ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 4

ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 4

0Shares

ಕಥೆ ಸಂಖ್ಯೆ 4

ಹ￰ಳದಿ ಇದ್ದದ್ದೆಲ್ಲ ಚಿನ್ನ ಆಗಬೇಕೆಂದೇನೂ ಇಲ್ಲ , ಅದು ಹೊಲಸೂ ಆಗಿರಬಹುದು ‼️
🔴🔴🔴🔴🔴🔴

ಸಣ್ಣ ಕಥೆ:ಡಾ.ಶಶಿಕಿರಣ್ ಶೆಟ್ಟಿ
🔴🔴🔴🔴🔴🔴

ಆಗಾಗ ಕೆಲವು ನಿರ್ಗತಿಕ ವೃದ್ಧರನ್ನು ನೋಡಿಕೊಳ್ಳುತ್ತಿರುವ ವೃದ್ದಾಶ್ರಮ ಗಳಿಗೆ ಉಚಿತ ಭೇಟಿ ನೀಡಿ ವೃದ್ಧರ ಅರೋಗ್ಯ ತಪಾಸಣೆ ಮಾಡುವುದು ಸಲಹೆ ಸೂಚನೆ ಗಳನ್ನು ಕೊಡುವುದು ವೈದ್ಯನಾಗಿ ಡಾ.ರವಿ ಯಾ ಹವ್ಯಾಸಗಳಲ್ಲಿ ಒಂದು..ಅಂದು ಕೂಡ ನಗರದ ಇಂತಹ ಒಂದು ಆಶ್ರಮ ಹೊಂಗಿರಣ ಕ್ಕೆ ಬೇಟಿಕೊಟ್ಟಿದ್ದ ರವಿ..

ಅಲ್ಲಿ ಬಂದಿದ್ದ ಹೊಸ ವೃದ್ದರೊಬ್ಬರನ್ನು ನೋಡುತಿದ್ದ ವಯಸ್ಸು ಸುಮಾರು 62 ಆಗಬಹುದು 2 ಕಣ್ಣು ಗಳಲ್ಲಿ ದೃಷ್ಟಿ ಇರಲಿಲ್ಲ ..ನಿನ್ನೆ ರಸ್ತೆ ಬದಿ ಬಿದ್ದಿದ್ದವರನ್ನು ಸಮಾಜ ಸೇವಕರೊಬ್ಬರು ತಂದು ಇಲ್ಲಿ ಬಿಟ್ಟಿದ್ದಾರೆ ..
ಆ ಚಿನ್ನ ದಂತಹ ಗುಣ ಗಳಿರುವ ಸಮಾಜ ಸೇವಕನ ಹೆಸರೇನೆಂದು ಕೇಳಿದ ರವಿ ಸುಧಾಅಂತೆ ಜನ ಪ್ರೀತಿ ಇಂದ ಸುಧಾ ಅಣ್ಣ ಎನ್ನುತಿದ್ದರು ..ದೇವರು ಅವರನ್ನು ಚೆನ್ನಾಗಿಟ್ಟಿರಲಿ ಎಂದು ಮನಸ್ಸಲ್ಲೇ ಹಾರೈಸಿದ..
ಹಾಗೆ ನಾಳೆ ನಮ್ಮ ಸಂಸ್ಥೆ ವತಿ ಇಂದ ಆ ಮಹಾನುಭಾವ ನಿಗೆ ಸನ್ಮಾನ ನಡೆಯಲಿದೆ ನೀವು ಕಾರ್ಯಕ್ರಮಕ್ಕೆ ಬನ್ನಿ ಎಂದಿದ್ದರು ಸಂಸ್ಥೆಯ ಮುಖ್ಯಸ್ಥರು ಪುಣ್ಯಾತ್ಮನನ್ನು ಒಮ್ಮೆ ನೋಡಲೇ ಬೇಕೆಂದು ಒಪ್ಪಿಕೊಂಡಿದ್ದ …

ಅಂದು ಆ ಹೊಸ ಅಜ್ಜನಲ್ಲಿ ಮಾತಾಡ ಬೇಕೆಂದು ಅವರ ಕೋಣೆಗೆ ಹೋದ ರವಿ ಅಜ್ಜನಲ್ಲಿ ಅವರ ಬಗ್ಗೆ ಕೇಳಿದ ಯಾಕೆ ನಿಮಗೆ ಮಕ್ಕಳಿಲ್ಲವಾ ಎಂದ ಅವರ ಬಾಯಿಯಿಂದ ಕುಟುಂಬ ದ ಕತೆ ಕೇಳಿ ತಿಳಿದು ಕೊಳ್ಳುವ ಕುತೂಹಲವಿತ್ತು ರವಿಗೆ ..

ಜೋರಾಗಿ ಉಸಿರೆಳೆದುಕೊಂಡ ಅಜ್ಜ ಅವರ ಕತೆ ಹೇಳಿದರು ..
ಮಕ್ಕಳು ಇಲ್ಲ ನಾನು ಶ್ರೀಮಂತ ವ್ಯಕ್ತಿ ಮದುವೆ ಆದ ಬಳಿಕ ಜೂಜಾಟ ಸಾರಾಯಿ ಸ್ನೇಹಿತ ರೊಂದಿಗೆ ಕಳೆದು ರಾತ್ರಿ ಮನೆಗೆ ಹೋಗುತ್ತಿದ್ದೆ .ಹೆಂಡತಿ ನನಗೆ ಕಾದು ಕಾದು ಮಲಗುತಿದ್ದಳು..ಕೊನೆಗೆ ನನ್ನ ಜೂಜಾಟ ದಿಂದ ಬೇಸರ ಗೊಂಡು ನನ್ನನ್ನು ಬಿಟ್ಟು ಹೋದಳು ನಾನು ಏಕಾಂಗಿಯಾದೆ, ಆದರೂ ನನ್ನಲ್ಲಿ ಹಣ ಅಸ್ತಿ ಏನೂ ಕಮ್ಮಿ ಇರಲಿಲ್ಲ ..ಆದರೆ ಆತ ಯಾವಾಗ ನನ್ನೊಂದಿಗೆ ಸೇರಿಕೊಂಡನೋ ನಾನು ಅಕ್ಷರಶ ಬಿಕಾರಿ ಯಾಗಿ ಹೋದೆ ದೃಷ್ಟಿ ಇಲ್ಲದ ಕಣ್ಣು ಗಳಿಂದ ಕಣ್ಣೀರು ಹರಿದು ಬರುತಿದ್ದವು😔 …

ಆತ ಯಾರಾತ?
ರವಿಗೆ ಕುತೂಹಲ ಹೆಚ್ಚಾಗಿತ್ತು ಇದೊಂದು 5 ವರ್ಷ ದ ಹಿಂದಿನ ಕಥೆ ,ಸುಧಾಕರ ಆತ ನನ್ನೊಂದಿಗೆ ಇದ್ದ ನನ್ನ ಗಳೆಯ ನನ್ನ ಆಪ್ತ ನಾಗಿ ಬಿಟ್ಟಿದ್ದ ಒಂಟಿಬದುಕಿಗೆ ಆಸರೆ ಯಾಗಿದ್ದ ..ಮತ್ತೆ ಅತ್ತರು ….

ನಾನಂದು ಕೊಂಡೆ ಆತ ನನಗಾಗಿಯೇ ಇದ್ದಾನೆ ಎಂದು ಪ್ರತಿದಿನ ತಡರಾತ್ರಿ ತನಕ ನನ್ನೊಟ್ಟಿಗೆ ಗುಂಡು ಹಾಕುತಿದ್ದ ಹೀಗೆ ಒಂದೆರಡು ವರ್ಷದಲ್ಲಿಯೇ ನನ್ನ ಸಂಪೂರ್ಣ ಸೀಕ್ರೆಟ್ ತಿಳಿದು ಕೊಂಡಿದ್ದ .ನನಗೆ ಗೊತ್ತಿಲ್ಲ ದಂತೆ ನನ್ನ ಕಣ್ಣಿನ ಡ್ರಾಪ್ಸ್ ಗೆ ಅದೇನೂ ಮಿಕ್ಸ್ ಮಾಡಿದ್ದ ಅಲರ್ಜಿ ಗೆಂದು ಪ್ರತಿರಾತ್ರಿ 2 ಕಣ್ಣುಗಳಿಗೆ 2 ಡ್ರಾಪ್ಸ್ ಬಿಡುತಿದ್ದುದು ಅವನಿಗೆ ಗೊತ್ತಿತ್ತು …ಕ್ರಮೇಣ 15 ದಿನದಲ್ಲಿ ನನ್ನ 2 ಕಣ್ಣು ಮಂಜಾಗುತಿದ್ದವು…ಮತ್ತೆ ಒಂದು ವಾರದೊಳಗೆ ಕಣ್ಣು ಎರಡೂ ಕುರುಡಾಗಿತ್ತು..ನನ್ನ ವೈದ್ಯರ ಬಳಿ ಕರೆದೊಯ್ಯುವ ಕೆಲಸವೂ ಅವನೇ ಮಾಡುತಿದ್ದ .ಏನೋ ಸುಳ್ಳು ಹೇಳಿ ನನ್ನ ಆಸ್ತಿಗೆ ಹಾಗೆ ಒಂದೆರಡು ಖಾಲಿ ಚೆಕ್ ಗೆ ನನ್ನ ಸಹಿ ತೆಗೆದು ಕೊಂಡಿದ್ದ..

ಹೀಗಿರಲೊಂದು ದಿನ ನನ್ನನ್ನು ಕರೆದು ಕೊಂಡು ಹೋಗಿ ಯಾವುದೊ ಊರಲ್ಲಿ ರಸ್ತೆ ಬದಿ ಬಿಟ್ಟು ಹೋಗಿದ್ದ ಯಾರೂ ಇಲ್ಲದ, ಕಣ್ಣುಗಳಿಲ್ಲದ ನಾನೂ ಹಣ,ಆಸ್ತಿ ಇದ್ದೂ ಬಿಕಾರಿಯಾಗಿ ಬಿಟ್ಟಿದ್ದೆ …..ಮತ್ತೆ ಅಳುತಿದ್ದರು ಅಜ್ಜ…
ಸ್ವಲ್ಪ ತಡೆದು ಕೇಳಿದ ರವಿ ಅಜ್ಜ ಆ ಸುಧಾಕರನ ಬಗ್ಗೆ ಏನಾದರೂ ಗೊತ್ತಿದಿಯೇ ಎಂದು ಸಹಜವಾಗಿಯೇ ಅವನ ಮೇಲೆ ಸಿಟ್ಟಿತ್ತು ಅವನಿಗೆ …ಹ ಏನು ಇಲ್ಲ ಸರ್…ಆದರೆ ಆತ ಮಾತಾಡುವಾಗ ತೊದಲುತ್ತಾನೆ “ತ” ಉಚ್ಚಾರ ಮಾಡುವಾಗ ತೊದಲುತ್ತಾನೆ ಎಂದಷ್ಟೇ ಹೇಳಿದ್ದರು …ಅಜ್ಜನನ್ನು ಪರೀಕ್ಷಿಸಿ ಮನೆಕಡೆ ಹೋದ ರವಿ … ಅವನ ತಲೆಯ ಓಳಗೆ ಅದೇ ಕಳ್ಳ ಸುಧಾಕರ ತಿರುಗುತಿದ್ದ

ಅಷ್ಟರಲ್ಲಿ ಗಂಟೆ ಸಂಜೆ 4 ಆಗಿತ್ತು ತಕ್ಷಣ ಆಶ್ರಮದ ಸನ್ಮಾನ ಕಾರ್ಯಕ್ರಮ ನೆನಪಾಗಿತ್ತು ಅರ್ಜೆಂಟ್ ಅಲ್ಲಿ ಓಡೋಡಿ ಆಶ್ರಮಕ್ಕೆ ಬಂದಿದ್ದೆ ಅಲ್ಲಿ ಸಭೆ ಸಿದ್ಧಗೊಂಡಿತ್ತು ..ಆ ಮಹಾ ಸಮಾಜ ಸೇವಕ ನನ್ನ ನೀಲಿ ಮೈಸೂರು ಪೇಟ ಹಾಕಿ ಸನ್ಮಾನಿಸಲಾಗಿತ್ತು..ತುಂಬಿದ ಜನರ ನಡುವೆ ಆತ ಸನ್ಮಾನ
ಸ್ವೀ ರಿಕರಿಸುತಿದ್ದ, ಜನರೆಲ್ಲಾ ಆತನ ಸಮಾಜ ಸೇವಾ ಕಾರ್ಯಗಳ ಬಗ್ಗೆ ಹಾಡಿ ಹೊಗಳುತಿದ್ದರು …ಹಿಂದಿನಿಂದ ಮೈಕ್ ಅಲ್ಲಿ ಚಪ್ಪಾಳೆ …ಚಪ್ಪಾಳೆ…ಎಂಬ ಇಂಪಾದ ಪದ್ಯ ಮೊಳಗುತಿತ್ತು.

ಅಷ್ಟರಲ್ಲಿ ಮೈಕ್ ಅಲ್ಲಿ ಈಗ ಸನ್ಮಾನಿತರ ಮಾತು ಎನ್ನುವಾಗ ಇಡೀ ಸಭೆ ಮೌನವಾಗಿತ್ತು …ಸಭೆಯಲ್ಲಿ ಒಂದಷ್ಟುಜನ ಸುದಣ್ಣನಿಗೆ ಜಯವಾಗಲಿ ಎಂಬ ಜಯಘೋಷ ಕೂಗುತಿದ್ದರು ..
ಸುದಣ್ಣ ಮಾತು ಆರಂಭಿಸಿದರು ..”ನೆರೆದಿರುವ ಎಲ್ಲ ರಿಗೂ ಸಂಜೆಯ ಶುಭಾಶಯ ಗಳು ಎಂದಾಗ ಇಡೀ ಸಭೆ ಶಿಳ್ಳೆ ಹಾಕಿತ್ತು …ಭಾಷಣ ಮುಂದುವರಿಸಿದರು ಸುದಣ್ಣ..ಇದು ನಿರ್ಗ ತಿ….ತಿ…ತಿ …ತಿಕ ..ತ…ತ..ತ..ತಂದೆ ….ತಾ….ತಾ…ತಾ…ತಾಯಿ ಯಾರನ್ನು ಸಾಕುವ ಆಶ್ರಮ ..ಈತ “ತ” ಉಚ್ಚಾರ ತೊದಲುತ್ತಿದ್ದುದು ಒಂದು ಕ್ಷಣ ರವಿಯ ಕಿವಿ ಗಳನ್ನು ನೇರವಾಗಿಸಿತ್ತು,ಅಲ್ಲಿದ್ದವರ ಬಳಿ ಕೇಳಿದ ಈ ಸುದಣ್ಣ ನ ಪೂರ್ತಿ ಹೆಸರೇನು ಎಂದು ಸುಧಾಕರ ಎಂದರು ಯಾರೋ….🥱🥱🥱

ಅಜ್ಜನ ಬದುಕನ್ನು ಸರ್ವನಾಶ ಮಾಡಿದ ಕಳ್ಳ ಖದೀಮ ಸುಧಾಕರ ಇವನೇ ತೊದಲುವ ಸುಧಾಕರ ಇವನೇ…ಎಂತಹ ನಾಟಕ ಆಡುತ್ತಿದ್ದಾನೆ ಲೋಫರ್ ಎನ್ನುತಿದ್ದವರೇ ಅಲ್ಲಿ ನಿಲ್ಲದೆ ಮನೆ ಕಡೆ ಹೋಗಲು ಕಾರ್ ಬಳಿ ಹೋದರು ವೈದ್ಯರು..ಇಲ್ಲಿ ಕಾಗೆ ಬಂಗಾರವನ್ನು ಬಂಗಾರಕ್ಕೆ ಹೋಲಿಸುತ್ತಿರುವುದು ಇಷ್ಟವಾಗಿರಲಿಲ್ಲ ವೈದ್ಯರಿಗೆ ..ಅಲ್ಲಿಗೂ ಅವನ ಭಾಷಣ ಕೇಳುತಿತ್ತು ….ಮೋಸ ವಂಚನೆ ರಹಿತ ಜೀವನವೇ ಭಗವಂತ ಇಷ್ಟಪಡುವುದು ಕೊನೆಗೆ ನಾವು ಅಂತ ಜೀವನವನ್ನು ನಡೆಸೋಣ ಎಂದಿದ್ದ ಇಡೀ ಸಭೆ ಎದ್ದುನಿಂತು ಕರತಾಡನ ಮಾಡಿತ್ತು …ಇವರಿಗನ್ನಿಸಿತ್ತು ..ಭೂತದ ಬಾಯಲ್ಲಿ ಭಗವದ್ಗೀತಾ ಎಂದರೆ ಇದೆ ಇರಬೇಕು ಎಂದುಕೊಂಡರು …

ನಮ್ಮಲ್ಲೂ ಇದ್ದಾರೆ ಇಂತಹ ಭೂತಗಳು ಆಡುವ ಮಾತಿಗೂ ಅವರ ವ್ಯಕ್ತಿತ್ವಕ್ಕೂ ಸಂಬಂಧವೇ ಇಲ್ಲದ ಕಳ್ಳರು😡😡 ಪಟಿಂಗರು,ನಾಳೆ ರಾಜಕಾರಣಿ ಯಾಗಬೇಕೆಂದು ಇಲ್ಲ ಸಲ್ಲದ ನಾಟಕ ಮಾಡುವ ಖದೀಮರು ..ಪ್ರಚಾರಕ್ಕಾಗಿ ಏನೂ ಮಾಡಲು ಹೇಸದವರು..😡😡
ಮನಸ್ಸಿನಲ್ಲಿ ಕೆಟ್ಟ ಉದ್ದೇಶ ವನ್ನಿಟ್ಟು ಸಮಾಜ ಸೇವೆ ಎಂಬ ನಾಟಕ ವನ್ನಾಡುತ್ತಿರುವ ಗುಳ್ಳೆ ನರಿಗಳು…ಹಾಗಾಗಿ ನೆನಪಿರಲಿ ಬೆಳ್ಳಗಿದ್ದದೆಲ್ಲ ಹಾಲು ಅಲ್ಲ ಅಳೆದು ತೂಗಿ ವ್ಯಕ್ತಿಯನ್ನು ಲೆಕ್ಕ ಹಾಕಿ ..ದೇವರಂತ ವ್ಯಕ್ತಿ ,ಎಷ್ಟೋ ಸಲ ದೆವ್ವದಂಥ ವ್ಯಕ್ತಿಯೇ ಆಗಿರುತ್ತಾನೆ ಹಾಗಾಗಿ ವ್ಯಕ್ತಿಯ ವ್ಯಕ್ತಿತ್ವ ನಿರ್ಣಯಿಸುವ ಮೊದಲು ಈ ಮಾತು ನೆನಪಿರಲಿ …

ಹಳದಿ ಇದ್ದದ್ದೆಲ್ಲ ಚಿನ್ನ ಆಗಬೇಕೆಂದೇನೂ ಇಲ್ಲ,ಅದು ಹೊಲಸೂ ಆಗಿರಬಹುದು‼️
🔴🔴🔴🔴🔴🔴

ಡಾ.ಶಶಿಕಿರಣ್ ಶೆಟ್ಟಿ
9945130630
(ವಾಟ್ಸಪ್ )
ಉಡುಪಿ
(ಈ ಕತೆಯ ಬಗ್ಗೆ ನಿಮ್ಮ ಅಭಿಪ್ರಾಯ ಗಳನ್ನು ವಾಟ್ಸಪ್ ಮೂಲಕ ನನ್ನೊಂದಿಗೆ ಹಂಚಿಕೊಳ್ಳಿ )
🔴🔴🔴🔴🔴🔴

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now