
ಒಂದು ಲಿಂಬೆ ಗಿಡದ ಕಥೆ…….😭
ಸಣ್ಣ ಕತೆ : ಡಾ. ಶಶಿಕಿರಣ್ ಶೆಟ್ಟಿ
ಹೋಂ ಡಾಕ್ಟರ್ ಫೌಂಡೇಶನ್
ಉಡುಪಿ
9945130630(whatsup)
🟥🟩🟦🌹🟦🟩🟥
ಆತ ನಿತ್ಯ ಆ ಲಿಂಬೆಯ ಗಿಡಕ್ಕೆ ನೀರೆರೆಯುತಿದ್ದ, ತನ್ನ 6 ವರ್ಷದ ಮಗನನ್ನು ಕೂಡಾ ನಿತ್ಯ ನೀರೆರೆಯುವಾಗ ಕರೆಯುತಿದ್ದ. ಗಿಡ ಪ್ರತಿ ಇಂಚು ಎತ್ತರ ಬೆಳೆಯುವಾಗ ಕೂಡಾ ಅಪ್ಪ,ಮಗ ತುಂಬಾ ಖುಷಿ ಪಡುತಿದ್ದರು. ಅದೂ ಅಮ್ಮ ಕಳೆದ ವರ್ಷ ನೆಟ್ಟ ಗಿಡ ಎಂಬುದು ಅವನ ಖುಷಿಗೆ ಕಾರಣವಾಗಿತ್ತು. ಅಮ್ಮ ನೆಟ್ಟ ಕೊನೆಯ ಗಿಡ ಅದಾಗಿತ್ತು😔.
ಅಂದು ಸಂಜೆ ಮನೆಗೆ ಬಂದರೆ ಅಲ್ಲೊಂದು ಬೇಸರದ ವಿಷಯವಿತ್ತು. ಮೇಲೆ ವಿದ್ಯುತ್ ಲೈನ್ ಗೆ ತಾಗುತ್ತದೆ ಎಂದು ಲೈನ್ ಮ್ಯಾನ್ ನವರು ಗಿಡದ ಸಂಪೂರ್ಣ ಮೇಲ್ಭಾಗವನ್ನು ಕತ್ತರಿಸಿ ಹೋಗಿದ್ದರು😔. ಬೇಸರದಿಂದ ಜೋರಾಗಿ ಅತ್ತ ಒಂದಷ್ಟು ಹೊತ್ತು. ಅಮ್ಮನ ಕೊನೆಯ ನೆನಪು ಕೂಡಾ ದೂರ ಹೋಗುವುದರಲ್ಲಿತ್ತು😢.
ಏನಾದರೂ ಮಾಡಿ ಗಿಡವನ್ನು ಉಳಿಸಲೇ ಬೇಕು ಎಂದು ನೀರೆರೆದು, ಗೊಬ್ಬರ ಹಾಕಿ ಬಹಳಷ್ಟು ಪ್ರಯತ್ನ ಪಟ್ಟ. ಗಿಡ ಮಾತ್ರ ಮೂರು ನಾಲ್ಕು ದಿನದಲ್ಲಿ ಸತ್ತು ಬಿದ್ದಿತ್ತು😢.
…ಸಂಜೆ ಬೇಸರದಿoದಿದ್ದ ಅಮ್ಮನ ಕೊನೆಯ ದಿನಗಳು ನೆನಪಾಗಿದ್ದವು ಅವನಿಗೆ. ಗೊತ್ತಿಲ್ಲದೆ ಕಣ್ಣುಗಳು ಮಂಜಾಗಿದ್ದವು😢. ಅಂದು ತಂಗಿಯ ಮೇಲೇ ಸಿಟ್ಟು ಅಮ್ಮನ ಮೇಲೆ ತಿರುಗಿತ್ತು. ತನ್ನ ಗಂಡ ಕಟ್ಟಿದ ಮನೆಯಲ್ಲಿ ಖುಷಿಖುಷಿ ಯಲ್ಲಿದ್ದಳು ಅಮ್ಮ. ತಂಗಿ ಮನೆಗೆ ದೂರದ ಮುಂಬೈ ಗೆ ಕಳಿಸಿದ್ದ. ವಾರಕ್ಕೆoದು ಕಳಿಸಿದ್ದ ಅಮ್ಮನನ್ನು ತಿಂಗಳಾದರೂ ಮುಂಬೈ ನಿಂದ ಕರೆಸಿ ಕೊಂಡಿರಲಿಲ್ಲ. ಅಮ್ಮನ್ನ ನೋಡಿಕೊಳ್ಳುವ ಕಷ್ಟ ಅವಳಿಗೂ ತಿಳಿಯಲಿ ಎಂಬ ಕೆಟ್ಟ ಉದ್ದೇಶ ಅಲ್ಲಿತ್ತು😢.
ಅಂದು ತಂಗಿಯ ಕರೆ ಬಂತು. “ಅಮ್ಮನಿಗೆ ಹುಷಾರಿಲ್ಲ, ಮನೆಗೆ ಕರ್ಕೊಂಡು ಬರ್ತಿದ್ದೀವಿ. ಹೌದು ಅಣ್ಣ ನಾನೇ ಸೋತೆ ಎಂದವಳೇ ಅಮ್ಮನನ್ನು ಮನೆಗೆ ಬಿಟ್ಟು ಹೋದಳು. ಗೆಲುವಿನ ಖುಷಿ ಹೆಚ್ಚು ಹೊತ್ತು ಉಳಿದಿರಲಿಲ್ಲ. ಖುಷಿಖುಷಿಯಲ್ಲಿ ಮನೆಯಲಿದ್ದ. ಅಮ್ಮ ಬರುವಾಗ ಜೀವಂತ ಶವವಾಗಿದ್ದಳು😢. ಊಟ ಮಾಡುತ್ತಿರಲಿಲ್ಲ, ಬಿಪಿ ಮಾತ್ರೆ ಸರಿಯಾಗಿ ಕೊಡದೆ ಒಂದು ಭಾಗ ಹೋಗಿತ್ತು, ಗುಂಡು ಕಲ್ಲಿನಂತಿದ್ದ ಅಮ್ಮ ಮೂಳೆ, ಮಾಂಸದ ತಡಿಕೆಯಂತಾಗಿ ಹೋಗಿದ್ದರು😢.
ಮತ್ತೆ ಅಮ್ಮನನ್ನು ಮೊದಲಿನಂತೆ ಮಾಡುವ ಹೋರಾಟ ಕನಸಾಗೇ ಉಳಿಯಿತು. ನಿಂಬೆಯ ಗಿಡದಂತೆ ಮುಂದಿನ ಮೂರು ನಾಲ್ಕು ದಿನದಲ್ಲಿ ಅಮ್ಮ ನಮ್ಮನ್ನೆಲ್ಲ ಬಿಟ್ಟು ಹೋಗಿಬಿಟ್ಟಳು. ಕಣ್ಣುಗಳು ಮತ್ತೆಮತ್ತೆ ಒದ್ದೆಯಾಗುತ್ತಲೇ ಇದ್ದವು. ಒಂದು ನಿಮಿಷದ ಸಿಟ್ಟು ಅಮ್ಮನ ಸಾವಲ್ಲಿ ಅಂತ್ಯಗೊಂಡಿತ್ತು😭😭.
ನಿಜ ವ್ಯಕ್ತಿ ಇರಲಿ ವಸ್ತು ಇರಲಿ ಅದರ ಪ್ರಾಮುಖ್ಯತೆ ಗೊತ್ತಾಗುವುದು ಅದನ್ನು ಕಳೆದು ಕೊಂಡಾಗಲೇ. ಒಂದು ನಿಮಿಷದ ಆವೇಶ ಅದೆಷ್ಟೋ ಬಾರಿ ನಮ್ಮವರನ್ನು ನಮ್ಮಿಂದ ಕಸಿದು ಕೊಂಡಿರುತ್ತದೆ.😭
🟥🟩🟦🌹🟥🟩🟦
ಇಂತಹ ಮೌಲ್ಯಯುಕ್ತ ಕತೆಗಳ ಪುಸ್ತಕ ಬದುಕ ಬದಲಿಸುವ ಕತೆಗಳು ಪ್ರತಿಗಳಿಗಾಗಿ ನನ್ನನ್ನು(9945130630)ಸಂಪರ್ಕಿಸಿ.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























