ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 44

ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 44

0Shares

ಆ ನಾಳೆ ಕೊನೆಗೂ ಬರಲೇ ಇಲ್ಲ😔😔😔

ಮದ್ಯಾಹ್ನದ ಸುಡು ಬಿಸಿಲಲ್ಲಿ ಆ 68 ವರ್ಷದ ಅಜ್ಜ ತನ್ನ 40 ವರ್ಷದ ಹಿಂದಿನ ಬದುಕನ್ನ ಒಮ್ಮೆ ನೆನೆಸಿಕೊಂಡಿದ್ದ😔.

ಆಗ ಆತನಿಗೆ 28 ರ ವಯಸ್ಸು ನಾಳಿನ ಸುಂದರ ಬದುಕಿನ ಕನಸ್ಸಿತ್ತು ಅವನೆದುರು🙏..ರಾತ್ರಿ ಹಗಲು ದುಡಿದು ಹಣ ಗಳಿಸಿ ತನ್ನ ಕನಸು ಸಾಕಾರ ಗೊಳಿಸಬೇಕೆಂಬ ಧಾವಂತ ದಲ್ಲಿ ಜೀವಿಸಲಾರಂಭಿಸಿದ..ಹಣ ಮಾಡಿ ದೊಡ್ಡ ಮನೆ ಕಟ್ಟಬೇಕೆಂಬ ಕನಸ್ಸಲ್ಲೇ ಜೀವಿಸಿದ, ಈ ಮದ್ಯ ಬದುಕಿನ ಅಮೂಲ್ಯ ಘಟ್ಟ ವಾದ ಮದುವೆ,ಮಕ್ಕಳು,ಯವ್ವನ
ಕಳೆದು ಹೋಗಿತ್ತು😔
ತನ್ನ 55 ನೆಯ ವಯಸ್ಸಲ್ಲಿ ಕನಸು ಸಾಕಾರಗೊಂಡಿತ್ತು..

ಮನೆ ಕಾರು ಮಕ್ಕಳ ಮದುವೆ,ಎಲ್ಲ ಮುಗಿಸಿದ್ದ ಕನಸಿನ ಬೆನ್ನೇರಿ ಇಷ್ಟುವರ್ಷ ಜೀವಿಸಿದ್ದರಲ್ಲಿ ಬದುಕೇನೋ ಮುಂದೆ ಸಾಗುತಿತ್ತು ಆದರೆ..ಆ ಧಾವಂತ ಅಲ್ಲಿಗೆ ಕೊನೆ ಆಗಿರಲಿಲ್ಲ…

ಇನ್ನಷ್ಟು ಬೇಕು ಎಂಬ ಮನುಷ್ಯನ ಆಸೆ ಮತ್ತೆ ಇನ್ನಷ್ಟು ದೊಡ್ಡ ವ್ಯಾಪಾರಕ್ಕೆ ಕೈಹಾಕಿಸಿತು..ಆದರೆ ಈ ಬಾರಿ ಅದೃಷ್ಟ ಕೈಕೊಟ್ಟಿತ್ತು😔..ಗಳಿಸಿದ್ದೆಲ್ಲ ಒಂದೇ ವರ್ಷದಲ್ಲಿ ಕಳಕೊಂಡ..ಅಕ್ಷರಶಃ ಬಿಕಾರಿಯಾದ..ತೃಪ್ತಿ ಇಲ್ಲದ ಬಯಕೆ ಅವನ ಜೀವನವನ್ನು ನರಕವಾಗಿಸಿತ್ತು..😔

ಹೆಂಡತಿ, ಮಕ್ಕಳು,ಬಂದುಗಳು ದೂರಾದರು…ಜೀವನದಲ್ಲಿ ಅನುಭವಿಸಬೇಕಾದ ಯಾವ ಸ್ವಾರಸ್ಯ ವನ್ನು ಅನುಭವಿಸದೇ ಹಣದಹಿಂದೆ ಹೋದ ತಪ್ಪಿಗೆ ಕೊನೆಗೆ ಅದೇ ಹಣ ಅವನ ಸರ್ವಸ್ವವನ್ನು ಕಸಿದುಕೊಂಡಿತ್ತು .😔😔

ಇಂದು ಈ ಇಳಿವಯಸ್ಸಲ್ಲಿ ಬಿಕ್ಷಾ ಪಾತ್ರೆ ಕೈಯ್ಯಲ್ಲಿ ಹಿಡಿದು ಕೊಂಡು ರಸ್ತೆಯಲ್ಲಿ ಹೋಗು ತಿದ್ದ ..ಆ ನಾಳೆಗಾಗಿ ..ಕೇವಲ ಹಣಮಾಡುವ ದಾವಂತದಲ್ಲಿ ಸುಂದರ ಇಂದುಗಳು ಹಾಳಾಗಿದ್ದವು
ಆತನ ಕನಸಿನ

ಆ ನಾಳೆ ಕೊನೆಗೂ ಬರಲೇ ಇಲ್ಲ 😔😔

ಹಣ, ಹಣ, ಹಣ ಎಂದು ಯವ್ವನ,ಜೀವನ ಎರಡನ್ನು ಹಾಳು..ಮಾಡಿ ನಾಳೆ ಮುಪ್ಪು ಬಂದಾಗ ತಾವು ಸಂಪಾದಿಸಿದ
ಆಸ್ತಿ ಎಲ್ಲವನ್ನು ಆಸ್ಪತ್ರೆಗೆ ಹಾಕಿ,ಹಾಸಿಗೆ ಯಲ್ಲಿ ಮಲಗಿಕೊಂಡು ತಾವು ಸಂಪಾದಿಸಿದ ಹಣವನ್ನು ಇನ್ಯಾರೋ ಉಪಯೋಗಿಸುವುದನ್ನು ನೋಡುತ್ತಾ ಪಶ್ಚಾತಾಪ ಪಡುವ ಪ್ರತಿಯೊಬ್ಬರಿಗೂ ನನ್ನ ಈ ಕತೆ ಸಮರ್ಪಿಸುತ್ತಿದ್ದೇನೆ..🙏

ಕಿಸೆ ಯಲ್ಲಿ 100 ರೂ ಇದ್ದರೂ ಕೋಟಿ ರೂ ಇರುವವನಂತೆ ಜೀವಿಸು,ಯಾಕೆಂದರೆ ನಿನ್ನ ಕಿಸೆ ಯಲ್ಲಿರುವುದು ಎಷ್ಟು ಎಂದು ನಿನಗೆ ಮಾತ್ರ ತಿಳಿದಿರುತ್ತದೆ..😄👍

ನಾಳೆಯ ಯೋಚನೆ ಇರಲಿ ತಪ್ಪಲ್ಲ ಆದರೆ ನಾಳೆಯ ಕನಸಕಂಡು, ಮತ್ತೆ ಬರಲಾರದ ಇಂದಿನ ದಿನ ವನ್ನು ವ್ಯರ್ತ ಮಾಡಿಕೊಳ್ಳದಿರು.
ಯಾರಿಗೊತ್ತು ..ನಿನ್ನ ಕನಸಿನ

ಆ ನಾಳೆ ಕೊನೆಗೂ,ಬರದೇ ಇರಬಹುದು😔😔😔.

ನಿಮ್ಮ ಅನಿಸಿಕೆ ನನಗೆ ವಾಟ್ಸಪ್ ಮಾಡಿ ತಿಳಿಸಿ ..

9945130630 (ವಾಟ್ಸಪ್)
ಸಣ್ಣಕಥೆ:ಡಾ.ಶಶಿಕಿರಣ್ ಶೆಟ್ಟಿ
ಉಡುಪಿ,ಹೋಂ ಡಾಕ್ಟರ್ ಫೌಂಡೇಶನ್

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now