನ್ನು ಕೊಡುತ್ತಿರುತ್ತಾನೆ ಅವುಗಳನ್ನು ಉಪಯೋಗಿಸು ಎಂದಿತ್ತು ಕೂಡಾ ….

ಇಂದು ದೇವರಾಗಲೇ ಬೇಕು ಎಂದುಕೊಂಡು ಪಾರ್ಕ್ ಅಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದ ಈ ನಡುವೆ ವೃದ್ಧ ಭಿಕ್ಷುಕನೊಬ್ಬ 3 ಬಾರಿ ಬಂದು ಇವನಲ್ಲಿ ಊಟ ಕೇಳಿದ್ದು ಗೊತ್ತೇ ಆಗಿರಲಿಲ್ಲ ಇವನಿಗೆ😔

*ಮತ್ತೆ ಯೋಚಿಸಿದವನಿಗೆ ಊಟ ಕೇಳಿದ ಆ ಮುದುಕ ಬಿಕ್ಷುಕನಿಗೆ ಬೈದದ್ದು ನೆನಪಾಗಿ ನಾಲಿಗೆ ಕಚ್ಚಿ ಕೊಂಡ ದೂರದ ನೆಲದಲ್ಲಿ ಕೂತಿದ್ದ ಆ ವೃದ್ಧ ಭಿಕ್ಷುಕ ಮದ್ಯಾಹ್ನ ದ ಬಿರು ಬಿಸಿಲಿಗೆ ಸುಸ್ತಾಗಿದ್ದ ..ಆತ *ಊಟ ಕೇಳಿದ್ದು ನೆನಪಾಗಿತ್ತು*…
*ತಕ್ಷಣ ಸಮೀಪದ ಹೋಟೆಲ್ ನಲ್ಲಿ ತರಕಾರಿ ಹಾಗು ಕೋಳಿಯ ಬಿರಿಯಾನಿ ಕೊಂಡು ಬಿಸ್ಲೇರಿ ನೀರಿನೊಂದಿಗೆ ಮುದುಕನ ಬಳಿ ಹೋಗಿ ನೆಲದಲ್ಲಿ ಕೂತ* ..

ವೃದ್ಧ ಬಿಕ್ಷುಕನಿಗೆ ಹೆದರಿಕೆ ಯಾಗಿತ್ತು ಈಗಷ್ಟೇ ಬೈದು ಕಳಿಸಿದ್ದವ ಮತ್ತೆ ಬಂದದ್ದು ನೋಡಿ ಆಶ್ಚರ್ಯ ವಾಗಿತ್ತು
ಅವನಿಗೆ….
ಮದ್ಯಾಹ್ನಸುಡುವ ಬಿಸಿಲಿಗೆ ನೀರು ಬೇಕಿತ್ತು ಬಿಸ್ಲೇರಿ ಕೊಟ್ಟ ,ಊಟ ಬೇಕಿತ್ತು 2 ಊಟ ಕೊಟ್ಟ …ಆತ ತರಕಾರಿಯೂ ಮಾಂಸಾಹಾರಿಯೋ ಗೊತ್ತಿರಲಿಲ್ಲ ಇವನಿಗೆ ಮುದುಕ ಬಿರಿಯಾನಿ ಊಟ ಗಬ ಗಬನೇ ತಿಂದಿದ್ದ…ನಂತರ ಮತ್ತೆ ತರಕಾರಿ ಊಟ ಕೂಡ ಮುಗಿಸಿದ್ದ …ನಿಜಕ್ಕೂ ಈತನಿಗೆ ಏನೋ ಮನಸ್ಸಲ್ಲಿ ಸಂತೋಷ ತೃಪ್ತ ಭಾವ ಮೂಡಿತ್ತು,ಇದು ವರೆಗೆ ಸಿಗದಂತ ವಿಶಿಷ್ಟ ತರದ ಆತ್ಮತೃಪ್ತಿ ..

ವೃದ್ಧ ರಲ್ಲಿ ಏನೋ ಕೇಳಬೇಕೆನಿಸಿತು ಈತನಿಗೆ ಕೇಳಿಯೇ ಬಿಟ್ಟ ಅಜ್ಜ ನಿಮ್ಮನ್ನ ನೋಡಿದರೆ ಅಯ್ಯೋ ಪಾಪ ಅನಿಸುತ್ತಿದೆ ಈ ವಯಸ್ಸಲ್ಲಿ ಯಾಕೆ ಹೀಗೆ ಅಲೆದಾಡುತ್ತೀರಿ ನಿಮ್ಮನ್ನು ನನಗೆ ಗೊತ್ತಿರುವ ಆಶ್ರಮವೊಂದಕ್ಕೆ ಹಾಕಲೇ?
ಸಾಯುವತನಕ ಏನು ಸಮಸ್ಯೆ ಬಾರದು ನಿಮಗೆ …ಎಂದಾಗ ನಕ್ಕಿದ್ದ ವೃದ್ಧರು ಈ ಬಾರಿ ಹೊಟ್ಟೆ ತುಂಬಿದ್ದರಿಂದ ಹೇಳಿದರು ” ನೋಡಪ್ಪ ನನ್ನ ಮಗ ವೈದ್ಯ,ಮಗಳು ದೊಡ್ಡ ಕಂಪೆನಿಯೊಂದರ ಮ್ಯಾನೇಜಿಂಗ್ ಡೈರೆಕ್ಟರ್ ..ತಂದೆಯನ್ನೇ ರಾತ್ರೋ ರಾತ್ರಿ ಬೆಂಗಳೂರ್ ನಿಂದ ದೂರ ಎಲ್ಲೊ ತಂದು ಬಿಟ್ಟು ಹೋಗಿದ್ದರು ,ತಂದೆಯ ಆಸ್ತಿ ಮಾತ್ರ ಬೇಕಿತ್ತು ಅವರಿಗೆ😔..ಅಂದು ಯಾರು ಇಲ್ಲ ಎಂದು 4 ದಿನ ತುಂಬಾ ಬೇಸರ ಆಗಿತ್ತು ಆದರೆ ಹುಟ್ಟಿಸಿದ ದೇವರು ಹುಲ್ಲು ಮೇಯಿಸಿರಲಿಲ್ಲ ಕಳೆದ 8 ವರ್ಷದಿಂದ ಅನೇಕ ದೇವರು ಗಳನ್ನೂ ನೋಡಿದ್ದೇನೆ..ಅದೆಷ್ಟೋ ಊರುಗಳನ್ನೂ ಸುತ್ತಿ ಆಗಿದೆ ನೀವು ಇಂದು ನನ್ನ ಪಾಲಿಗೆ ದೇವರಾಗಿ ಬಂದಿದ್ದೀರಿ …ಹೀಗೆ ಇದ್ದರೆ ಮಾತ್ರ ನಾನು ದೇವರನ್ನು ನಿತ್ಯ ಕಾಣಬಹುದು ನನಗೆ ಯಾವ ಆಶ್ರಮದ ,ಬಂಧಿ ಖಾನೆ ಯ ಉಸಿರುಕಟ್ಟಿಸುವ ವಾತಾವರಣದ ಅವಶ್ಯಕತೆ ಇಲ್ಲ ಎಂದು ಕಣ್ಣಲ್ಲೇ ಧನ್ಯವಾದ ಹೇಳಿ ಹೊರಟಿದ್ದ …ಈತ ದೇವರಂತೆ ಆಗಲು ಬಯಸಿದ್ದ..

ಈ ಅಜ್ಜ ದೇವರೇ ಮಾಡಿ ಬಿಟ್ಟಿದ್ದ ಈತನನ್ನು ..
👏👏👏👏👏👏👏

ಈಗ ತಿಳಿದಿತ್ತು ಮನುಷ್ಯ ನಾದವ ರಾಕ್ಷಸನಾಗಿ ಬದಲಾಗಬಹುದು ಆದರೆ ಒಮ್ಮೆ ದೇವರಾದವ ಮರಳಿ ಮನುಷ್ಯನಾಗಲು ಸಾಧ್ಯವಿಲ್ಲ ಎಂದು..ಜನ ಯಾಕೆ ದೇವರಾಗ ಬಯಸುತ್ತಾರೆ ಎಂದು ಈಗ ಸ್ಪಷ್ಟವಾಗಿ ಅರಿವಾಗಿತ್ತು ಈತನಿಗೆ,ದೇವರಾಗುವ ಸುಖವೇ ಜಗತ್ತಿನ ಶ್ರೇಷ್ಠ ಸುಖ ಗಳಲ್ಲೊಂದು ಎಂದು …..🙏🙏🙏🙏🙏🙏🙏🙏
🔴🔴🔴🔴🔴🔴

ಡಾ.ಶಶಿಕಿರಣ್ ಶೆಟ್ಟಿ
9945130630
(ವಾಟ್ಸಪ್)
(ಉಡುಪಿ)
🔴🔴🔴🔴🔴🔴

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now