ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 37

ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 37

0Shares

ಅತಿ ಯಾದರೆ ಅಮೃತವೂ ವಿಷವೇ

ಅಂದು ಬೆಳ್ಳಂಬೆಳಿಗ್ಗೆ ಆಕೆ ಓಡೋಡಿ ಕ್ಲಿನಿಕ್ ಗೆ ಬಂದಿದ್ದಳು, ಎಂದೋ ಪಿನ್ ತಾಗಿ ಆಗಿದ್ದ ವಾಸಿ ಆಗಿದ್ದ ಗಾಯ ವನ್ನು ತೋರಿಸುತ್ತ ಸರ್ ಇದು ಕಳೆದ ವರ್ಷ ಆಗಿದ್ದ ಗಾಯ ವಾಸಿಆಗಿದೆ ಅಂದು ಇಂಜೆಕ್ಷನ್ ಟಿಟಿ
ತಗೊಂಡಿಲ್ಲ ಈಗ ಅದು ಸಮಸ್ಯೆ ಕೊಡಬಹುದೇ ಕೇಳಿದಳು🤔 ….

ಆಕೆಯನ್ನೊಮ್ಮೆ ಸೂಕ್ಷ್ಮ ವಾಗಿ ಗಮನಿಸಿದ್ದೆ,ಗಾಯ ಕೈಯಲ್ಲಿಲ್ಲ ತಲೆ ಒಳಗಿದೆ ಅನ್ನಿಸಿತ್ತು ಆಕೆಯ ಗಡಿಬಿಡಿ ,ಆತಂಕ ,ಭಯ ನೋಡಿ ಮೊದಲು ಆ ಗಾಯ ವಾಸಿ ಮಾಡಬೇಕೆಂದು ಯೋಚಿಸಿದೆ …..

ಆಕೆಯನ್ನು ಅಲ್ಲಿ ಕೂರಲು ಹೇಳಿ ಏನಾಯಿತು ಯಾಕಿಷ್ಟು ಗಾಬರಿ? ಎಂದು ಕೇಳಿದೆ ..ಆಕೆಯ ತಲೆ ಒಳಗೆ ಹೊಕ್ಕಿದ ಆ ಹುಳ ಯಾವ ಜಾತಿಯದ್ದು ಎಂಬ ಕುತೂಹಲ ಇತ್ತು ನನ್ನಲ್ಲಿ🤔 …

ಇದುವರೆಗೂ ನಿಂತು ಏದುಸಿರು ಬಿಡುತ್ತಿದ್ದವಳು ಕೂತು ಉಸಿರೆಳೆದು ಕೊಂಡು ಒಂದೇ ಉಸಿರಲ್ಲಿ ಹೇಳಿದ್ದಳು ” ಹಾಗಲ್ಲ ಸರ್ ,ಇವತ್ತು ಆ ಚಾನೆಲ್ ನ ಗುರೂಜಿ ಹೇಳಿದ್ದ ಭವಿಷ್ಯದಲ್ಲಿ ನನ್ನ ಭವಿಷ್ಯ ದುಃಖ ಕರ ವಾಗಿತ್ತು,😔ಹಳೆಯ ಗಾಯವೊಂದು ವೃಣ ವಾಗಿ ಮತ್ತೆ ಗ್ಯಾಂಗ್ರಿನ್ ಆಗಿ ನನ್ನ ಪಾಲಿಗೆಕಂಟಕ ವಾಗಲಿದೆ ಯಂತೆ ಸರ್😔 ..ಇದಿಷ್ಟು ಹೇಳುವಾಗ ಆಕೆಯ ಕಣ್ಣು ಬಾಯಿ ಹುಬ್ಬು ಗಂಟಲಿನ ವ್ಯತ್ಯಾಸ ನೋಡುತಿದ್ದರೆ ಆಪ್ತ ಮಿತ್ರ ಚಿತ್ರದ ನಾಗವಲ್ಲಿ ನೆನಪಾಗಿದ್ದಳು ನನಗೆ 🥱🥱.

ಈ ವಿಷಯದ ಬಗ್ಗೆ ಗಂಡ ಹೆಂಡಿರ ಗಹನವಾದ ಚರ್ಚೆಯ ಬಳಿಕ ಎಂದೂ ಗುಣವಾಗಿದ್ದ ಹಳೆಯ ಗಾಯ ಆ ಜ್ಯೋತಿಷಿ ಹೇಳಿದ ಮಾತಿಗೆ
ಪೂರಕವಾದ ಗಾಯ ಎಂಬ ನಿರ್ಧಾರಕ್ಕೆ ಬಂದಿದ್ದರು ಇವರು ..🥱

ತಲೆಯೊಳಗೆ ಅವಿತಿದ್ದ ಹುಳ ಸಿಕ್ಕಿದ್ದರಿಂದ..ಅದನ್ನು ತೆಗೆಯುವ ನನ್ನ ಉತ್ಸಾಹಕ್ಕೆ ತಲೆಯೊಳಗೆ ಮಾತುಗಳು ತಯಾರಾಗಿದ್ದವು ..ಒಂದರೆ ಕ್ಷಣ ನಾನು ವೈದ್ಯನೆಂಬುದ ಮರೆತು ಜ್ಯೋತಿಷಿಯಂತೆ ಮಾತಾಡಿದ್ದೆ.😂😂( ರೋಗಿ
ನಿಮಿತ್ತಂ ಬಹುಕೃತ ವೇಶಮ್😂)

“ಅಯ್ಯೋ ಆ ಮಾತಿನ ಅರ್ತ ಹಾಗಲ್ಲ ಹಳೆಯ ಗಾಯ ಅಂದರೆ ನಿಮ್ಮ ಕುಟುಂಬದ ಹಳೆಯ ಘಟನೆ ಅಥವಾ ವ್ಯಕ್ತಿ ,ನೀವಾಡಿದ್ದ ಮಾತು ಅದು ಈ ಬಾರಿ ಮತ್ತೆ ವೃಣ,ಗ್ಯಾನ್ಗ್ರಿನ್ ಆಗಿ ನಿಮ್ಮನ್ನು ಕಾಡಲಿದೆ ಅಂದರೆ ಇಲ್ಲಿ ಗಾಯ ,ವೃಣ ,ಗ್ಯಾಂಗ್ರಿನ್ ಕೇವಲ ನಿಮಗೆ ಅರ್ಥವಾಗುವ ಉದ್ದೇಶದಿಂದ ಬಳಸಿದ ಪದಗಳು ಅಂದರೆ ಈ ಹಳೆಯ ಘಟನೆ ಗಳು ಮತ್ತೆ ಮರುಕಳಿಸಬಹುದು ಎಂದು ಅಷ್ಟೇ ಎಂದೇ” ಖುಷಿ ಇಷ್ಟೇ ಈ ಬಾರಿ ಮಾತ್ರ ನಾಗವಲ್ಲಿ ಶಾಂತವಾಗಿದ್ದಳು😂

“ಒಹೋ ಹಾಗಾ ಸರ್ ಗೊತ್ತಾಗಿಲ್ಲ ನಂಗೆ …ಮನೆಯವರಿಗೆ ಹೇಳಬೇಕು ಅವರು ಬೆಳಿಗ್ಗೆಯಿಂದ ಟೆನ್ಶನ್ ಅಲ್ಲೇ ಇದ್ದಾರೆ” ಎಂದು ಹೋರಡಲು ಅನುವಾದಳು ..ಕೈನೋವು ಹೇಗಿದೆ ಈಗ ಎಂದಾಗ ..ನಿಮ್ಮ ಮಾತಲ್ಲೆ ಗುಣ ಮಾಡಿದಿರಿ ಸರ್ ಎಂದು😄 ..ಸುಂದರ ನಗೆ ಬೀರಿ ಹೋದಳು ನಾಗವಲ್ಲಿ

ಒಟ್ಟಲ್ಲಿ..
ಆಕೆಯ ತಲೆಯೊಳಗಿನ ಹುಳ..ಉಚಿತವಾಗಿ ತೆಗೆದಗೆದದ್ದು ಹಾಗೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆದ ತೃಪ್ತಿ ಮಾತ್ರ ನನ್ನಲ್ಲಿತ್ತು .🙏

ದಿನ ಭವಿಷ್ಯ,ವಾರಭವಿಷ್ಯದ ಹೆಸರಲ್ಲಿ ಮಾನಗೆಟ್ಟ ಟಿವಿ ಮಾಧ್ಯಮಗಳು ..ಅದು ಮಾಡಿ ಇದು ಮಾಡಿ ಎಂದು ಜನರ ಕಿವಿಯಲ್ಲಿ ಹೂವಿಡುವ, ಹಾಗೆಯೆ ಮುಂದುವರಿದು ನಿಮ್ಮ ಜಾತಕ ಸರಿಯಿಲ್ಲ ದೋಷ ಇದೆ ಶಾಂತಿ ಮಾಡಿ ಎಂದು ಬಡಜನರನ್ನು ದೋಚುವ😡 ಮಂದಿ,ವಾಸ್ತು,ಅಂಜನ,ಎಂದು ಲಕ್ಷಾಂತರ ಖರ್ಚು ಮಾಡಿಸುವ ಮಂದಿ😡 ಹಾಗೆ ಕೋವಿಡ್ 3 ನೆಯ ಅಲೆ ಮಕ್ಕಳಿಗೆ ಎಂದು ಹೆದರಿಸುವ ಹುಚ್ಚು ಹಿಡಿದ ಬುದ್ದಿ ಜೀವಿಗಳೇ ಮೊದಲು ನಿಮ್ಮಲ್ಲಿ ಸಾಧ್ಯ ವಿರುವುದೇ ಹೌದಾದರೆ ನಿಮ್ಮ ನಿಮ್ಮ ಜಾತಕ ಬರೆದಿಟ್ಟುಕೊಳ್ಳಿ …ಇಲ್ಲ ಕಿವಿ ಕೊಟ್ಟು ಕೇಳಿ ನಿಮ್ಮಿಂದ ದೋಚಲ್ಪಟ್ಟ ಜನರೇ ಒಟ್ಟಾಗಿ ನಿಮ್ಮ ಜಾತಕ ಬದಲಾಯಿಸುವ ದಿನ ದೂರ ಇಲ್ಲ .ಎಚ್ಚರ …😡😡

ಪ್ರೀತಿಯ ಜನರೇ ಮತ್ತೆ ಎಚ್ಚರಿಸುತಿದ್ದೇನೆ ….ಜಾತಕ ಜ್ಯೋತಿಷ್ಯ ಎಂದು ಬೇರೊಬ್ಬ ವ್ಯಕ್ತಿಯ ಮೇಲೆ ಅತಿಯಾದ ಅವಲಂಬನೆ ಬೇಡ🙏🙏 ಯಾಕಂದರೆ ….
ನೆನಪಿಡಿ

ಅತಿಯಾದರೆ ಅಮೃತವೂ ವಿಷವೇ 🙏🙏
🔴🔴🔴🔴🔴🔴

ನಿಮ್ಮ ಅನಿಸಿಕೆ ನನಗೆ ವಾಟ್ಸಪ್ ಮಾಡಿ ತಿಳಿಸಿ ..

9945130630 (ವಾಟ್ಸಪ್)
ಸಣ್ಣಕಥೆ:ಡಾ.ಶಶಿಕಿರಣ್ ಶೆಟ್ಟಿ
ಉಡುಪಿ,ಹೋಂ ಡಾಕ್ಟರ್ ಫೌಂಡೇಶನ್

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now