ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 38

ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 38

0Shares

ಅಪ್ಪನ,ಅಮ್ಮನ,ಪ್ರೀತಿಯ ದಿನ ಎಂದು ನಿಮ್ಮ ಮೊಬೈಲ್ ನೊಂದಿಗಲ್ಲ …ನಿಮ್ಮವರೊಂದಿಗೆ ಕಳೆಯುವುದ ಕಲಿಯಬೇಕಿದೆ


ಕಳೆದ 3 ದಿನದಿಂದ ಅಮ್ಮನ ಮಾತು ಕಿವಿಯೊಳಗೆ ಹಾಕಿಕೊಳ್ಳುತ್ತಿಲ್ಲ ಪ್ರತಾಪ ..ಅಪ್ಪನ ಇನ್ಸುಲಿನ್ ಕಾಲಿ ಆಗಿದೆ ತಾರೋ ಎಂದು ಹೇಳಿ ಹೇಳಿ ಸುಸ್ತಾಗಿತ್ತು ಅಮ್ಮನಿಗೆ 😔…

ಪ್ರತಾಪ ಮಾತ್ರ ಬೆಳಿಗ್ಗೆ ಇಂದ ವಾಟ್ಸಪ್,ಫೇಸ್ ಬುಕ್ ಒಳಗೆ ತಲೆ ಇಟ್ಟು ಕೂತಿದ್ದ ಅವ ಹಾಗೆ ಮೊಬೈಲ್ ಒಳಗೆ ಅದು ವಾಟ್ಸಪ್ ಒಳಗೆ ಹೋಗಿ ಬಿಟ್ಟನೆಂದರೆ ಮುಗಿಯಿತು ಬೆಳಿಗ್ಗೆ ಇಂದ ಸಂಜೆ ತನಕ ಅದರೊಳಗೆ ಕಳೆದು ಹೋಗಿ ಬಿಡುತ್ತಾನೆ ಅಮ್ಮನಿಗೂ ಗೊತ್ತಿತ್ತು ಈ ವಿಷಯ..

*ಅಂದು ಫಾದರ್ಸ್ ಡೇ..ಸ್ಟೇಟಸ್ ನಲ್ಲಿ ಈತ ಹಾಕಿದ ಅಪ್ಪ I love u ಸಾಂಗ್ ಗೆ ಫೋಟೋ ಒಟ್ಟು ಮಾಡಿ ಹಾಕಿದ ವಿಡಿಯೋ ಸಕತ್ ವೈರಲ್ ಆಗಿತ್ತು. ಬೆಳಿಗ್ಗೆ ಇಂದ ಗೆಳೆಯರ ಆತ್ಮೀಯರ ಸಂದೇಶಗಳು ರಾಶಿ ರಾಶಿ ಬರುತಿತ್ತು …ಫೇಸ್ ಬುಕ್ *ಅಲ್ಲೂ ಅವನ ವಿಡಿಯೋ ಸದ್ದು*
ಮಾಡುತಿತ್ತು ಅದೆಷ್ಟೋ ಕಾಮೆಂಟ್ ಗಳು ಓದುವಾಗ ಮನಸ್ಸು ಖುಷಿ ಇಂದ ತೇಲುತಿತ್ತು ಪ್ರತಾಪನಿಗೆ…

ಅಮ್ಮ ಮಗನನ್ನು ಕರೆದು ಕರೆದು ಬೇಸತ್ತಿದ್ದರು ಒಬ್ಬನೇ ಮಗ ಎಂದು ಮುದ್ದಿಸಿದ್ದು ಅತಿಯಾಯಿತು ಎಂದು ತಾವೇ ವೈದ್ಯರಿಗೆ ಫೋನ್ ಮಾಡಿದರು ..

ವೈದ್ಯರು ಬರುವ ತನಕ ಮನೆಯ ಇನ್ನೊಂದು ಕೂಣೆ
ಅಲ್ಲಿದ್ದ ಅಪ್ಪನ ಪರಿಸ್ಥಿತಿ ಗಂಭೀರ ವಾಗಿದ್ದದ್ದು ಗೊತ್ತಾಗಿರಲಿಲ್ಲ ಪ್ರತಾಪನಿಗೆ😔😔

ಪಕ್ಕದ ರೂಮ್ ನಲ್ಲಿ ವೈದ್ಯರ ದೊಡ್ಡ ಧ್ವನಿ ಕೇಳಿದಾಗಲೇ ಕಿವಿ ಯಲ್ಲಿ ಸಿಕ್ಕಿಸಿದ ಬ್ಲೂಟೂತ್ ಕೆಳಗಿಟ್ಟಿದ್ದ . 😔

ವೈದ್ಯರು ತಾಯಿಗೆ ಬಯ್ಯುತಿದ್ದರು 3 ದಿನದಿಂದ ಇನ್ಸುಲಿನ್ ಕೊಡುತ್ತಿಲ್ಲ ಶುಗರ್ 650 ಇದೆ ಪೇಷಂಟ್ ಮಾತಾಡುತ್ತಿಲ್ಲ ಇಷ್ಟು ನೆಗ್ಲೇಜೆನ್ಸಿ ಯಾಕೆ ಮಾಡ್ತೀರಾ ಅರ್ಧಗಂಟೆ ಒಳಗೆ ಆಸ್ಪತ್ರೆ ಅಲ್ಲಿರಿ ಇಲ್ಲ ನಿಮ್ಮ ಗಂಡನನ್ನ ಕಳಕೊಳ್ಳುತ್ತೀರಿ ಎಂದವರೇ ಹಣವು ತೆಗೆದು ಕೊಳ್ಳದೆ ಸಿಟ್ಟಲ್ಲಿ ಅಲ್ಲಿಂದ ಹೋಗಿದ್ದರು ..ತಾಯಿ ಕಣ್ಣೆರಡು ಒದ್ದೆ ಯಾಗಿತ್ತು ಸೀದಾ ಪ್ರತಾಪನ ರೂಮ್ಗೆ ಬಂದಳು ಸಿಟ್ಟಲ್ಲಿ😡 ….

“ಮುಟ್ಟಾಳ ……ಅಪ್ಪ I love u ಎಂದು ವಾಟ್ಸಪ್ ಅಲ್ಲಿ ಹಾಕಿದಾಕ್ಷಣ ಅಲ್ಲ ಕಣೋ, ಅಪ್ಪ ವಯಸ್ಸಾದಾಗ ಅವರ ಬೇಕು ಬೇಡ ಗಳನ್ನೂ ನೋಡಿ ಕೊಳ್ಳುವುದು ಮುಖ್ಯ …ಕಳೆದ ೩ ದಿನಗಳಿಂದ ಆ ದರಿದ್ರ ಮೊಬೈಲ್ಗೆ ಕೊಡೊ ಒಂದಂಶ ಸಮಯ ನಿನ್ನಪ್ಪನಿಗೆ ಕೊಟ್ಟಿದ್ದರೆ ನಿನ್ನಂತಹ ಮಗ ಹುಟ್ಟಿದ್ದು ಸಾರ್ಥಕ ವಾಗುತಿತ್ತು ರಾಕ್ಷಸ ನೀನು ಹೀಗೆಂದು ಅಂದೇ ಗೊತ್ತಿದ್ದರೆ ಕತ್ತು ಹಿಡಿದು ಅಂದೇ ಸಾಯಿಸುತ್ತಿದ್ದೆ ಎಂದು ಗರ್ಜಿಸಿದಳು ತಾಯಿ” ..ಸೆರಗಲ್ಲಿ ಕಣ್ಣೀರು ಒರೆಸುತ್ತಾ ರಿಕ್ಷಾಕ್ಕೆ ಕಾಲ್ ಮಾಡಿದ್ದಳು😔😔…

ತಾಯಿಯ ಈ ಆವೇಶಕ್ಕೆ ಒಂದರೆ ಕ್ಷಣ ಅವಕ್ಕಾಗಿ ಎದ್ದು ನಿಂತಿದ್ದ ಪ್ರತಾಪ ಪಾಪ ಪ್ರಜ್ಞೆ ಅವನನ್ನು ಕಾಡುತಿತ್ತು,ಕೈಯಲ್ಲಿ ಬಚ್ಚಿಟ್ಟಿದ್ದ ಮೊಬೈಲ್ ತನಗರಿವಿಲ್ಲದೆ ನೆಲಕ್ಕೆ ಬಿದ್ದಿತ್ತು, ಟಿನ್ ಎಂಬ ಶಬ್ದ ದೊಂದಿಗೆ ಮೆಸೇಜ್ ಒಂದು ಬಂದಿತ್ತು ..ನಿಂತಲ್ಲೇ ಓದಿದ ಗೆಳತಿ ಕವನ ಅವನ ವಿಡಿಯೋ ಕ್ಕೆ ಕಾಮೆಂಟ್ ಮಾಡಿದ್ದಳು ಓದಿದ ” ನಿನ್ನಂತ ಮಗನ ಪಡೆದ ಆ ತಂದೆ ನಿಜಕ್ಕೂ ಧನ್ಯ ಕಣೋ ಪ್ರತಾಪ .I proud of you”
ತಕ್ಷಣ ಕೈ ಇಂದ ತಲೆ ದಿಂಬನ್ನು ಮೊಬೈಲ್ ಮೇಲೆ ಎಸೆದಿದ್ದ ಅಮ್ಮ ಓದಿದ್ದರೆ ಮತ್ತೆ ಮಂಗಳಾರತಿ ಇನ್ನೊಮ್ಮೆ ಆಗುವ ಸಂಭವವಿತ್ತು ..😔😔

ನಮ್ಮ ಸಮಾಜದಲ್ಲೂ ಇದ್ದಾರೆ ತಂದೆ ತಾಯನ್ನು ವೃದ್ದಾಶ್ರಮ ದಲ್ಲಿಟ್ಟು ಫಾದರ್ಸ್ ಡೇ,ಮದರ್ಸ್ ಡೇ ಗೆ ದೊಡ್ಡ ದೊಡ್ಡ ಡೈಲಾಗು ಗಳನ್ನ ಸ್ಟೇಟಸ್ ಅಲ್ಲಿ ಇಟ್ಟುಕೊಳ್ಳುವ ಮಂದಿ😠 ,ಹೆಂಡತಿಗೆ ರೂಮಲ್ಲಿ ಕೂಡಿ ಹಾಕಿ ಕುಡಿದು ಹೊಡೆದು ಸ್ಟೇಟಸ್ ಅಲ್ಲಿ ಅವಳ ಜನ್ಮದಿನದಂದು ದೊಡ್ಡ ಕವನವನ್ನೇ ಬರೆದು ಹಾಕುವ ವರು,😠ಅಕ್ಕ ತಂಗಿ,ಅಣ್ಣ ತಮ್ಮ ಎದುರಲ್ಲಿ ಸಿಕ್ಕರೆ ಕೆಟ್ಟ ಪದ ಬಳಸಿ ಬೈದಾಡಿ ಕೊಂಡು ರಾಕೀ ದಿನದಂದು ನನ್ನ ಪ್ರೀತಿಯ ತಂಗಿ ನನ್ನ ಪಾಲಿನ ದೇವರು ಈ ಅಣ್ಣ ಎನ್ನುವ ಮಂದಿ, ಗೊಂದು ಸ್ಪಷ್ಟ ಸಂದೇಶ ಕೊಡುತ್ತಿದ್ದೇನೆ ಕಿವಿ ಕೊಟ್ಟು ಕೇಳಿ ..🙏🙏

ಅಪ್ಪ,ಅಮ್ಮನ,ಪ್ರೀತಿಯ ದಿನ ಎಂದು ನಿಮ್ಮ ಮೊಬೈಲ್ನೊಂದಿಗಲ್ಲ ..ನಿಮ್ಮವರೊಂದಿಗೆ ಕಳೆಯುವುದ ಕಲಿಯಬೇಕಿದೆ 🙏🙏🙏🙏
🔴🔴🔴🔴🔴🔴

ನಿಮ್ಮ ಅನಿಸಿಕೆ ನನಗೆ ವಾಟ್ಸಪ್ ಮಾಡಿ ತಿಳಿಸಿ ..

9945130630 (ವಾಟ್ಸಪ್)
ಸಣ್ಣಕಥೆ:ಡಾ.ಶಶಿಕಿರಣ್ ಶೆಟ್ಟಿ
ಉಡುಪಿ,ಹೋಂ ಡಾಕ್ಟರ್ ಫೌಂಡೇಶನ್

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now