ನಿಮ್ಮವರು ಯಾರು? 🥺🥺🥺

ಸಣ್ಣ ಕತೆ : ಡಾ. ಶಶಿಕಿರಣ್ ಶೆಟ್ಟಿ
ಹೋಂ ಡಾಕ್ಟರ್ ಫೌಂಡೇಶನ್
ಉಡುಪಿ
9945130630(whatsup)
🟩🟥🟦🌹🟩🟥🟦
ಆತ ತೀವ್ರ ಡಿಪ್ರೆಷನ್ ನಲ್ಲಿದ್ದ. ತನ್ನವರೆಂದು ಇದ್ದ ಗೆಳೆಯರು, ಬಂಧುಗಳು, ಕೊನೆಗೆ ಪತ್ನಿ ಕೂಡಾ ಕೈಬಿಟ್ಟದ್ದು ಆತನ ಮನಸ್ಸನ್ನು ಘಾಸಿಗೊಳಿಸಿತ್ತು. ತಜ್ಞ ಮನೋವೈದ್ಯರು ಪರೀಕ್ಷಿಸಿ ಒಂದಷ್ಟು ಮಾತ್ರೆಗಳನ್ನು ತಂದರು. ಅವುಗಳನ್ನು ಪೇಪರ್ ಕವರ್ ಒಳಗೆ ಹಾಕುವಾಗ ಆ ಕವರ್ ಕೈ ತಪ್ಪಿ ಕೆಳಗೆ ಬಿತ್ತು. ತಕ್ಷಣ ತಮ್ಮ ಕಾಲಿಂದ ಅದನ್ನು ಅಲ್ಲೇ ಇದ್ದ ಕಸದ ಬುಟ್ಟಿಗೆ ಹಾಕಿದವರೇ, ಬೇರೊಂದು ಕವರ್ ತೆಗೆದು ಮಾತ್ರೆ ತುಂಬಿಸಿ ಕೊಟ್ಟರು. ಆ ರೋಗಿ ಮಾತ್ರ ಕಸದ ಬುಟ್ಟಿಗೆ ಹಾಕಿದ ಆ ಕವರನ್ನೇ ನೋಡುತಿದ್ದ. ಯಾಕೆಂದರೆ ಅದರಲ್ಲಿ ಯಾವ ಸಮಸ್ಯೆಯೂ ಇರಲಿಲ್ಲ. ಆತನ ಮುಖದಲ್ಲಿದ್ದ ಪ್ರಶ್ನಾರ್ಥಕ ಚಿಹ್ನೆಯನ್ನು ಗಮನಿಸಿದ ವೈದ್ಯರು ಹೇಳಿದ್ದು ಹೀಗೆ “ಏನಿಲ್ಲ ಕೈ ಹಿಡಿದವರಷ್ಟೇ ನಮ್ಮವರು, ಆ ಪೇಪರ್ ಕವರ್ ಕೈ ಹಿಡಿಯಲಿಲ್ಲ ನೋಡು, ಅದಕ್ಕೆ ಕಸದ ಬುಟ್ಟಿಗೆ ಹಾಕಿದೆ” ಎಂದು ನಕ್ಕರು. ಆತ ಅವರ ಮಾತಿನ ಒಳಾರ್ಥ ಮಾಡಿಕೊಂಡವನೇ ವೈದ್ಯರ ಫೀಸ್ ಕೊಟ್ಟು ಮಾತ್ರೆ ಬೇಡ ಎಂದು ಬಿಟ್ಟ.
ಈ ಬಾರಿ ಆತನ ಮುಖ ಪ್ರಶಾಂತವಾಗಿತ್ತು. ತನ್ನವರು ಯಾರು, ಯಾರನ್ನು ಮನಸ್ಸಿಂದ ತೆಗೆದು ಕಸದ ಬುಟ್ಟಿಗೆ ಎಸೆಯಬೇಕು ಎಂಬುದು ಅವನಿಗೆ ಸ್ಪಷ್ಟವಾಗಿ ತಿಳಿದು ಹೋಗಿತ್ತು.
ಹೌದು ಸರಿಯಾಗಿ ಕೇಳಿಸಿಕೊಳ್ಳಿ. ನಿಮ್ಮ ಸುತ್ತಮುತ್ತ ಇರುವೆಗಳಂತೆ ಸುತ್ತುವ, ನಿಮ್ಮ ಸೋಶಿಯಲ್ ಮೀಡಿಯಾದಲ್ಲಿರುವ ಸಾವಿರಾರು ಮಂದಿಯೆಲ್ಲರೂ ನಿಮ್ಮವರಾಗಲು ಸಾಧ್ಯವಿಲ್ಲ. ನಿಮ್ಮ ಕಷ್ಟದಲ್ಲಿ, ಸಂದಿಗ್ಧ ಪರಿಸ್ಥಿತಿಯಲ್ಲಿ, ಸಂಕಷ್ಟದ ಸಮಯದಲ್ಲಿ ಕೈ ಹಿಡಿದವರಷ್ಟೇ ನಿಮ್ಮವರು. ಉಳಿದವರನ್ನು ನಿರ್ದಾಕ್ಷಿಣ್ಯವಾಗಿ ಕಸದ ಬುಟ್ಟಿಗೆ ಹಾಕಿಬಿಡಿ.
🟩🟥🟦🌹🟩🟩🟦
ಇಂತಹ ಮೌಲ್ಯಯುಕ್ತ ಕತೆಗಳ ಸಂಗ್ರಹ ಪುಸ್ತಕ ಬದುಕ ಬದಲಿಸುವ ಕತೆಗಳು. ಪ್ರತಿಗಳಿಗಾಗಿ ನನ್ನನ್ನು(9945130630) ಸಂಪರ್ಕಿಸಿ.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























