ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 43

ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 43

0Shares

ಬದುಕು ಭಗವಂತನಾಟ ಅಂದ ಮೇಲೆ,ಮೇಲಿದ್ದವ ಕೆಳಬರಲು ಅದೆಷ್ಟು ಹೊತ್ತು ಬೇಕು ??

ಸಣ್ಣಕತೆ:ಡಾ.ಶಶಿಕಿರಣ್ ಶೆಟ್ಟಿ
ಹೋಂ ಡಾಕ್ಟರ್ ಫೌಂಡೇಶನ್,ಉಡುಪಿ

9945130630(ವಾಟ್ಸಪ್)

🟨🟪🟨🌹🟪🟨🟪
ಅಂದು ಆ ಫಲವತ್ತಾದ ಭೂಮಿಯನ್ನು ಯಾರೋ ಕೊಟ್ಯಾದಿಪತಿ ಖರೀದಿಸಿದ್ದು ಆ ಭೂಮಿಗೆ ಬಹಳ ಸಂತೋಷದ ವಿಷಯವಾಗಿತ್ತು..ಅಲ್ಲೇ ಸಮೀಪದಲ್ಲಿದ್ದ ಹಾಳು ಬಿದ್ದಿದ್ದ ಸ್ಮಶಾನವನ್ನು ಕುರಿತು ಹೇಳಿತು ಆ ಫಲವತ್ತಾದ ಭೂಮಿ ..
“ನೋಡೋ ಇಲ್ಲಿ ನನ್ನನ್ನು ಒಬ್ಬ ಕೋಟ್ಯಧಿಪತಿ ಖರೀದಿಸಿದ್ದಾನೆ,ಇನ್ನು ಕೆಲವೇ ದಿನದಲ್ಲಿ ನನ್ನ ಅದೃಷ್ಟ ಬದಲಾಗಲಿದೆ,ಒಳ್ಳೊಳ್ಳೆ ಗಿಡ ಮರ,ನಾಲ್ಕು ಜನರಿಗೆ ನೆರವಾಗಬಲ್ಲ ಕಂಪನಿ ಕಾರ್ಖಾನೆ ಏನಾದರೊಂದು ಬರಲಿದೆ ನೋಡು” ನೋಡುತಿರುವಂತೆ ನನ್ನ ವ್ಯಾಲ್ಯೂ ಹೆಚ್ಚಾಗಲಿದೆ ನೀನು ಒಬ್ಬ ಇದ್ದೀಯ ಬರಡು ಭೂಮಿ ಜನ ನಿನ್ನನ್ನು ಸ್ಮಶಾನ ಮಾಡಿ ಬಿಟ್ಟಿದ್ದಾರೆ,ನನ್ನ ಬಳಿ ನಾಳೆ ಯೋ ನೋಡಿದ್ದೋ ಆ ಕೋಟ್ಯಧಿಪತಿ ಹೂವಿನ ಹಾರದೊಂದಿಗೆ ಪೂಜೆ ಮಾಡಲು ಬರುತ್ತಾನೆ..ನೋಡು ನನ್ನ ಅದೃಷ್ಟ ನೀನೋ ಅದೃಷ್ಟ ಇಲ್ಲದವನು ಎಂದು ಹೇಳಿ ಜೋರಾಗಿ ನಕ್ಕಿತಂತೆ..😔
ಸ್ಮಶಾನಕ್ಕೆ ಬೇಸರ ವಾಗಿತ್ತು ನನ್ನದೂ ದಿನ ಬರಲಿಕ್ಕಿದೆ ಆವತ್ತು ಮಾತಾಡುತ್ತೇನೆ ಎಂದು ಹೇಳಿ ಸುಮ್ಮಗಾಗಿತ್ತು ಬೇಸರದಿಂದ😔😔..
ಅಷ್ಟರಲ್ಲಿ ಒಂದಸ್ಟು
ಜನ ಹೂವಿನ ಹಾರದೊಂದಿಗೆ ತಮಟೆ,ಡೋಲು ವಾದನ ದಿಂದ ಬರುತ್ತಿದ್ದುದು ಕಾಣಿಸಿತು.ಆ ಫಲವತ್ತಾದ ಭೂಮಿ ತಲೆ ಎತ್ತಿ ನೋಡಿತ್ತು…ಜಂಭ ದಿಂದ…ಆದರೆ ಅಲ್ಲೊಂದು ಟ್ವಿಸ್ಟ್ ಇತ್ತು …🤔
ಜನ ಸ್ಮಶಾನಕ್ಕೆ ಹೋಗುತ್ತಿದ್ದರು,ಇಡೀ ಸ್ಮಶಾನ ಹೂಗಳಿಂದ ಸಿಂಗರಿಸಿದ್ದರು…ಆ ಭೂಮಿ ಯನ್ನು ಕೊಂಡ ಕೋಟ್ಯಾಧಿಪತಿ ನಿನ್ನೆ ರಾತ್ರಿ ಹಾರ್ಟ್ ಅಟ್ಯಾಕ್ ಆಗಿ ತೀರಿಕೊಂಡಿದ್ದ..ಹೆಂಗಸರಿಬ್ಬರು ಮಾತಾಡಿಕೊಳ್ಳುವುದು ಕೇಳಿಸುತಿತ್ತು …”ಆ ಧರಿದ್ರ ಭೂಮಿಯನ್ನು ಖರೀದಿಸಿದ್ದೆ ಅವರ ಪಾಲಿಗೆ ಅಪಶಕುನವಂತೆ,ಅಂದೇ ರಾತ್ರಿ ತೀರಿಕೊಂಡರು ಪಾಪ..ಇನ್ನು ಆ ದರಿದ್ರದ ಭೂಮಿಯನ್ನು ಯಾರಿಗೂ ಮರೋಲ್ವತಂತೆ,ಹಾಗೆ ಪಾಳು ಬಿದ್ದಿರಲಿ ದರಿದ್ರದ್ದು,ದೇವರಂತಹ ವ್ಯಕ್ತಿಯನ್ನು ಸಾಯಿಸಿಬಿಟ್ಟಿತ್ತು ಎಂದರು..
ಕೇಳುತ್ತಿದ್ದ ಆ ಫಲವತ್ತಾದ ಭೂಮಿ ತಲೆ ಕೆಳಗೆ ಮಾಡಿದ್ದರೆ..ಈಬಾರಿ ಹೂವುಗಳಿಂದ ಶೃಂಗರಿಸಿದ್ದ ಸ್ಮಶಾನ ತಲೆ ಎತ್ತಿ ನಗುತ್ತಿತ್ತಂತೆ..🙏
ನಮ್ಮಲ್ಲೂ ಇದ್ದಾರೆ 4 ಕಾಸು ಸಂಪಾದಿಸಿದಾಕ್ಷಣ,ಹಣದ ಮದ ತಲೆ ಗೆ ಏರಿ ಹೋಗುವ ಮಂದಿ,ತಮ್ಮ ಮೂಲವನ್ನೇ ಮರೆತು ಬೇರೆ ಯವರನ್ನ ನಿಕೃಷ್ಟ ಮಾಡಿ ಗೇಲಿ ಮಾಡಿ ಮಾತಾಡುವ ಲಜ್ಜೆಗೆಟ್ಟ ಮಂದಿ😡 …
ಬದುಕು ಭಗವಂತನಾಟ ಅಂದ ಮೇಲೆ ಮೇಲಿದ್ದವ ಕೇಳಬರಲು ಅದೆಷ್ಟು ಹೊತ್ತು ಬೇಕು?🙏🙏🙏
ಅಲ್ಲವೇ ?
🟪🟨🟪🌹🟨🟪🟨
ನಿಮ್ಮ ಅಭಿಪ್ರಾಯ ನನ್ನ ವಾಟ್ಸಪ್ ನಂಬರ್ ಗೆ ಕಳುಹಿಸಿ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now