ಪ್ರಯಾಣಿಕರೆಲ್ಲ ಬಯ್ಯುತಿದ್ದರು ಡ್ರೈವರ್ ಮಾತ್ರ ಖುಷಿಯಲ್ಲಿದ್ದ

ಮಠ ಮಠ ಮದ್ಯಾಹ್ನ ಬಸ್ಸು ನಿದಾನವಾಗಿ ಒಂದೇ ವೇಗದಲ್ಲಿ ಹೋಗುತಿತ್ತು ಪ್ರಯಾಣಿಕರೆಲ್ಲ ಒಳ್ಳೆ ನಿದ್ದೆಯಲ್ಲಿದ್ದರು.ಡ್ರೈವರ್ ಸಡನ್ ಆಗಿ ಬ್ರೇಕ್ ಹಾಕಿದ್ದ.ಬಸ್ ನಿಂತಿತ್ತಾದರೂ ನಿದ್ದೆಯಲ್ಲಿದ್ದ ಪ್ರಯಾಣಿಕರು ಮುಗ್ಗರಿಸಿದ್ದರು😔..
ಹಾಳಾದವ,ದರಿದ್ರದವ,ಎಲ್ಲೆಲ್ಲಿಂದ ಬರುತ್ತಾರೋ?😡ಯಾರು ಲೈಸನ್ಸ್ ಕೊಡುತ್ತಾರೋ ಇಂತವನಿಗೆ ಹಾಳಾದವ ಎಂದು ಸವಿನಿದ್ದೆಯಲ್ಲಿದ್ದವರೆಲ್ಲ ಹಿಡಿಶಾಪ ಹಾಕು ತಿದ್ದರೆ,ಇದಾವುದನ್ನು ಕಿವಿಗೆ ಹಾಕಿಕೊಳ್ಳದ ಆ ಡ್ರೈವರ್ ಬಸ್ ನಿಂದ ಇಳಿದು ರಸ್ತೆ ಮದ್ಯ ಮಲಗಿದ್ದ ಮುದ್ದಾದ ನಾಯಿ ಮರಿಯನ್ನು ಎತ್ತಿ ರಸ್ತೆ ಬದಿಯಲ್ಲಿಟ್ಟು ಬಂದಿದ್ದ..🙏
ತನ್ನ ಮರಿಯನ್ನು ರಕ್ಷಿಸಿದ್ದಕ್ಕಾಗಿ ಅಲ್ಲೇ ಇದ್ದ ತಾಯಿ ನಾಯಿ ಮಾತ್ರ ಬಾಲ ಅತ್ತಿಂದಿತ್ತ ಅಲ್ಲಾಡಿಸುತ್ತ ತನ್ನದೇ ಭಾಷೆಯಲ್ಲಿ ಧನ್ಯವಾದ ಹೇಳುತಿತ್ತು..ಪ್ರಯಾಣಿಕ ರೆಲ್ಲರ ಬಾಯಿ ಮುಚ್ಚಿ ಹೋಗಿತ್ತು🥱🥱…
ಇಂತಹ ಅದೆಷ್ಟೋ ಪ್ರಸಂಗ ನಮ್ಮ ಜೀವನದಲ್ಲ್ಲೂ ನಡೆಯುವುದುಂಟು ಇನ್ನೊಬ್ಬ ತಪ್ಪು ಮಾಡಿದ್ದರು ಕೂಡ ಆ ತಪ್ಪಿಗೆ ಏನು ಕಾರಣ ಇರಬಹುದು ಎಂಬುದನ್ನು ತಿಳಿಯದೆ, ಸುಮ್ಮ ಸುಮ್ಮಗೆ ಬಾಯಿಗೆ ಬಂದ ಹಾಗೆ ಬಯ್ಯುವ ಮೊದಲು ಸ್ವಲ್ಪ ಯೋಚಿಸೋಣವೇ🙏 ..
ಉದಾ..ಕರೆಂಟ್ ಹೋದಾಗ ಲೈನ್ ಮ್ಯಾನ್ ಗೆ,ಕೇಬಲ್ ಹೋದಾಗ ಕೇಬಲ್ ನವರಿಗೆ,ಹಾಲಿನವ,ತರಕಾರಿ ಯವ ಪಪೆರ್ನವ ಒಂದೈದು ನಿಮಿಷ ಲೇಟ್ ಆಗಿ ಬಂದರೆ ಸ್ವಲ್ಪ ತಾಳ್ಮೆ ಕಳೆದುಕೊಳ್ಳದೆ ಅಡ್ಜಸ್ಟ್ ಮಾಡುವುದ ಇಂದಿನಿಂದಲೇ ಕಲಿಯೋಣವೇ ?
🟨🟪🟨🟪🟨🟪🟨🟪
ನಿಮ್ಮ ಅಭಿಪ್ರಾಯ ನನ್ನ ವಾಟ್ಸಪ್ ನಂಬರ್ ಗೆ ಕಳುಹಿಸಿ.

9945130630 (ವಾಟ್ಸಪ್)
ಸಣ್ಣಕಥೆ:ಡಾ.ಶಶಿಕಿರಣ್ ಶೆಟ್ಟಿ
ಉಡುಪಿ,ಹೋಂ ಡಾಕ್ಟರ್ ಫೌಂಡೇಶನ್
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























