ಪ್ರತಿ ವೃತ್ತಿಯಲ್ಲೂ ಮಾನವೀಯತೆ ಇರಲಿ

ಆತ ಪೊಲೀಸ್,ಲಂಚ ಕೋರ ಪೊಲೀಸ್ ಸಂಜೆ ಊರಿನ ಸಂದಿ ಸಂದಿಯಲ್ಲಿ ನಿಂತು ಹೆಲ್ಮೆಟ್ ಹಾಕದವರು,ಮಾಸ್ಕ ಹಾಕದವರು,ಸೀಟಬೇಲ್ಟ್ ಹಾಕದವರು,ಪೊಲ್ಯೂಷನ್ ಸರ್ಟಿಫಿಕೇಟ್ ಇಲ್ಲದವರು ಇತ್ಯಾದಿ ಜನರನ್ನು ಹೆದರಿಸಿ ಫೈನ್ ನ ಹೆಸರಲ್ಲಿ ಲಂಚ,ಹಣ ಸಂಗ್ರಹಿಸುವುದಷ್ಟೇ ಅವನಕೆಲಸ..ಜನರೆಲ್ಲಾ ಹಿಂದೆ ಇಂದ ಉಗಿಯುತಿದ್ದರು ಅವನಿಗೆ ..ದೇವರೂ ಕಾಯುತಿದ್ದ ಆತನ ಪಾಪದ ಕೊಡ ತುಂಬಲು ..ಅಂದು ಆ ದಿನ ಬಂದೇ ಬಿಟ್ಟಿತು ನೋಡಿ😔😔 ..
ಆತ ಕೂಲಿ ಕಾರ್ಮಿಕ,ಬೆಳಿಗ್ಗೆ ಇಂದ ಸಂಜೆ ವರೆಗೆ ದುಡಿದು ಸಂಜೆ ಉಳಿಸಿದ್ದ 500 ರೂ. ಖುಷಿ ಖುಷಿ ಯಾಗಿ ಮನೆಗೆ ತೆಗೆದು ಕೊಂಡು ಹೋಗುವವನಿದ್ದ,ಮಗನಿಗೆ ತಿಂಡಿ,ಹೆಂಡತಿಗೆ ತರಕಾರಿ ಅಕ್ಕಿ ಅಮ್ಮನಿಗೆ ಔಷದಿ,ಮಕ್ಕಳ ಪುಸ್ತಕ,ಮನೆಯ ಕರೆಂಟ್ ಬಿಲ್ ಇಷ್ಟು ಮುಗಿಸಬೇಕಿತ್ತು 500 ರೂ ನೋಟಲ್ಲಿ ಈ ಲೆಕ್ಕಾಚಾರದಲ್ಲಿ ಹೆಲ್ಮೆಟ್ ಹಾಕುವುದ ಮರೆತಿದ್ದ ಆತ..ಪೊಲೀಸ್ ಹಿಡಿದದ್ದೇ ಗೊತ್ತಾಗಿರಲಿಲ್ಲ ..😔
ಪೊಲೀಸ್ ಹಿಡಿದಾಗ ಪರಿ ಪರಿಯಾಗಿ ವಿನಂತಿಸಿದ, ಬೇಡಿದ ಕೊನೆಗೆ ಕಣ್ಣೀರು ಹಾಕಿದ 😔,ಆ ಚಂಡಾಲ,ಪಾಪಿ ಯ ಹೃದಯ ಕರಗಲೇ ಇಲ್ಲ ಕೊಲೆರ್ ಹಿಡಿದು ಅಸಭ್ಯವಾಗಿ ಬೈದು 500 ರೂ ಕಿತ್ತುಕೊಂಡ,😔ಪೊಲೀಸ್ ನವನಿಗೆ ಆ 500 ರೂ ಯೇನೂ ಅಲ್ಲ ಆದರೆ ಆ ಕೂಲಿ ಕಾರ್ಮಿಕನಿಗೆ ಅದೇ ಅವನ ಜೀವನ ವಾಗಿತ್ತು😔 …
ನಾಳೆ ಬೈಕ್ ಗೆ ಪೆಟ್ರೋಲ್ ಹಾಕಲು ಹಣ ಉಳಿದಿರಲಿಲ್ಲ ಅವನಲ್ಲಿ😔..ದುಃಖದಲ್ಲಿ ಕಣ್ಣೀರು ತಂದು ಕೊಂಡು ಶಪಿಸಿದ ಸತ್ತೇ ಹೋಗು ಸತ್ತೇ ಹೋಗು ಸತ್ತೇ ಹೋಗು 6 ಬಾರಿ ಹೇಳಿದ್ದ ..
😔😔.
ಅಷ್ಟರಲ್ಲಿ ಅಲ್ಲೊಂದು ಅವಘಡ ಸಂಭವಿಸುತ್ತದೆ🥱😔
ಆ ಪೊಲೀಸ್, ಆ ಬೈಕ್ ನವನನ್ನು ನಿಲ್ಲಿಸಿದ್ದ ಅಲ್ಲೇ ನಿಂತಿದ್ದ ಲೋರಿ ಯನ್ನು ದಾಟುತ್ತಿದ್ದಂತೆ ಅಕಸ್ಮಾತ್ ಆಗಿ ಲೋರಿ ಮುಂದೆ ಹರಿದಿತ್ತು..ನೋಡ ನೋಡುತಿದ್ದಂತೆ ಪೊಲೀಸ್ ನ ಎದೆಯ ಮೇಲೆ ಲೋರಿ ಯ ಬಲಿಷ್ಠ ಚಕ್ರ ಗಳು ಹರಿದಿದ್ದವು ..ಅವನ ಕಿಸೆ ಒಳಗಿದ್ದ ಈಗ ತಾನೇ ಕೂಲಿ ಯವನಲ್ಲಿ ಕಸಿದು ಕೊಂಡಿದ್ದ 500 ರೂ ಯ ಗಾಂಧೀ ನೋಟು ರಕ್ತದಲ್ಲಿ ತೊಯ್ದು ಹೋಗಿತ್ತು..🥱😔🥱
ಇತ್ತ ಇದ್ಯಾವುದು ತಿಳಿಯದ ಕೂಲಿ ಯವ ಮನೆ ಮುಟ್ಟುವುದರೊಳಗೆ 100 ಬಾರಿ ಶಪಿಸಿದ್ದ ಸತ್ತೇ ಹೋಗುತ್ತಾನೆ ಆವ ದರಿದ್ರದವ ಎಂದು.ಈ ಭಾರಿ ಅವನ ಕೂಗು ದೇವರಿಗೂ ಕೇಳಿಸಿತ್ತು😔😔😔….
ಹೌದಲ್ಲವೇ ಅದೆಷ್ಟೋ ಬಾರಿ ಮಾನವೀಯತೆ ಯನ್ನು ಮರೆತು ಮಾಡುವ ಕೆಲಸಗಳು ನಿಜಕ್ಕೂ ನಮ್ಮನ್ನು ಮೃಗೀಯವಾಗಿ ಸುತ್ತದೆ..ಇನ್ನೊಬ್ಬನಿಗೆ ಸಹಾಯ ಮಾಡಬೇಕಾದರೆ ನಮ್ಮಬಳಿ ಹಣ ಇರಲೇ ಬೇಕು ಎಂದುಕೊಳ್ಳುವ ನಾವು ನೀವು ಗಳು ನಿಜವಾದ ಮಾನವೀಯತೆಯನ್ನೇ ಮರೆತಿರುತ್ತೇವೆ ಅವರವರ ವೃತ್ತಿಯಲ್ಲೇ ಮಾನವೀಯತೆ ತೋರುವ ಅದೆಷ್ಟೋ ಅವಕಾಶಗಳಿರುತ್ತವೆ ಅಲ್ಲವೇ ??
ಉದಾಹರಣೆಗೆ
*❤️ *ಪೊಲೀಸ್ ನೊಬ್ಬ ಬಡ ಕೂಲಿ ಕಾರ್ಮಿಕನಿಗೆ ಫೈನ್ ,ಹಾಕದೆ ವಾರ್ನಿಂಗ್ ಕೊಟ್ಟು ಕಳಿಸಬಹುದು.*
❤️ ವೈದ್ಯನೊಬ್ಬ ಸಂಜೆ ಒಬ್ಬ ಬಡ ರೋಗಿಗೆ ಉಚಿತ ವಾಗಿ ಪರೀಕ್ಷಿಸಿ ಔಷದ ಕೊಡಬಹುದು.
❤️ ಇಂಜೀನೀರ್ ಒಬ್ಬ ವರ್ಷಕ್ಕೆ ಒಬ್ಬ ಬಿಕ್ಷುಕನಿಗೆ ಚಿಕ್ಕ ಕೋಣೆಯೊಂದನ್ನು ಕಟ್ಟಿ ಕೊಡಬಹುದು
❤️ ಅಧ್ಯಾಪಕ ನೊಬ್ಬ ವಾರಕ್ಕೊಮ್ಮೆ ಸಮೀಪದ ಸ್ಲಂ ನ ಮಕ್ಕಳಿಗೆ ಪಾಠ ಹೇಳಿಕೊಡಬಹುದು
❤️ ಹಾಲಿನ ಬೂತ್ ನವ ಒಬ್ಬ ಬಡ ಬಿಕ್ಷುಕನಿಗೆ ಒಂದು ಪ್ಯಾಕೆಟ್ ಹಾಲು ಫ್ರೀ ಆಗಿ ಕೊಡಬಹುದು
❤️ ಹೋಟೆಲ್ ನವ ಒಬ್ಬ ಬಡ ಬಿಕ್ಷುಕನಿಗೆ ಒಂದು ಹೊತ್ತು ಊಟ ಇಲ್ಲ ತಿಂಡಿ ಕೊಡಬಹುದು
❤️ ದಿನಸಿ ಅಂಗಡಿಯವ ಸಂಜೆ ಒಂದು ಬಡ ಕುಟುಂಬಕ್ಕೆ 2 ಕೆಜಿ ಅಕ್ಕಿ ಸ್ವಲ್ಪ ದಿನಸಿ ಕೊಡಬಹುದು
❤️ ಬೇಕರಿ ಯವ ಒಬ್ಬ ಭಿಕ್ಷುಕನ ಮಕ್ಕಳಿಗೆ ಬನ್ ಕೊಡಬಹುದು …
ಇದೆಲ್ಲ ನೋಡಲು ಚಿಕ್ಕ ಚಿಕ್ಕ ಕೆಲಸವೇ ಇರಬಹುದು ಆದರೆ ಅದೆಷ್ಟೋ ಅಮಾಯಕರ ಪಾಲಿಗೆ ನೀವೇ ದೇವರಾಗಬಹುದು ..ಇಂದಿನಿಂದಲೇ ಪ್ರಯತ್ನಿಸಿ ನೋಡಿ .
ಒಟ್ಟಲ್ಲಿ ..
ಪ್ರತಿ ವೃತ್ತಿಯ್ಲಲೂ ಮಾನವೀಯತೆ ಇರಲಿ 🙏🙏
ನಿಮ್ಮ ಅನಿಸಿಕೆ ನನಗೆ ವಾಟ್ಸಪ್ ಮಾಡಿ ತಿಳಿಸಿ ..

9945130630 (ವಾಟ್ಸಪ್)
ಸಣ್ಣಕಥೆ:ಡಾ.ಶಶಿಕಿರಣ್ ಶೆಟ್ಟಿ
ಉಡುಪಿ,ಹೋಂ ಡಾಕ್ಟರ್ ಫೌಂಡೇಶನ್
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























