ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 39

ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 39

0Shares

ಕನಸು ಕಾಣುವುದು ಓಕೆ,ಆದರೆ ಕನಸಲ್ಲೇ ಬಾಳುವುದು ಯಾಕೆ ?

ಆತ ಭಿಕ್ಷುಕ ಅಂದು 100 ರೂ ಕೊಟ್ಟು ಆ ಲಾಟರಿ ಯೊಂದನ್ನು ಖರೀದಿಸಿದ್ದ ..ಮೊದಲ ಬಹುಮಾನ 1 ಕೋಟಿ ಇದ್ದರೆ ಸುಮಾರು 50 ಜನರಿಗೆ ಲಕ್ಷ ದಸ್ಟು ಬಹುಮಾನ ವಿತ್ತು ಭಿಕ್ಷುಕ ನಿರ್ಧರಿಸಿ ಬಿಟ್ಟಿದ್ದ ಭಿಕ್ಷೆ ಬೇಡುವುದು ಇವತ್ತಿಗೆ ಕೊನೆ ಎಂದು ..ತನ್ನ ಬಿಕ್ಷಾ ಪಾತ್ರೆ ಯನ್ನು ಗಟಾರಕ್ಕೆ ಎಸೆದು ಇದ್ದ 100 ರೂ ಅಲ್ಲಿ ಲಾಟರಿ ತಗೊಂಡು ಮಟ ಮಟ ಮದ್ಯಾಹ್ನ ಸುಂದರ ನಾಳೆಯ ಕನಸಲ್ಲಿ ಮಗ್ನನಾಗಿದ್ದ,ಹೊಟ್ಟೆ ಮಾತ್ರ ಚುರುಗುಟ್ಟುತಿತ್ತು ಹಸಿವೆ ಇಂದ 😔….

ಹಗಲು ಗನಸು ದೀರ್ಘವಾಗಿತ್ತು, ಹಸಿವನ್ನು ಮರೆಸಿತ್ತು ಆ ಕ್ಷಣ 1 ಕೋಟಿ ನಾಳೆ ಸಿಕ್ಕರೆ ಮೊದಲು ಜಾಗ,ಮನೆ,ಒಂದು ಚಿಕ್ಕ ಕಾರು ತಿರುಗಾಡಲು,ಸ್ವಲ್ಪ ಹಣ ಬ್ಯಾಂಕಲ್ಲಿ ಬಡ್ಡಿಗೆ ಇಡುವುದು ಮತ್ತೆ ಸ್ವಲ್ಪ ಹಣ ದಲ್ಲಿ ಒಂದು ಹೂವಿನ ಅಂಗಡಿ ಇಡುವವುದು ಇನ್ನೊಂದಿಷ್ಟು ಹಣದಲ್ಲಿ ವ್ಯಾಪಾರ ಮಾಡುವುದು ದಿನ ಗಳುರುಳುತ್ತಿದ್ದಂತೆ ಲಕ್ಷ ಲಕ್ಷ ಹಣ ನಿಜಕ್ಕೂ😘🙏 ಈ ಕನಸು ನನಸಾಗಲು ಒಂದೇ ದಿನ ಉಳಿದಿತ್ತು .ಗಂಟೆ ರಾತ್ರಿ 9 ಆಗಿದ್ದು ,ಮತ್ತೆ ಹೊಟ್ಟೆ ಚುರುಗುಟ್ಟುವಾಗಲೇ ಗೊತ್ತಾಗಿದ್ದು,ಮದ್ಯಾಹ್ನವೂ ಊಟ ಮಾಡದೇ ಇದೆ ಕನಸಲ್ಲಿ ಕಳೆದು ಹೋಗಿದ್ದನ್ನು ನೆನಪಿಸಿತ್ತು. 😔

ಹಸಿವು ಹೆಚ್ಚಾದಾಗ ಕಿಸೆ ಹುಡುಕಿದರೆ 1 ಪೈಸೆ ಇರಲಿಲ್ಲ ,ಮದ್ಯಾಹ್ನ ಇದ್ದ 100 ರೂ ಅಲ್ಲಿ ಲಾಟರಿ ತೆಗೆದುಕೊಂಡಿದ್ದು ನಂತರ ಬಿಕ್ಷಾ ಪಾತ್ರೆ ಎಸೆದಿದ್ದು ಇಲ್ಲಿಯ ತನಕ ಕನಸು ಕಾಣತಿದ್ದದ್ದು ನೆನಪಾಗಿತ್ತು…ಹಸಿವಾದರೂ ತಡೆದುಕೊಂಡಿದ್ದ,ಇಂದಿಗೆ ಈ ಜೀವನ ಮುಗಿಯುತ್ತಲ್ಲ ಎಂಬ ಅಸೆ ಯೊಂದಿಗೆ ತಣ್ಣೀರು ಕುಡಿದು ಬೆಳಗ್ಗಿನ ಸುದಿನ ವನ್ನು ನೆನೆಯುತ್ತ ಬಸ್ ಸ್ಟಾಂಡ್ ಅಲ್ಲೇ ಮಲಗಿದ್ದ .😔

ಮದ್ಯಾಹ್ನದ ಹಗಲು ಗನಸು ಈ ರಾತ್ರಿಯೂ ಮುಂದುವರಿದಿತ್ತು ..ಲಕ್ಷ ಲಕ್ಷ ದೊಂದಿಗೆ ಲಕ್ಷಾದಿ ಪತಿ ಆಗಿದ್ದು ಆಳುಗಳು ಮನೆಯಲ್ಲಿ ಇರುವುದು ನನ್ನ ಶ್ರೀಮಂತಿಕೆ ನೋಡಿ ಮದುವೆ ಆಗಿದ್ದು ಒಳ್ಳೆ ಶ್ರೀಮಂತ ಮಾವ, ಮಕ್ಕಳು ಒಟ್ಟಲ್ಲಿ ಕನಸಲ್ಲೇ ಸ್ವರ್ಗಕ್ಕೆ ಕಿಚ್ಚು ಹಚ್ಚಿದ್ದ …

ಯಾರೋ ಮೈಮೇಲೆ ನೀರೆರಚಿದಾಗಲೇ ಗೊತ್ತಾಗಿದ್ದು ಬೆಳಗ್ಗೆ ಆಗಿದ್ದು,ಬಸ್ಸ್ಟ್ಯಾಂಡ್ ಸಮೀಪದ ಅಂಗಡಿಯವ ನೀರೆರಚಿದ್ದ,ಇನ್ನು ಏಳದಿದ್ದರೆ ಪೆಟ್ಟು ಬೀಳುವುದು ಖಚಿತ ಎಂದು ತಿಳಿದಿದ್ದ ,ಆದರೂ ಈ ಸವಿ ಕನಸು ಎಷ್ಟೊಂದು ಸುಖಕರ ಆಹಾ, ಇನ್ನೊಂದಿಷ್ಟು ಹೊತ್ತು ಇದ್ದಿದ್ದ ರೆ ಅದೆಷ್ಟು ಚೆನ್ನ 🙏ಎಂಬ ಮನದ ಆಸೆಗೆ ವಾಸ್ತವತೆ ಅದಾಗಲೇ ಕಿಚ್ಚು ಹಚ್ಚಿ ಆಗಿತ್ತು 😔….

ಎದ್ದವನಿಗೆ ಮೊದಲು ನೆನಪಾಗಿದ್ದೆ ಲಾಟರಿ ಸಮೀಪದ ಅಂಗಡಿಯವನಲ್ಲಿ ಬೇಡಿ ಪೇಪರ್ ತಗೊಂಡ ಏದುಸಿರು ಬಿಡುತ್ತ ಕೋಟಿ ವಿಜೇತನ ನಂಬರ್ ನೋಡುತಿದ್ದ ಮನಸ್ಸು ನೀನೆ ನೀನೆ ಎನ್ನುತಿತ್ತು …ಆದರೆ ಅಲ್ಲಿ ನಂಬರ್ ಬೇರೆಯೇ ಇತ್ತು ಮತ್ತೊಮ್ಮೆ ನೋಡಿದ ಕಣ್ಣು ಬಿಟ್ಟು ಒಟ್ಟು ಪೇಪರ್ ಅಲ್ಲಿದ್ದ 80 ನಂಬರ್ ಗಳಲ್ಲೂ ಇವನ ನಂಬರ್ ಮಿಸ್ ಆಗಿತ್ತು 😔😔….

ಉಕ್ಕಿ ಬರುತ್ತಿದ್ದ ನಿರಾಸೆ ಆ ಲಾಟರಿ ಯನ್ನು ಹರಿದು ಹಾಕಿಸಿತ್ತು.😔ನಿನ್ನೆ ಇಂದ ಕಟ್ಟಿದ್ದ ಆಶಾಗೋಪುರ ಕಣ್ಣೆದುರೇ ಕುಸಿಯುತಿತ್ತು😔😔 …ಮದುರ ಸಿಹಿ ಕನಸನ್ನು ,ಭಯಾನಕ ಕಹಿ ವಾಸ್ತವತೆ ಮರೆ ಮಾಚಿತ್ತು😔 ಒಂದು ಕ್ಷಣ ಕಣ್ಣೀರಿ ನೊಂದಿಗೆ ದುಃಖ ಮುಖವನ್ನು ಆವರಿಸಿತ್ತು😔 ನಿರಾಶೆಯಿಂದ ಅಲ್ಲೇ ಕೂತಿದ್ದ ..ಭೂಮಿ ಬಾಯಿತೆರೆದು ನುಂಗಿದಂತೆ ಭಾಸವಾಗಿತ್ತು ಆತನಿಗೆ😔

ನಿನ್ನೆ ಇಂದ ಕನಸನ್ನೇ ನುಂಗಿ ನೀರು ಕುಡಿದಿದ್ದ ಹೊಟ್ಟೆ, ಈಗ ಹಸಿವೆ ಇಂದ ಕೂಗಾಡುತಿತ್ತು …ಅವನಲ್ಲಿ ಆಗ ಊಟಕ್ಕೂ ಹಣ ಇರಲಿಲ್ಲ😔ಭಿಕ್ಷೆಗೆ ಪಾತ್ರೆ ಇರಲಿಲ್ಲ 😔😔..ಏನೋ ನೆನಪಾದವ ನಂತೆ ಆ ಗಟಾರ ದ ಕಡೆ ಓಡಿದ ..ಮತ್ತೆ ಊಟ ಮಾಡ ಬೇಕಾದರೆ ಗಟಾರದಲ್ಲಿದ್ದ ಬಿಕ್ಷಾ ಪಾತ್ರೆಯ ಹುಡುಕುವುದು ಅಗತ್ಯ ವಾಗಿತ್ತು ಅವನಿಗೆ😔😔 .

ಸತ್ಯ ಅಲ್ಲವೇ ಅದಕ್ಕೆ ನಮ್ಮ ಹಿರಿಯರು ಹೇಳಿದ್ದು ಹಾಸಿಗೆ ಇದ್ದಷ್ಟೇ ಕಾಲುಚಾಚು,ಆಕಾಶಕ್ಕೆ ಏಣಿ ಹಾಕಬೇಡ,ನೆಲನೋಡಿ ನಡೆ,ತಿರುಕನ ಕನಸು ಕಾಣಬೇಡ ಎಂದು ..ಯಾಕೆಂದರೆ ನಮ್ಮಲ್ಲೂ ಇದ್ದಾರೆ ಆಕಾಶಕ್ಕೆ ಏಣಿ ಹಾಕುವ ಮಂದಿ ..ಇದು ಮಾಡಿದರೆ ಹಾಗಾಗುತ್ತೇನೆ ಹೀಗಾಗುತ್ತೇನೆ ಎಂಬ ಕನಸಿನ ಹಿಂದೆ ಇಂದಿನ ವಾಸ್ತವ ವನ್ನು ಮರೆಯುವ ಮಂದಿ …ಇಂತಹವರಿಗೆಲ್ಲ ಒಂದೇ ಮಾತು ಹೇಳಲು ಬಯಸುತ್ತೇನೆ…ಮತ್ತೆ ಮತ್ತೆ ಹೇಳುತ್ತಿದ್ದೇನೆ ….

ಕನಸು ಕಾಣುವುದು ಓಕೆ ,ಆದರೆ ಕನಸಲ್ಲೇ ಬಾಳುವುದು ಯಾಕೆ ?🙏
😔😔😔😔
ನಿಮ್ಮ ಅನಿಸಿಕೆ ನನಗೆ ವಾಟ್ಸಪ್ ಮಾಡಿ ತಿಳಿಸಿ ..

9945130630 (ವಾಟ್ಸಪ್)

ಸಣ್ಣಕಥೆ:ಡಾ.ಶಶಿಕಿರಣ್ ಶೆಟ್ಟಿ

ಉಡುಪಿ,ಹೋಂ ಡಾಕ್ಟರ್ ಫೌಂಡೇಶನ್

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now